ಜಾಹೀರಾತಿಗಾಗಿ 4,300 ಕೋಟಿ ರೂ ವೆಚ್ಚ ಮಾಡಿದ ಮೋದಿ ಸರ್ಕಾರ- ಆರ್ ಟಿ ಐ ನಿಂದ ಮಾಹಿತಿ ಬಹಿರಂಗ

   

Last Updated : May 14, 2018, 08:40 PM IST
ಜಾಹೀರಾತಿಗಾಗಿ 4,300 ಕೋಟಿ ರೂ ವೆಚ್ಚ ಮಾಡಿದ ಮೋದಿ ಸರ್ಕಾರ- ಆರ್ ಟಿ ಐ ನಿಂದ ಮಾಹಿತಿ ಬಹಿರಂಗ  title=

ನವದೆಹಲಿ: ಕೇಂದ್ರ ಸರಕಾರವು ಇದುವರೆಗೂ ಜಾಹಿರಾತು ಮತ್ತು ಪ್ರಚಾರಕ್ಕೆ ಸುಮಾರು ರೂ. 4,343.26 ಕೋಟಿ ರೂ.ಗಳನ್ನು ಮಾಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿದುಬಂದಿದೆ.

ಮುಂಬೈ ಮೂಲದ ಮಾಹಿತಿ ಹಕ್ಕು ಕಾರ್ಯಾಕರ್ತ ಅನಿಲ್ ಗಾಲ್ಗಲಿ ಈ ಕುರಿತಾಗಿ ಸಲ್ಲಿಸಿರುವ ಅರ್ಜಿಗೆ  ಉತ್ತರಿಸಿರುವ ಹಣಕಾಸು ಸಲಹೆಗಾರ ಬಿಒಸಿ, ತಪನ್. ಜೂನ್ 2014 ರಿಂದ ಮಾರ್ಚ್ 2015 ರ ಅವಧಿಯಲ್ಲಿ  ಪ್ರಚಾರಕ್ಕಾಗಿ 953.54 ಕೋಟಿ ರೂ. ಮುದ್ರಣ ಪ್ರಚಾರಕ್ಕೆ 424.85 ಕೋಟಿ ರೂ. 448.97 ಕೋಟಿ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಹಾಗೂ ಹೊರಾಂಗಣ ಪ್ರಚಾರಕ್ಕಾಗಿ 79.72 ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ  

2015-16ರಲ್ಲಿ ಎಲ್ಲಾ ಮಾಧ್ಯಮಗಳ ವೆಚ್ಚವು ಗಣನೀಯವಾಗಿ ಹೆಚ್ಚಳ ಕಂಡಿದ್ದು. ಇವುಗಳಲ್ಲಿ, 510.69 ಕೋಟಿ ಮುದ್ರಣ ಮಾಧ್ಯಮಕ್ಕೆ, ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ  541.99 ಕೋಟಿ ರೂ. ಹೊರಾಂಗಣ ಪ್ರಚಾರಕ್ಕಾಗಿ 118.43 ಕೋಟಿ, ಒಟ್ಟು ರೂ. 1,171.11 ಕೋಟಿ, ರೂಗಳನ್ನು  ವೆಚ್ಚ ಮಾಡಲಾಗಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.

2016-17ರ ಅವಧಿಯಲ್ಲಿ ಸರ್ಕಾರ 1,263.15 ಕೋಟಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ಮುದ್ರಣ ವೆಚ್ಚವು  463.38 ಕೋಟಿ, ವಿದ್ಯುನ್ಮಾನ ಮಾಧ್ಯಮಕ್ಕೆರೂ.613.78 ಕೋಟಿ. ರೂ. ಮಿಸಲಿರಿಸಿದರೆ ಹೊರಾಂಗಣ ಪ್ರಚಾರಕ್ಕಾಗಿ 185.99 ಕೋಟಿ ಮೀಸಲಿಡಲಾಗಿದೆ. ಏಪ್ರಿಲ್ 2017-ಮಾರ್ಚ್ 2018 ಅವಧಿಯಲ್ಲಿ  ವಿದ್ಯುನ್ಮಾನ ಮಾಧ್ಯಮಗಳ  475.13 ಕೋಟಿ ವೆಚ್ಚ ಮಾಡಲಾಗಿದೆ. ಹೊರಾಂಗಣ ಪ್ರಚಾರ ವೆಚ್ಚದಲ್ಲಿ 147.10 ಕೋಟಿ ಕುಸಿತ ಕಂಡಿದೆ. 

ಮಾಹಿತಿ ಹಕ್ಕಿನ ಅಡಿಯಲ್ಲಿ ನೀಡಿದ ಉತ್ತರದಲ್ಲಿ  ಏಪ್ರಿಲ್-ಡಿಸೆಂಬರ್ 2017  ಅವಧಿಯ ಮಾಹಿತಿ ಇದ್ದು,  ಈ ಅವಧಿಯಲ್ಲಿ  ಸರ್ಕಾರವು  ಮುದ್ರಣ ಮಾಧ್ಯಮಕ್ಕೆ ಕೇವಲ 333.23 ಕೋಟಿರೂ ವೆಚ್ಚ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 955.46 ಕೋಟಿ. (ಏಪ್ರಿಲ್ 2017-ಮಾರ್ಚ್ 2018) ವೆಚ್ಚ ಮಾಡಲಾಗಿದೆ ಎಂದು ಅದು ಲಿಖಿತವಾಗಿ ಮಾಹಿತಿ ನೀಡಿದೆ. 

Trending News