ದಸರಾ ಉಡುಗೊರೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ದೇಶಾದ್ಯಂತ ಶುಕ್ರವಾರ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

Last Updated : Oct 19, 2018, 11:38 AM IST
ದಸರಾ ಉಡುಗೊರೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ title=

ನವದೆಹಲಿ: ಕೆಲದಿನಗಳಿಂದ ತೈಲದರ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ದಸರಾ ಗಿಫ್ಟ್ ದೊರೆತಿದ್ದು ದೇಶಾದ್ಯಂತ ಶುಕ್ರವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್‌ ಪ್ರತಿ ಲೀಟರ್‌ಗೆ 22 ಪೈಸೆ ಕಡಿಮೆಯಾಗಿದ್ದು, 83.27 ರೂ.ಗೆ ಆಗಿದೆ. ಅದರಂತೆ ಡೀಸೆಲ್‌ಗೆ 11 ಪೈಸೆ ಇಳಿಕೆಯಾಗಿ 75.97 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 82.38 75.48
ಕೋಲ್ಕತ್ತಾ 84.21 77.33
ಮುಂಬೈ 87.84 79.13
ಚೆನ್ನೈ 85.63 79.82
ಬೆಂಗಳೂರು 83.27 75.97

Trending News