'ಡಿಜಿಟಲ್ payment ಬಳಸಿ ಕೊರೋನಾದಿಂದ ಬಚಾವ್ ಆಗಿ'

ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯು ಕರೋನಾ ವೈರಸ್ ಅನ್ನು ತಡೆಯಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಒಂದು ಸೂತ್ರವನ್ನು ನೀಡಿದ್ದಾರೆ. ಡಿಜಿಟಲ್ ಪಾವತಿಗಳನ್ನು ಮಾಡಿ ಮತ್ತು ಕರೋನಾವನ್ನು ತಪ್ಪಿಸಿ ಎಂದವರು ಕರೆ ನೀಡಿದ್ದಾರೆ.

Last Updated : Mar 31, 2020, 11:23 AM IST
'ಡಿಜಿಟಲ್ payment ಬಳಸಿ ಕೊರೋನಾದಿಂದ ಬಚಾವ್ ಆಗಿ' title=

ನವದೆಹಲಿ: ಕರೋನಾ ವೈರಸ್ ಹರಡಲು ಕೆಲವು ಮಾಧ್ಯಮ ಬೇಕು. ಯಾವುದೇ ರೀತಿಯ ಸ್ಪರ್ಶ ಅಥವಾ ಸಂಪರ್ಕವು ಕರೋನವೈರಸ್ (Coronavirus) ಹರಡಲು ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ, ಹಣದ ವಹಿವಾಟಿನಿಂದಲೂ ಕರೋನಾ ವೈರಸ್  ಹರಡುತ್ತದೆ.

ಡಿಜಿಟಲ್ ಪಾವತಿಯನ್ನು ಅಳವಡಿಸಿಕೊಳ್ಳಲು ಮನವಿ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಗವರ್ನರ್ ಡಿಜಿಟಲ್ ಪಾವತಿಗಳನ್ನು ಮಾಡುವ ಮತ್ತು ಕರೋನಾವನ್ನು ತಪ್ಪಿಸುವ ಮಂತ್ರವನ್ನು ನೀಡಿದ್ದಾರೆ. ಕರೋನಾದ ಅವ್ಯವಸ್ಥೆಯ ಮಧ್ಯೆ ನಮ್ಮನ್ನು ಸುರಕ್ಷಿತವಾಗಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ಧ್ಯೇಯವಾಕ್ಯವು ಬಹಳ ಸಹಾಯಕವಾಗಿದೆ.

ಲಾಕ್‌ಡೌನ್ (Lockdown)  ಸಮಯದಲ್ಲಿ ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚು ಹೆಚ್ಚು ಅಳವಡಿಸಿಕೊಳ್ಳಬೇಕೆಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ದೇಶದ ಜನರಿಗೆ ಮನವಿ ಮಾಡಿದ್ದಾರೆ. ಇದರ ಮೂಲಕ, ಮನೆಯಲ್ಲಿಯೇ ಇರುವುದರಿಂದ ಎಲ್ಲಾ ರೀತಿಯ ವಹಿವಾಟುಗಳನ್ನು ಮಾಡಬಹುದು, ಇದು ಕರೋನಾ ಸೋಂಕಿನ ಅಪಾಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ಆರ್‌ಬಿಐ ಗವರ್ನರ್  ತಿಳಿಸಿದ್ದಾರೆ.

Coronavirus ಬಿಕ್ಕಟ್ಟಿನ ಮಧ್ಯೆ ರೆಪೊ ದರವನ್ನು 4.4% ಕ್ಕೆ ಇಳಿಸಿದ RBI

ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಾಹಿತಿ:
"ಕರೋನಾ ವೈರಸ್ ಸೋಂಕಿನಿಂದಾಗಿ ನಾವು ಕಠಿಣ ಹಂತವನ್ನು ಎದುರಿಸುತ್ತಿದ್ದೇವೆ". ಈ ಸಮಯದಲ್ಲಿ, ನಾವೆಲ್ಲರೂ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಡಿಜಿಟಲ್ ಪಾವತಿಯ ಮೂಲಕ, ನಾವು ಕರೋನಾ ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು ಇದಕ್ಕೆ ಸಹಾಯಕವಾಗುತ್ತವೆ ... ಆದ್ದರಿಂದ ಡಿಜಿಟಲ್ ಪಾವತಿಗಳನ್ನು ಮಾಡಿ, ನಿಮ್ಮನ್ನು ರಕ್ಷಿಸಿಕೊಳ್ಳಿ ' ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das)  ಕರೆ ನೀಡಿದ್ದಾರೆ.

ಡಿಜಿಟಲ್ ಪಾವತಿ ಎಲ್ಲೆಡೆ ಮಾನ್ಯ:
ಡಿಜಿಟಲ್ ಪಾವತಿಯ ಮೂಲಕ, ನೀವು ಮನೆಯಲ್ಲಿ ಕುಳಿತು ಎಲ್ಲಾ ರೀತಿಯ ದೈನಂದಿನ ವಸ್ತುಗಳನ್ನು ಖರೀದಿಸಲು ಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ, ಡಿಜಿಟಲ್ ಮೀಡಿಯಾದ ಸಲಹೆಯೆಂದರೆ ನೀವು ಡಿಜಿಟಲ್ ಪಾವತಿಗಳನ್ನು ಮಾಡಿ ಮತ್ತು ಲಾಕ್‌ಡೌನ್‌ನಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಿ.
 

Trending News