ಶುಕ್ರವಾರವೂ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್

ಶುಕ್ರವಾರದಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 80.85 ರೂ. ಮತ್ತು ಮುಂಬೈನಲ್ಲಿ 86.33 ರೂ.

Last Updated : Oct 26, 2018, 09:35 AM IST
ಶುಕ್ರವಾರವೂ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್ title=

ನವದೆಹಲಿ: ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಒಂಬತ್ತು ದಿನಗಳಿಂದ ನಿರಂತರವಾಗಿ ಕಡಿಮೆಯಾಗುತ್ತಿದ್ದು, ಸಾಮಾನ್ಯ ವ್ಯಕ್ತಿಗೆ ಪರಿಹಾರ ದೊರೆಯುತ್ತಿದೆ. ಶುಕ್ರವಾರದಂದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜನರಿಗೆ ಪರಿಹಾರ ನೀಡಿದೆ. ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್ಗೆ 25 ಪೈಸೆ ಇಳಿಕೆಯಾಗಿದೆ. ಇದರೊಂದಿಗೆ ಪೆಟ್ರೋಲ್ ದರ ಲೀಟರ್ಗೆ 80.85 ರೂ. ಡೀಸೆಲ್ ಬೆಲೆ ಲೀಟರ್ಗೆ 7 ಪೈಸೆಯಷ್ಟು ಕಡಿಮೆಯಾಗಿದೆ. ಡೀಸೆಲ್ ಬೆಲೆ ಲೀಟರ್ಗೆ 74.73 ರೂ. ಆಗಿದೆ.

ಶುಕ್ರವಾರ, ಮುಂಬೈಯಲ್ಲಿ ಪ್ರತಿ ಲೀಟರ್ಗೆ 25 ಪೈಸೆ ಇಳಿದ ನಂತರ ಪೆಟ್ರೋಲ್ ದರ ಲೀಟರ್ಗೆ 86.33 ರೂ. ಇದಲ್ಲದೆ ಡೀಸೆಲ್ ಬೆಲೆ ಲೀಟರ್ಗೆ 8 ಪೈಸೆ ಇಳಿಕೆಯಾಗಿದೆ. ಶುಕ್ರವಾರ ಡೀಸೆಲ್ ದರ ಪ್ರತಿ ಲೀಟರ್ಗೆ 78.33 ರೂ. ಇದೆ.

ಅದೇ ರೀತಿ, ಕೋಲ್ಕತ್ತಾದಲ್ಲಿ ಡೀಸೆಲ್ ದರ ಲೀಟರ್ಗೆ 5 ಪೈಸೆ ಇಳಿಕೆಯಾಗಿದ್ದು,  ಡೀಸೆಲ್ ಬೆಲೆ 76.65 ರೂ. ಇದ್ದರೆ,  ಲೀಟರ್ಗೆ 18 ಪೈಸೆಯಷ್ಟು ಪೆಟ್ರೋಲ್ ಅಗ್ಗವಾಗಿದ್ದು, ಪೆಟ್ರೋಲ್ ಬೆಲೆ 82.92 ರೂ. ಆಗಿದೆ.

Trending News