ನವದೆಹಲಿ: ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪುಲಿಟ್ಜರ್ ಪ್ರಶಸ್ತಿ ವಿಜೇತ ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಶುಕ್ರವಾರ ಕಂದಹಾರ್‌ನಲ್ಲಿ ಅಫ್ಘಾನಿಸ್ತಾನ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದಾರೆ.
I am deeply saddened by the untimely death of @dansiddiqui who, through his camera lens, had brought to us the devastation of pandemics, pogroms and humanitarian crises.
His death gives a message to the world once again to shun violence and terrorism in any form. #DanishSiddiqui pic.twitter.com/Q5GtqQGX7L
— M.K.Stalin (@mkstalin) July 16, 2021
ಡ್ಯಾನಿಶ್ ಸಿದ್ದಿಕಿ 2007 ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿವಿಯಿಂದ ಎಂ.ಎ.ಪದವಿಯನ್ನು ಪಡೆದಿದ್ದರು. ಅವರು 2018 ರ ಪುಲಿಟ್ಜೆರ್ ಪ್ರಶಸ್ತಿಯನ್ನು ಗೆದ್ದ ಏಳು ಸದಸ್ಯರ ರಾಯಿಟರ್ಸ್ ತಂಡದಲ್ಲಿದ್ದರು.ಅಫ್ಘಾನಿಸ್ತಾನದ ಕಂದಹಾರ್ ಜಿಲ್ಲೆಯ ಸ್ಪಿನ್ ಬೋಲ್ಡಾಕ್ ನ ಮುಖ್ಯ ಮಾರುಕಟ್ಟೆ ಪ್ರದೇಶವನ್ನು ಹಿಂಪಡೆಯಲು ಅಫಘಾನ್ ವಿಶೇಷ ಪಡೆಗಳು ಹೋರಾಡುತ್ತಿದ್ದಾಗ ಸಿದ್ದಿಕಿ ಮತ್ತು ಅಫಘಾನ್ (Afghanistan) ಹಿರಿಯ ಅಧಿಕಾರಿಯೊಬ್ಬರು ಹತ್ಯೆಗಿಡಾಗಿದ್ದಾರೆ.
ಇದನ್ನೂ ಓದಿ: Pakistan Is Militants Haven: ಪಾಕಿಸ್ತಾನವನ್ನು ತಾಲಿಬಾನಿ ಉಗ್ರರ ಸುರಕ್ಷಿತ ಅಡಗುತಾಣ ಎಂದು ಕರೆದ ಅಮೆರಿಕಾದ ಸಂಸತ್ತು
Deeply disturbed by the sad news of the killing of a friend, Danish Seddiqi in Kandahar last night. The Indian Journalist & winner of Pulitzer Prize was embedded with Afghan security forces. I met him 2 weeks ago before his departure to Kabul. Condolences to his family & Reuters. pic.twitter.com/sGlsKHHein
— Farid Mamundzay फरीद मामुन्दजई فرید ماموندزی (@FMamundzay) July 16, 2021
'ನಾವು ತುರ್ತಾಗಿ ಹೆಚ್ಚಿನ ಮಾಹಿತಿಯನ್ನು ಬಯಸುತ್ತಿದ್ದೇವೆ, ಈ ಪ್ರದೇಶದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ" ಎಂದು ರಾಯಿಟರ್ಸ್ ಅಧ್ಯಕ್ಷ ಮೈಕೆಲ್ ಫ್ರೀಡೆನ್‌ಬರ್ಗ್ ಮತ್ತು ಪ್ರಧಾನ ಸಂಪಾದಕ ಅಲೆಸ್ಸಾಂಡ್ರಾ ಗಲ್ಲೋನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ."ಡ್ಯಾನಿಶ್ ಒಬ್ಬ ಅತ್ಯುತ್ತಮ ಪತ್ರಕರ್ತ, ಶ್ರದ್ಧಾಭರಿತ ಪತಿ ಮತ್ತು ತಂದೆ ಮತ್ತು ಹೆಚ್ಚು ಪ್ರೀತಿಸುವ ಸಹೋದ್ಯೋಗಿ' ಎಂದು ಸಂತಾಪ ಸೂಚಿಸಿದ್ದಾರೆ.
'ಕಳೆದ ರಾತ್ರಿ ಕಂದಹಾರ್‌ನಲ್ಲಿ ಸ್ನೇಹಿತ ಡ್ಯಾನಿಶ್ ಸಿದ್ದಿಕಿ ಹತ್ಯೆಯ ದುಃಖದ ಸುದ್ದಿಯಿಂದ ತೀವ್ರ ದುಃಖಿತನಾಗಿದ್ದೆ. ಭಾರತೀಯ ಪತ್ರಕರ್ತ ಮತ್ತು ಪುಲಿಟ್ಜೆರ್ ಪ್ರಶಸ್ತಿ ವಿಜೇತರು ಅಫಘಾನ್ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರಿಂದ ಹಲ್ಲೆ ನಡೆಸಿದಾಗ ಅವರೊಂದಿಗೆ ಇದ್ದರು" ಎಂದು ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್, ಮಾಮುಂಡ್ಜೆ ಹೇಳಿದ್ದಾರೆ.
ಸಿದ್ದಿಕಿ ಅವರ ನಿಧನಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತೀವ್ರ ಸಂತಾಪ ಸೂಚಿಸಿದ್ದಾರೆ. "ಡ್ಯಾನಿಶ್ ಸಿದ್ದಿಕಿ ಅಸಾಧಾರಣ ಕೆಲಸವನ್ನು ಬಿಟ್ಟುಹೋಗಿದ್ದಾರೆ.ಅವರು ಛಾಯಾಗ್ರಹಣಕ್ಕಾಗಿ ಪುಲಿಟ್ಜೆರ್ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಕಂದಹಾರ್ನಲ್ಲಿ ಅಫಘಾನ್ ಪಡೆಗಳೊಂದಿಗೆ ಇದ್ದರು" ಎಂದು ಅವರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
With his powerful photographs, #DanishSiddiqui was what all journalists should aspire their work to be - consistently speaking truth to power and bringing to light realities that those in power want to hide.
May he rest in peace. pic.twitter.com/2SolWNbsg4
— Yogendra Yadav (@_YogendraYadav) July 16, 2021
2018 ರಲ್ಲಿ, ಡ್ಯಾನಿಶ್ ಸಿದ್ದಿಕಿ ಮತ್ತು ಅವರ ಸಹೋದ್ಯೋಗಿ ಅಡ್ನಾನ್ ಅಬಿಡಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿದ್ದಕ್ಕಾಗಿ ಫೀಚರ್ ಫೋಟೋಗ್ರಫಿಗಾಗಿ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಸಿದ್ದಿಕಿ 2020 ರ ದೆಹಲಿ ಗಲಭೆಗಳು, ಕೋವಿಡ್ -19 ಸಾಂಕ್ರಾಮಿಕ, 2015 ರಲ್ಲಿ ನೇಪಾಳ ಭೂಕಂಪ, 2016-17ರಲ್ಲಿ ಮೊಸುಲ್ ಕದನ, ಮತ್ತು ಹಾಂಗ್ ಕಾಂಗ್‌ನಲ್ಲಿ ನಡೆದ 2019–2020 ಪ್ರತಿಭಟನೆಗಳನ್ನು ಫೋಟೋಗ್ರಾಫಿ ಮೂಲಕ ದಾಖಲಿಸಿದ್ದರು.
ಮುಂಬೈ ಮೂಲದ ಸಿದ್ದಿಕಿ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅದೇ ಸಂಸ್ಥೆಯಲ್ಲಿ ಎಜೆಕೆ ಮಾಸ್ ಕಮ್ಯುನಿಕೇಷನ್ ರಿಸರ್ಚ್ ಸೆಂಟರ್ನಿಂದ ಮಾಸ್ ಕಮ್ಯುನಿಕೇಷನ್‌ನಲ್ಲಿ ಪದವಿ ಪಡೆದರು.ಡ್ಯಾನಿಶ್ ಸಿದ್ದಿಕಿ ಟೆಲಿವಿಷನ್ ಸುದ್ದಿ ವರದಿಗಾರನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ 2010 ರಲ್ಲಿ ರಾಯಿಟರ್ಸ್ ನಲ್ಲಿ ಇಂಟರ್ನ್ ಆಗಿ ಸೇರಿಕೊಂಡರು.
ಅವರ ಫೋಟೋಗಳು ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್, ದಿ ವಾಷಿಂಗ್ಟನ್ ಪೋಸ್ಟ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಜೀನ್ ಸೇರಿದಂತೆ ಜಾಗತಿಕ ಪ್ರಕಟಣೆಗಳಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ : House Door Vastu Tips: ಮನೆಯ ಬಾಗಿಲು ಹೀಗಿದ್ದರೆ ಸುಖ ಶಾಂತಿಗೆ ಕೊರತೆಯಿರುವುದಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.