Pakistan Is Militants Haven: ಪಾಕಿಸ್ತಾನವನ್ನು ತಾಲಿಬಾನಿ ಉಗ್ರರ ಸುರಕ್ಷಿತ ಅಡಗುತಾಣ ಎಂದು ಕರೆದ ಅಮೆರಿಕಾದ ಸಂಸತ್ತು

Pakistan Is Militants Haven - ಪಾಕಿಸ್ತನಾನ ತನ್ನ ದೇಶದಲ್ಲಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂಬ ಸಂಗತಿ ಭಾರತ ಹಲವು ಬಾರಿ ಪ್ರತಿಪಾದಿಸಿ, ಅದಕ್ಕೆ ಸೂಕ್ತ ದಾಖಲೆಗಳನ್ನು ಕೂಡ ಒದಗಿಸುತ್ತದೆ. 

Written by - Nitin Tabib | Last Updated : Apr 16, 2021, 12:39 PM IST
  • ತಾಲಿಬಾನ್ ಉಗ್ರರಿಗೆ ಪಾಕ್ ಸುರಕ್ಷಿತ ಅಡಗುತಾಣ.
  • ಅಮೆರಿಕಾದ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಸೆನೆಟರ್ ಜ್ಯಾಕ್ ರೀಡ್.
  • ಯುದ್ಧ ಪೀಡಿತ ಅಫ್ಘಾನಿಸ್ತಾನದಿಂದ ಸೆಪ್ಟೆಂಬರ್ 11ರವರೆಗೆ ಸೇನೆ ಹಿಂಪಡೆತ.
Pakistan Is Militants Haven: ಪಾಕಿಸ್ತಾನವನ್ನು ತಾಲಿಬಾನಿ ಉಗ್ರರ ಸುರಕ್ಷಿತ ಅಡಗುತಾಣ ಎಂದು ಕರೆದ ಅಮೆರಿಕಾದ ಸಂಸತ್ತು title=
Pakistan Is Militants Haven (File Photo)

ವಾಷಿಂಗ್ಟನ್: Pakistan Is Militants Haven - ಪಾಕಿಸ್ತನಾನ (Pakistan) ತನ್ನ ದೇಶದಲ್ಲಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂಬ ಸಂಗತಿ ಭಾರತ ಹಲವು ಬಾರಿ ಪ್ರತಿಪಾದಿಸಿ, ಅದಕ್ಕೆ ಸೂಕ್ತ ದಾಖಲೆಗಳನ್ನು ಕೂಡ ಒದಗಿಸುತ್ತದೆ. ಆದರೆ, ಇದೀಗ ಅಮೇರಿಕಾ ಕೂಡ ಪಾಕ್ ನ ಈ ಮುಖವಾಡ ಕಳಚಿಹಾಕಿದೆ. ಈ ಕುರಿತು ಅಲ್ಲಿನ ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಓರ್ವ ಹಿರಿಯ ಸಂಸದರು, ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್ ಉಗ್ರರಿಗೆ (Terrorism) ಅವರ ಬೇರುಗಳನ್ನು ಗಟ್ಟಿಗೊಳಿಸಲು ಪಾಕಿಸ್ತಾನ ಒದಗಿಸುವ ಸುರಕ್ಷಿತ ಆಶ್ರಯವೆ ಕಾರಣ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಬಿಡೆನ್ ಆಡಳಿತ ಯುದ್ಧ ಪೀಡಿತ ರಾಷ್ಟ್ರಗಳಿಂದ ಸೆಪ್ಟೆಂಬರ್ 11ರವರೆಗೆ ತನ್ನ ಎಲ್ಲಾ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳಲು ಯೋಜನೆ ರೂಪಿಸಿರುವುದಾಗಿ ಘೋಷಿಸಿರುವುದು ಇಲ್ಲಿ ಉಲ್ಲೇಖನೀಯ.

ಈ ಕುರಿತು ಸಂಸತ್ತಿನಲ್ಲಿ ಗುರುವಾರ ಹೇಳಿಕೆ ನೀಡಿರುವ ಸೆನೆಟ್ ಆರ್ಮ್ದ್ ಫೋರ್ಸೆಸ್ ಅಧ್ಯಕ್ಷ ಜ್ಯಾಕ್ ರೀಡ್ (US Senetor), "ಪಾಕಿಸ್ತಾನದಲ್ಲಿ ತಾಲಿಬಾನಿ ಉಗ್ರರಿಗೆ ಸಿಗುತ್ತಿರುವ ಸುರಕ್ಷಿತ ತಾಣಗಳನ್ನು ನಾಶಪಡಿಸಲು ಅಮೇರಿಕ ವಿಫಲವಾಗಿರುವುದೇ ತಾಲಿಬಾನ್ ಯಶಸ್ಸಿಗೆ ಒಂದು ಪ್ರಮುಖ ಕಾರಣವಾಗಿದೆ" ಎಂದಿದ್ದಾರೆ.

ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಅಧ್ಯಯನವನ್ನು ಉಲ್ಲೇಖಿಸಿ ಮಾತನಾಡಿರುವ ರೀಡ್, ಪಾಕಿಸ್ತಾನ ತಾಲಿಬಾನಿಗಳಿಗೆ ಒಂದು ಸುರಕ್ಷಿತ ತಾಣವಾಗಿರುವುದರ ಜೋಗೆತೆ ಅಲ್ಲಿನ ಇಂಟರ್ ಸೇರ್ವಿಸೆಸ್ ಇಂಟೆಲಿಜೆನ್ಸ್ (ISI)ಗಳಂತಹ sಸಂಘಟನೆಗಳ ಮೂಲಕ ಅಲ್ಲಿನ ಸರ್ಕಾರದ ಬೆಂಬಲ ಸಿಗುವುದು ತಾಲಿಬಾನ್ ಯುದ್ಧವನ್ನು ಮುಂದುವರೆಸಲು ಆವಶ್ಯಕವಾಗಿದೆ ಹಾಗೂ ಈ ಸುರಕ್ಷಿತ ತಾಣವನ್ನು ನಷ್ಟಗೊಳಿಸುವಲ್ಲಿ ಅಮೆರಿಕ ವಿಫಲವಾಗಿರುವುದು ಈ ಯುದ್ಧದಲ್ಲಿ ವಾಶಿಂಗ್ಟನ್ ನ ಅತಿ ದೊಡ್ಡ ಲೋಪವಾಗಿದೆ" ಎಂದು ಹೇಳಿದ್ದಾರೆ. 

"ಆಫ್ಘಾನ್ ಅಧ್ಯಯನ ಸಮೂಹ ಹೇಳಿರುವಂತೆ ಉಗ್ರವಾದಕ್ಕಾಗಿ ಈ ಸುರಕ್ಷತೆ ಅಡಗುತಾಣ ಅವಶ್ಯಕವಾಗಿದ್ದು, ಪಾಕಿಸ್ತಾನದ ISI ಅವಕಾಶಗಳ ಲಾಭ ಪಡೆಯಲು ಅಮೇರಿಕಾದೊಂದಿಗೆ ಸಹಕರಿಸುವ ನಾಟಕವಾದಿ ತಾಲಿಬಾನ್ ಗೆ ನೆರವು ಒದಗಿಸಿದ್ದಾರೆ" ಎಂದು ರೀಡ್ ಹೇಳಿದ್ದಾರೆ. 

2018ರ ಅಂದಾಜಿನ ಪ್ರಕಾರ ಪಾಕಿಸ್ತಾನದಲ್ಲಿ ಪ್ರತ್ಯಕ್ಷ ರೂಪದಲ್ಲಿ ಸೇನೆ ಹಾಗೂ ಗುಪ್ತಚರ ಇಲಾಖೆಯ ಸಹಕಾರದ ಹಿನ್ನೆಲೆ ಅಮೇರಿಕಾ ಸೈನಿಕರು, ಅಫ್ಘಾನಿಸ್ತಾನದ ಭದ್ರತಾಪಡೆ ಸಿಬ್ಬಂದಿ ಹಾಗೂ ನಾಗರಿಕರು ಹತರಾಗಿದ್ದು, ಇದು ಅಫ್ಘಾನಿಸ್ಥಾನ ದಲ್ಲಿ ವ್ಯಾಪಕ ಹಾನಿಗೆ ಕಾರಣವಾಗಿದೆ ಎನ್ನಲಾಗಿದೆ. ತಾಲಿಬಾನ್ ಗೆ ಪಾಕಿಸ್ತಾನದ ಈ ಬೆಂಬಲ ಅಮೆರಿಕಾದ ನೆರವಿಗೆ ವಿರೋಧವಾಗಿದೆ. ಅವರಿಗೆ ತನ್ನ ಪಾಕಿಸ್ತಾನದ ವಾಯು ಕ್ಷೇತ್ರ ಹಾಗೂ ಇತರೆ ಸಾಧನಗಳ ಬಳಕೆಗೆ ಅನುಮತಿ ನೀಡಲಾಗಿದ್ದು, ಇದಕ್ಕಾಗಿ ಅಮೇರಿಕಾ ಭಾರಿ ಆರ್ಥಿಕ ಸಹಾಯ ಒದಗಿಸಿದೆ" ಎಂದು ರೀಡ್ ಹೇಳಿದ್ದಾರೆ.

ಇದನ್ನೂ ಓದಿ-Corona Vaccine: ಅಮೆರಿಕದ ನಂತರ ಈ ದೇಶದಲ್ಲೂ Johnson & Johnson ಲಸಿಕೆ ನಿಷೇಧ

"ಪಾಕಿಸ್ತಾನ ಎರಡೂ ಕಡೆಗಳಿಂದ ಲಾಭಪಡೆಯುವ ಪ್ರಯತ್ನ ನಡೆಸಿದೆ" ಎಂದು ರೀಡ್ ಹೇಳಿದ್ದಾರೆ. ಇವೆಲ್ಲವುಗಳ ನಡುವೆ ಪಾಕಿಸ್ತಾನ ತುಂಬಾ ಶಿಥಿಲಗೋಳ್ಳುತ್ತಿದ್ದು. ಪರಮಾಣು ಅಸ್ತ್ರಗಳನ್ನು ಹೊಂದಿರುವ ಹಿನ್ನೆಲೆ ಇದು ತುಂಬಾ ಅಪಾಯಕೈಯಾಗಿದೆ ಎಂದು ರೀಡ್ ಹೇಳಿದ್ದಾರೆ. ಇವೆಲ್ಲವೂಗಳ ಹೊರತಾಗಿ ಪಾಕಿಸ್ತಾನ ತನ್ನ ನೆರೆರಾಷ್ಟ್ರ ಭಾರತದೊಂದಿಗೆ ದೀರ್ಘಕಾಲದಿಂದ ಉತ್ತಮ ಸಂಬಂಧ ಹೊಂದಿಲ್ಲ. ಭಾರತ (India) ಕೂಡ ಪರಮಾಣು ಅಸ್ತ್ರಗಳನ್ನು ಹೊಂದಿದ ರಾಷ್ಟ್ರವಾಗಿದೆ. ದೀರ್ಘಕಾಲದಿಂದ ದಕ್ಷಿಣ ಏಷ್ದಯಾಲ್ಲಿ ಈ ಎರಡೂ ರಾಷ್ಟ್ರಗಳು ಸಂಘರ್ಷಕ್ಕೆ ಕಾರಣವಾಗಿವೆ ಎಂದು ಸೆನೆಟರ್ ಹೇಳಿದ್ದಾರೆ.

ಇದನ್ನೂ ಓದಿ- Pakistan: ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದ ಬ್ರಿಟನ್

ಇದಕ್ಕೂ ಮೊದಲು ಸ್ಥಳೀಯ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಜೋ ಬಿಡೆನ್ ಸಂಘರ್ಷ ಪ್ರಭಾವಿತ ಅಫ್ಘಾನಿಸ್ತಾನದಿಂದ ಸೆಪ್ಟೆಂಬರ್ 11ರವರೆಗೆ ಅಮೇರಿಕಾ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳಲಾಗುವುದು ಹಾಗೂ ಎಮೆರಿಕಾದ ಈ ದೀರ್ಘಾವಧಿ ಸಂಘರ್ಷಕ್ಕೆ ಅಂತ್ಯಹಾಡಲಾಗುವುದು ಎಂದು ಹೇಳಿದ್ದರು.

ಇದನ್ನೂ ಓದಿ-Pakistanಕ್ಕೆ ಬ್ಲಾಂಕ್ ಚೆಕ್ ಆಫರ್ ನೀಡಿಯ ರಷ್ಯಾ ಅಧ್ಯಕ್ಷ Vladimir Putin! ಪಾಕ್ ನಲ್ಲಿ ಕೋಲಾಹಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News