BJP-RSS ನಿಯಂತ್ರಣದಲ್ಲಿರುವ Facebook-WhatsApp ದ್ವೇಷ-ಸುಳ್ಳುಸುದ್ದಿ ಹಬ್ಬಿಸುತ್ತಿವೆ: ರಾಹುಲ್

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ಜನತಾ ಪಕ್ಷ (BJP) ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ಗಳನ್ನು ಮತ್ತೊಮ್ಮೆ ಗುರಿಯಾಗಿಸಿದ್ದಾರೆ. ಭಾರತದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಗಳು ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ನಿಯಂತ್ರಿಸುತ್ತಿವೆ ಎಂದು ರಾಹುಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅವುಗಳ ಮೂಲಕ ಫೇಕ್ ನ್ಯೂಸ್ ಹಾಗೂ ದ್ವೇಷಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Last Updated : Aug 16, 2020, 05:08 PM IST
BJP-RSS ನಿಯಂತ್ರಣದಲ್ಲಿರುವ Facebook-WhatsApp ದ್ವೇಷ-ಸುಳ್ಳುಸುದ್ದಿ ಹಬ್ಬಿಸುತ್ತಿವೆ: ರಾಹುಲ್  title=

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ಜನತಾ ಪಕ್ಷ (BJP) ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ಗಳನ್ನು ಮತ್ತೊಮ್ಮೆ ಗುರಿಯಾಗಿಸಿದ್ದಾರೆ. ಭಾರತದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಗಳು ಫೇಸ್‌ಬುಕ್ ಮತ್ತು ವಾಟ್ಸಾಪ್ ಅನ್ನು ನಿಯಂತ್ರಿಸುತ್ತಿವೆ ಎಂದು ರಾಹುಲ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅವುಗಳ ಮೂಲಕ ಫೇಕ್ ನ್ಯೂಸ್ ಹಾಗೂ ದ್ವೇಷಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ ಬಿಜೆಪಿ ಹಾಗೂ RSS ಅನ್ನು ಗುರಿಯಾಗಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಫೇಸ್ ಬುಕ್ ಹಾಗೂ ವಾಟ್ಸ್ ಆಪ್ ಮೇಲೆ ಭಾರತದಲ್ಲಿ ಬಿಜೆಪಿ-RSS ಕಬ್ಜಾ ಇದೆ. ಅವರು ಇವುಗಳ ಮೂಲಕ ಫೇಕ್ ನ್ಯೂಸ್ ಹಾಗೂ ದ್ವೇಷ ಹಬ್ಬಿಸುವ ಕೆಲಸ ಮಾಡುತ್ತಿವೆ. ಮತದಾರರನ್ನು ಪ್ರಭಾವಿತಗೊಳಿಸಲು ಅವರು ಇವುಗಳ ಬಳಕೆ ಮಾಡುತ್ತಾರೆ" ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ದ್ವೇಷವನ್ನು ಹರಡುವ ಅನೇಕ ಜನರು ಭಾರತದಲ್ಲಿದ್ದಾರೆ ಎಂದು ಫೇಸ್‌ಬುಕ್ ಉದ್ಯೋಗಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ವರ್ಚುವಲ್ ಜಗತ್ತಿನಲ್ಲಿ ದ್ವೇಷವನ್ನು ಪೋಸ್ಟ್ ಮಾಡುವುದರಿಂದ ನೈಜ ಜಗತ್ತಿನಲ್ಲಿ ಹಿಂಸೆ ಮತ್ತು ಉದ್ವೇಗ ಹೆಚ್ಚಾಗುತ್ತದೆ ಎಂದು ನೌಕರರು ಹೇಳಿದ್ದಾರೆ.

ವಿಷಯ ಏನು?
ರೋಹಿಂಗ್ಯಾ ಮುಸ್ಲಿಮರನ್ನು ಗುಂಡಿಕ್ಕಬೇಕು  ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಟಿ.ರಾಜಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ ಎಂದು ಯುಎಸ್ ಪತ್ರಿಕೆ ವಾಲ್ ಸ್ಟ್ರೀಟ್ ಜನರಲ್ ವರದಿ ಮಾಡಿದೆ. ಅವರು ತಮ್ಮ ಹೇಳಿಕೆಯಲ್ಲಿ ಮುಸ್ಲಿಮರನ್ನು ದೇಶದ್ರೋಹಿ ಎಂದು ಉಲ್ಲೇಖಿಸಿದ್ದಾರೆ ಹಾಗೂ ಮಸೀದಿ ಉರುಳಿಸುವ ಬೆದರಿಕೆ ಕೂಡ ಒಡ್ಡಿದ್ದಾರೆ.  ಇದನ್ನು ಫೇಸ್‌ಬುಕ್ ಉದ್ಯೋಗಿಯೊಬ್ಬರು ವಿರೋಶಿಸಿದ್ದರು ಹಾಗೂ ಇದು ಕಂಪನಿಯ ನಿಯಮಗಳಿಗೆ ವಿರುದ್ಧವಾಗಿದೆ ಎಂದಿದ್ದರು.  ಆದರೆ, ಇದರ ವಿರುದ್ಧ ಭಾರತದ ಕಂಪನಿಯ ಹಿರಿಯ ಉದ್ಯೋಗಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಇದೀಗ ಫೇಸ್‌ಬುಕ್‌ನ ವಿಶ್ವಾಸಾರ್ಹತೆಯ ಬಗ್ಗೆ ಕೂಡ ಪ್ರಶ್ನೆ ಏಳಲಾರಂಭಿಸಿವೆ ಎಂದಿದ್ದಾರೆ.

Trending News