ನವದೆಹಲಿ : ಇಂದು ಬೆಳಿಗ್ಗೆ ಬಾಲಿವುಡ್ ನಟ ಸೋನು ಸೂದ್ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಸೋನು ಸೂದ್ ಮತ್ತು ಕೇಜ್ರಿವಾಲ್ ಅವರ ಈ ಭೇಟಿಯೋ ಹಲವು ಅರ್ಥಗಳಿಗೆ ಎಡೆ ಮಾಡಿ ಕೊಟ್ಟಿದೆ. ಈ ಭೇಟಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸೋನು ಸೂದ್ ಕೊರೋನಾ ಮೊದಲ ಅಲೆಯ ಸಮಯದಿಂದ ಜನರಿಗೆ ಸಾಕಷ್ಟು ಸಹಾಯ ಮಾಡುತ್ತ ಬಂದಿದ್ದಾರೆ.
ಸೋನು ಸೂದ್ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind kejriwal) ಅವರ ಭೇಟಿಯಿಂದ ಅನೇಕ ರಾಜಕೀಯ ಅರ್ಥಗಳು ಹುಟ್ಟಿಕೊಂಡಿವೆ. ಈ ಸಭೆಯು ಪಂಜಾಬ್ ವಿಧಾನಸಭಾ ಚುನಾವಣೆಯೊಂದಿಗೆ ಸಂಬಂಧ ಹೊಂದಿದೆ. ಇನ್ನು ಸ್ವಲ್ಪ ದಿನದಲ್ಲಿ ದೇಶದ 5 ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆ ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು. ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ರಾಜಕೀಯ ನೆಲೆಯನ್ನು ಹುಡುಕುವಲ್ಲಿ ತೊಡಗಿದೆ. ಕೇಜ್ರಿವಾಲ್ ಶಿರೋಮಣಿ ಅಕಾಲಿ ದಳದ ನಾಯಕ ಸೇವಾ ಸಿಂಗ್ ಶೇಖ್ವಾನ್ ಅವರನ್ನು ಕೂಡ ಭೇಟಿಯಾಗಿದ್ದಾರೆ.
ಇದನ್ನೂ ಓದಿ : UIDAI Aadhaar Alert: ನಿಮ್ಮ ಆಧಾರ್‌ಗೆ ಎಷ್ಟು ಫೋನ್ ನಂಬರ್‌ಗಳನ್ನು ಲಿಂಕ್ ಮಾಡಲಾಗಿದೆ ಗೊತ್ತೇ!
ಸೋನು ಸೂದ್ ಪಂಜಾಬ್‌ನ ಮೊಗಾ ಜಿಲ್ಲೆಯ ನಿವಾಸಿ. ಸೋನು ಸೂದ್(Sonu Sood) ಆಮ್ ಆದ್ಮಿ ಪಕ್ಷಕ್ಕೆ ಸೇರಿದರೆ, ವಿರೋಧ ಪಕ್ಷಗಳು ಕೂಡ ಅವರ ಹೆಸರಿನಲ್ಲಿ ಪ್ರಶ್ನೆ ಎತ್ತುವದಿಲ್ಲ. ಆಮ್ ಆದ್ಮಿ ಪಕ್ಷವು ಪಂಜಾಬ್ ಚುನಾವಣೆಯನ್ನ ಸೋನು ಸೂದ್ ಮುಂದಿಟ್ಟುಕೊಂಡು ಎದುರಿಸಲಿದೆ ಎಂಬ ಮಾತು ಕೇಳಿ ಬರುತ್ತಿವೆ. ಪಂಜಾಬ್‌ನಲ್ಲಿ ಎಎಪಿಯ ಸರ್ಕಾರ ಬಂದರೆ ಸೋನು ಸೂದ್ ಅವರನ್ನು ಸಿಎಂ ಮಾಡಬಹುದೆಂಬ ಊಹಾಪೋಹಗಳು ಹರಿದಾಡುತ್ತಿವೆ.
ಇದನ್ನೂ ಓದಿ : Coronavirus In India: ಕೊರೊನಾ 3ನೇ ಅಲೆ ಆರಂಭವೇ? ಮತ್ತೆ 40 ಸಾವಿರ ಗಡಿ ದಾಟಿದ ಹೊಸ ಪ್ರಕರಣಗಳ ಸಂಖ್ಯೆ, ಸಕ್ರೀಯ ಪ್ರಕರಣಗಳಲ್ಲೂ ಏರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.