ನವದೆಹಲಿ : ರೈಲ್ವೆ ಟಿಕೆಟ್ ರದ್ದು ಮಾಡಿದಾಗ ಟಿಕೆಟ್ ಕಾಯ್ದಿರಿಸುವ ವೇಳೆ ಪಾವತಿಸಲಾಗುವ ಕನ್ವಿನಿಯನ್ಸ್ ಫೀ ಅನ್ನು ಮರುಪಾವತಿಸುವುದಿಲ್ಲ ಎಂದು ಭಾರತೀಯ ರೈಲ್ವೆ (Indian railways) ಸ್ಪಷ್ಟಪಡಿಸಿದೆ.
21 ದಿನಗಳ ಲಾಕ್ಡೌನ್ (Lockdown) ಜಾರಿಗೆ ಬರುವ ಮೂರು ದಿನಗಳ ಮೊದಲು ಮಾರ್ಚ್ 22 ರಂದು ತನ್ನ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ್ದ ಭಾರತೀಯ ರೈಲ್ವೆ ಸದ್ಯ ಅನಿರ್ದಿಷ್ಟಾವಧಿಗೆ ಟಿಕೆಟ್ ಕಾಯ್ದಿರಿಸುವಿಕೆಯನ್ನು ಸ್ಥಗಿತಗೊಳಿಸಿದೆ. ಏತನ್ಮಧ್ಯೆ ಮಾರ್ಚ್ 22 ಮತ್ತು ಏಪ್ರಿಲ್ 14ರ ನಡುವೆ ಪ್ರಯಾಣಕ್ಕಾಗಿ ಕಾಯ್ದಿರಿಸಿದ 55 ಲಕ್ಷ ಟಿಕೆಟ್ಗಳಿಗೆ 830 ಕೋಟಿ ರೂ.ಗಳನ್ನು ಹಿಂದಿರುಗಿಸಲಾಗುವುದು ಎಂದು ಉನ್ನತ ರೈಲ್ವೆ ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕೊರೊನಾವೈರಸ್ (Coronavirus) ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಧಿಸುವ ಮೊದಲು ಪ್ರಯಾಣಿಕರು ಕಾಯ್ದಿರಿಸಿದ 94 ಲಕ್ಷ ಟಿಕೆಟ್ಗಳನ್ನು ರದ್ದುಗೊಳಿಸುವುದರಿಂದ ಭಾರತೀಯ ರೈಲ್ವೆಗೆ 1,490 ಕೋಟಿ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯ ಜನರ ಓಡಾಟಕ್ಕೆ ಸಿಗಲ್ಲ ಯಾವುದೇ ವಿಮಾನ, ರೈಲು: ಯಾವ ಷರತ್ತುಗಳ ಅಡಿಯಲ್ಲಿ ಸಿಗಲಿದೆ ವಿನಾಯಿತಿ
ಇದಲ್ಲದೆ ಲಾಕ್ಡೌನ್ ಅನ್ನು ಏಪ್ರಿಲ್ 15 ರಿಂದ ಮೇ 3ರವರೆಗೆ ವಿಸ್ತರಿಸುವುದರಿಂದ ಕಾಯ್ದಿರಿಸಿದ 39 ಲಕ್ಷ ಟಿಕೆಟ್ಗಳಿಗೆ 660 ಕೋಟಿ ರೂ. ಅನ್ನು ಸಹ ಹಿಂದಿರುಗಿಸಲಾಗುವುದು ಎಂದು ರೈಲ್ವೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಲಾಕ್ಡೌನ್ ವಿಸ್ತರಣೆ ಅವಧಿಯಲ್ಲಿ ಪ್ರಯಾಣಕ್ಕಾಗಿ ಕಾಯ್ದಿರಿಸಿದ ಟಿಕೆಟ್ಗಳ ಸಂಪೂರ್ಣ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಭಾರತೀಯ ರೈಲ್ವೆ ಕೂಡ ಹೇಳಿದೆ. ಮರುಪಾವತಿಸಿದ ಮೊತ್ತವನ್ನು ಆನ್ಲೈನ್ನಲ್ಲಿ ಕಾಯ್ದಿರಿಸುವ ಪ್ರಯಾಣಿಕರ ಖಾತೆಗೆ ನೇರವಾಗಿ ಕಳುಹಿಸಲಾಗುವುದು ಎಂದು ರೈಲ್ವೆ ತಿಳಿಸಿದ್ದು, ಮೀಸಲಾತಿ ಕೌಂಟರ್ನಲ್ಲಿ ಟಿಕೆಟ್ ಕಾಯ್ದಿರಿಸುವವರು ಜುಲೈ 31 ರವರೆಗೆ ಹಣವನ್ನು ಹಿಂಪಡೆಯಬಹುದು ಎಂದು ಅದು ತಿಳಿಸಿದೆ.
COVID-19: 13 ಲಕ್ಷ ಉದ್ಯೋಗಿಗಳನ್ನು ರಕ್ಷಿಸಲು ಪ್ರೋಟೋಕಾಲ್ ಸಿದ್ಧಪಡಿಸಿದ ಭಾರತೀಯ ರೈಲ್ವೆ
ಲಾಕ್ಡೌನ್ ವಿಸ್ತರಣೆ ಬಗ್ಗೆ ಪ್ರಧಾನ ಮಂತ್ರಿಯ ಘೋಷಣೆಯ ನಂತರ ಭಾರತೀಯ ರೈಲ್ವೆ ತನ್ನ ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಮುಂದೂಡಿದೆ. ಮುಂದಿನ ಆದೇಶದವರೆಗೆ ಇ-ಟಿಕೆಟ್ ಸೇರಿದಂತೆ ಯಾವುದೇ ಟಿಕೆಟ್ನ ಮುಂಗಡ ಕಾಯ್ದಿರಿಸುವಿಕೆಯನ್ನು ಮಾಡಲಾಗುವುದಿಲ್ಲ ಎಂದು ರೈಲ್ವೆ ತಿಳಿಸಿದೆ.