ಬಜೆಟ್ ಬಳಿಕ ಶನಿವಾರದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ!

 ದೆಹಲಿಯಲ್ಲಿ ಶನಿವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.45 ರೂಪಾಯಿ ಹೆಚ್ಚಾಗಿದ್ದು ಪ್ರಸ್ತುತ ಬೆಲೆ 72.96 ರೂ. ಇದೆ.

Last Updated : Jul 6, 2019, 11:21 AM IST
ಬಜೆಟ್ ಬಳಿಕ ಶನಿವಾರದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ! title=

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಕೇಂದ್ರ ಬಜೆಟ್ ಮಂಡಿಸಿದ ಬೆನ್ನಲ್ಲೇ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ದೆಹಲಿಯಲ್ಲಿ ಶನಿವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.45 ರೂಪಾಯಿ ಹೆಚ್ಚಾಗಿದ್ದು ಪ್ರಸ್ತುತ ಬೆಲೆ 72.96 ರೂ. ಇದೆ. ಪೆಟ್ರೋಲ್ ಜೊತೆಗೆ ಡೀಸೆಲ್ ಬೆಲೆಯಲ್ಲೂ ಶನಿವಾರ ಭಾರಿ ಏರಿಕೆ ಕಂಡುಬಂದಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 2.36 ರೂ. ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 66.69 ರೂ. ಆಗಿದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ. 

ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ನವದೆಹಲಿಯಲ್ಲಿ 72.96 ರೂ., ಕೊಲ್ಕತ್ತಾದಲ್ಲಿ 75.15 ರೂ., ಮುಂಬೈನಲ್ಲಿ 78.57 ರೂ, ಚೆನ್ನೈನಲ್ಲಿ 75.76 ರೂ., ಬೆಂಗಳೂರಿನಲ್ಲಿ 75.37 ರೂ., ಹೈದರಾಬಾದ್ ನಲ್ಲಿ 77.48 ರೂ ಹಾಗೂ ತಿರುವನಂತಪುರಂನಲ್ಲಿ 76.40 ರೂ. ಇದೆ.

ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ನವದೆಹಲಿಯಲ್ಲಿ 66.69 ರೂ., ಕೊಲ್ಕತ್ತಾದಲ್ಲಿ 68.59 ರೂ., ಮುಂಬೈನಲ್ಲಿ 69.90 ರೂ, ಚೆನ್ನೈನಲ್ಲಿ 70.53 ರೂ., ಬೆಂಗಳೂರಿನಲ್ಲಿ 68.88 ರೂ., ಹೈದರಾಬಾದ್ ನಲ್ಲಿ 72.62 ರೂ ಹಾಗೂ ತಿರುವನಂತಪುರಂನಲ್ಲಿ 71.81 ರೂ. ಇದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.

Trending News