United Nations ನಲ್ಲಿ ನಡೆಯಲಿಲ್ಲ ನೇಪಾಳದ ಆಟ, ಒಲಿ ಸರ್ಕಾರಕ್ಕೆ ಭಾರಿ ಹಿನ್ನಡೆ

ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ವಿಶ್ವಸಂಸ್ಥೆ, ಆಡಳಿತಾತ್ಮಕ ಉದ್ದೇಶಗಳಿಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತ, ಪಾಕಿಸ್ತಾನ ಅಥವಾ ಚೀನಾ ನಕ್ಷೆಯನ್ನು ಬಳಕೆ ಮಾಡಲಾಗುವುದಿಲ್ಲ ಎಂದಿದೆ. ಜೊತೆಗೆ ನೇಪಾಳ ಈ ವಿಷಯವನ್ನು ವಿಶ್ವಸಂಸ್ಥೆಯ ಸದನದಲ್ಲಿ ಪ್ರಸ್ತಾಪಿಸುವುದು ಆಗ ಕೇವಲ ರಾಜತಾಂತ್ರಿಕ ಪ್ರೋಟೋಕಾಲ್ ಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದೂ ಕೂಡ ವಿಶ್ವಸಂಸ್ಥೆ ಹೇಳಿದೆ.

Last Updated : Aug 2, 2020, 03:52 PM IST
United Nations ನಲ್ಲಿ ನಡೆಯಲಿಲ್ಲ ನೇಪಾಳದ ಆಟ, ಒಲಿ ಸರ್ಕಾರಕ್ಕೆ ಭಾರಿ ಹಿನ್ನಡೆ  title=

ನವದೆಹಲಿ: ಅಧಿಕೃತ ಕೆಲಸಗಳಿಗಾಗಿ ನೇಪಾಳದ ಮಂಡಿಸಿರುವ ಹೊಸ ವಿವಾದಾತ್ಮಕ ನಕ್ಷೆಯನ್ನು ಪರಿಗಣಿಸಲಾಗುವುದಿಲ್ಲ ಅಥವಾ ಗುರಿತಿಸಲಾಗುವುದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ವಾಸ್ತವವಾಗಿ, ಈ ವರ್ಷ ನೇಪಾಳ ಸಿದ್ಧಪಡಿಸಿರುವ ಹೊಸ ರಾಜಕೀಯ ನಕ್ಷೆಯಲ್ಲಿ, ಅದು ಭಾರತಕ್ಕೆ ಸೇರಿರುವ ಪ್ರದೇಶಗಳಾದ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಾಲಾ ಪಾನಿಯನ್ನು ನೇಪಾಳಕ್ಕೆ ಸೇರಿದ ಭಾಗಗಳೆಂದು ವಿವರಿಸಿದೆ. ಭಾರತವು ಈ ಪ್ರದೇಶಗಳ ಮೇಲೆ ತನ್ನ ಹಕ್ಕು ಪ್ರತಿಪಾದಿಸಿದ್ದು, ಅಂತಹ ಐತಿಹಾಸಿಕ ಪುರಾವೆಗಳನ್ನು ಹೊಂದಿರದ ಇಂತಹ ಯಾವುದೇ ನಕ್ಷೆಯನ್ನು ಸ್ವೀಕರಿಸುವುದಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ,

ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ವಿಶ್ವಸಂಸ್ಥೆಯೂ ಕೂಡ ಆಡಳಿತಾತ್ಮಕ ಉದ್ದೇಶಗಳಿಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತ, ಪಾಕಿಸ್ತಾನ ಅಥವಾ ಚೀನಾ ನಕ್ಷೆಯನ್ನು ಬಳಕೆ ಮಾಡಲಾಗುವುದಿಲ್ಲ ಎಂದಿದೆ. ಜೊತೆಗೆ ನೇಪಾಳ ಈ ವಿಷಯವನ್ನು ವಿಶ್ವಸಂಸ್ಥೆಯ ಸದನದಲ್ಲಿ ಪ್ರಸ್ತಾಪಿಸುವುದು ಆಗ ಕೇವಲ ರಾಜತಾಂತ್ರಿಕ ಪ್ರೋಟೋಕಾಲ್ ಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದೂ ಕೂಡ ವಿಶ್ವಸಂಸ್ಥೆ ಹೇಳಿದೆ.

ನೇಪಾಳ ಸರ್ಕಾರ ಶೀಘ್ರದಲ್ಲೇ ತನ್ನ ನೂತನ ಪರಿಷ್ಕೃತ ನಕ್ಷೆಯನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸಲಿದೆ. ಇದರಲ್ಲಿ ಭಾರತೀಯ ಪ್ರದೇಶಗಳನ್ನು ನೇಪಾಳದ ಪ್ರದೇಶಗಳೆಂದು ತೋರಿಸಲಾಗಿದೆ. ಇಂತಹ ಸಂದರ್ಭದಲ್ಲಿ, ನ್ಯೂಯಾರ್ಕ್ ಮೂಲದ ಜಾಗತಿಕ ಸಂಸ್ಥೆ ನೀಡಿರುವ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ನೇಪಾಳದ ಹಕ್ಕು ತನ್ನ ವೆಬ್‌ಸೈಟ್‌ನಲ್ಲಿ ಸಹ ಯಾವುದೇ ಸ್ಥಾನವನ್ನು ಪಡೆಯುವುದಿಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣವೆಂದರೆ ಯುಎನ್ ತನ್ನ ಎಲ್ಲಾ ನಕ್ಷೆಗಳನ್ನು ಶಾಸನಬದ್ಧ ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡುತ್ತದೆ ಅಷ್ಟೇ ಅಲ್ಲ ತನ್ನ UN Maps Disclamerನಲ್ಲಿ  "ನಕ್ಷೆಯಲ್ಲಿ ತೋರಿಸಿರುವ ವ್ಯಾಪ್ತಿ, ಹೆಸರು ಮತ್ತು ಪದವಿ ಅಥವಾ ಶೀರ್ಷಿಕೆ ಯಾವುದೇ ಪ್ರಚಾರದ ಭಾಗವಲ್ಲ ಹಾಗೂ ಇಂತಹ ಯಾವುದೇ ಪ್ರಚಾರವನ್ನು ವಿಶ್ವಸಂಸ್ಥೆ ಸ್ವೀಕರಿಸುವುದಿಲ್ಲ" ಎಂದು ಬರೆದುಕೊಂಡಿದೆ.

ಹೊಸ ನೇಪಾಳಿ ನಕ್ಷೆಯು ಭಾರತದ ಪ್ರಾಂತ್ಯಗಳಾದ ಲಿಂಪಿಯಾಧುರಾ (Limpiyadhura), ಲಿಪುಲೆಖ್ (Lipulekh) ಮತ್ತು ಕಾಲಾ ಪಾನಿ(Kalapani)ಯನ್ನು ನೇಪಾಳದ ವ್ಯಾಪ್ತಿಯಲ್ಲಿ ತೋರಿಸಲಾಗಿದೆ ಮತ್ತು ಭಾರತ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ನವದೆಹಲಿಯ ಪ್ರಕಾರ, ಹಿಂದಿನ ಯಾವುದೇ ನೇಪಾಳಿ ನಕ್ಷೆಗಳಲ್ಲಿ, ಈ ಪ್ರದೇಶಗಳು ಅದರ ಗಡಿಯೊಳಗೆ ಇರಲಿಲ್ಲ ಹೀಗಾಗಿ  ನೇಪಾಳ ಸರ್ಕಾರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಹೇಳಿದೆ.

ನೇಪಾಳದ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ಇತ್ತೀಚೆಗೆ ಸಂವಿಧಾನವನ್ನು ತಿದ್ದುಪಡಿ ಮಾಡಿ ಹೊಸ ರಾಜಕೀಯ ನಕ್ಷೆಯನ್ನು ಅನುಮೋದಿಸಿತ್ತು. ನೇಪಾಳದ ಹೊಸ ನಕ್ಷೆ ಐತಿಹಾಸಿಕ ಸಂಗತಿಗಳು ಮತ್ತು ಪುರಾವೆಗಳನ್ನು ಆಧರಿಸಿಲ್ಲ, ಆದ್ದರಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ (ಎಂಇಎ) ವಕ್ತಾರ ಅನುರನ್ ಶ್ರೀವಾಸ್ತವ ಹೇಳಿದ್ದಾರೆ. ಅಂದಿನಿಂದ ಉಭಯ ದೇಶಗಳ ಸರ್ಕಾರಗಳ ನಡುವಿನ ಸಂಬಂಧಗಳಲ್ಲಿ ಇರುಸು-ಮುರುಸು ಉಂಟಾಗಿದೆ.

Trending News