ಅನ್‌ಲಾಕ್ 2ವೇಳೆ ಯಾವ್ಯಾವುದಕ್ಕೆ ವಿನಾಯಿತಿ? ಯಾವುದಕ್ಕೆ ನಿರ್ಬಂಧ?

ಅನ್‌ಲಾಕ್ 2ನಲ್ಲಿ ಕಂಟೈನ್​ಮೆಂಟ್​ ವಲಯಗಳಲ್ಲಿನ  ಚಟುವಟಿಕೆಗಳು ಹೇಗಿರಬೇಕೆಂದು ತಿಳಿಸಲಾಗಿದೆ‌.  ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಅಭಿಪ್ರಾಯದ ಮೇರೆಗೆ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

Last Updated : Jun 30, 2020, 07:05 AM IST
ಅನ್‌ಲಾಕ್ 2ವೇಳೆ ಯಾವ್ಯಾವುದಕ್ಕೆ ವಿನಾಯಿತಿ? ಯಾವುದಕ್ಕೆ ನಿರ್ಬಂಧ? title=

ನವದೆಹಲಿ: ಇಂದಿಗೆ ಅನ್‌ಲಾಕ್ 1 ಮುಕ್ತಾಯವಾಗಿ ನಾಳೆಯಿಂದ ಅನ್‌ಲಾಕ್ 2 (Unlock 2) ಜಾರಿಗೊಳ್ಳಲಿದೆ.‌ ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಅನ್​ಲಾಕ್​ 2 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅನ್​ಲಾಕ್​ 2ನಲ್ಲಿ ಯಾವ ನಿರ್ಬಂಧಗಳಿರಲಿವೆ? ಯಾವ್ಯಾವುದಕ್ಕೆ ವಿನಾಯಿತಿಗಳಿರಲಿವೆ? ಎಂಬ ವಿವರ ಇಲ್ಲಿದೆ‌‌.

ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಮೋದಿ; ಏನು ಮಾತನಾಡಬಹುದು?

ಅನ್‌ಲಾಕ್ 2ನಲ್ಲಿ ಕಂಟೈನ್​ಮೆಂಟ್​ ವಲಯಗಳಲ್ಲಿನ  ಚಟುವಟಿಕೆಗಳು ಹೇಗಿರಬೇಕೆಂದು ತಿಳಿಸಲಾಗಿದೆ‌. ಹಂತಹಂತವಾಗಿ ಚಟುವಟಿಕೆಗಳು ಕಾರ್ಯಾರಂಭವಾಗುವ ಪ್ರಕ್ರಿಯೆ ವಿಸ್ತರಣೆಯಾಗಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಅಭಿಪ್ರಾಯದ ಮೇರೆಗೆ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

ಅನ್​ಲಾಕ್​ 2 ಮುಖ್ಯಾಂಶಗಳು:

  • ಶಾಲಾ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ಜುಲೈ 31ರವರೆಗೂ ಸ್ಥಗಿತ ಮುಂದುವರಿಕೆ.
  • ಆನ್‌ಲೈನ್‌ ಮತ್ತು ದೂರ ಶಿಕ್ಷಣಕ್ಕೆ ಅನುಮತಿ ನೀಡಬಹುದು.
  • ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ಇಲ್ಲ.
  • ಆದರೆ ಗೃಹ ಸಚಿವಾಲಯ ಅನುಮತಿ ನೀಡಿದ ವಿಮಾನಯಾನಕ್ಕೆ ಅವಕಾಶ ಇರುತ್ತದೆ
  • ಮೆಟ್ರೋ ಸಂಚಾರದ ನಿರ್ಬಂಧ ಮುಂದುವರಿಯುತ್ತದೆ.
  • ಸಿನಿಮಾ ಹಾಲ್‌, ಜಿಮ್‌, ಸ್ವಿಮ್ಮಿಂಗ್‌ ಪೂಲ್‌, ಎಂಟರ್ಟೈನ್ಮೆಂಟ್ ಪಾರ್ಕ್‌, ಥಿಯೇಟರ್‌, ಬಾರ್‌, ಆಡಿಟೋರಿಯಂ, ಅಸೆಂಬ್ಲಿ ಹಾಲ್‌ ಮತ್ತು ಹೆಚ್ಚು ಜನ ಸೇರುವ ಸ್ಥಳಗಳ ಸ್ಥಗಿತ ಮುಂದುವರಿಯುತ್ತದೆ.
  • ಈಗಿನಂತೆ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಹೆಚ್ಚು ಜನ ಸೇರುವ ಕಾರ್ಯಕ್ರಮ ಮಾಡುವಂತಿಲ್ಲ.
  • ರೈಲು ಸಂಚಾರ ಹಾಗೂ ದೇಶಿಯ ವಿಮಾನ ಈಗಿನಂತೆ ನಿಯಮಿತವಾಗಿ ಮಾತ್ರ ಕಾರ್ಯಾಚರಣೆ ಮಾಡಲಿವೆ.
  • ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ದೇಶಾದ್ಯಂತ ಜನರ ಅನಗತ್ಯ ಸಂಚಾರಕ್ಕೆ ಬ್ರೇಕ್‌ ಹಾಕಲು ನಿರ್ದೇಶಿಸಲಾಗಿದೆ‌ ಜೊತೆಗೆ ರಾತ್ರಿ ಕರ್ಫ್ಯೂ ಮುಂದುವರೆಸಲಾಗುತ್ತಿದೆ.

Covid-19: ದೆಹಲಿಯ ಆಸ್ಪತ್ರೆಗಳಲ್ಲಿ 40% ಬೆಡ್‌ಗಳ ಹೆಚ್ಚಳ- ಸಿಎಂ ಅರವಿಂದ ಕೇಜ್ರಿವಾಲ್

ಇದಲ್ಲದೆ  ಅನ್‌ಲಾಕ್ 2 ವೇಳೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ. ಅವು ಯಾವ್ಯಾವು ಎಂದರೆ...

  • ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಗಳಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರಲಿದೆ‌.
  • ಕನಿಷ್ಠ 6 ಅಡಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರಲಿದೆ.
  • ಅಂಗಡಿ ಅಥವಾ ಮತ್ತಿತರ ವಾಣಿಜ್ಯ ಮಳಿಗೆಗಳಲ್ಲಿ ಒಮ್ಮೆಲೆ 5ಕ್ಕಿಂತ ಹೆಚ್ಚಿನ ಜನ ಇರುವಂತಿಲ್ಲ.
  • ಮದುವೆ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಪಾಲ್ಗೊಳ್ಳುವಂತಿಲ್ಲ.
  • ಅಂತ್ಯಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚಿನ ಜನರು ಭಾಗವಹಿಸುವಂತಿಲ್ಲ.
  • ಸಾರ್ವಜನಿಕ ಸ್ಥಳಗಳಲ್ಲಿ ಪಾನ್‌, ಗುಟ್ಕಾ, ಲಿಕ್ಕರ್‌, ತಂಬಾಕು ಸೇವನೆ ನಿಷೇಧ ಮಾಡಬೇಕು.
     

Trending News