ನಾಗಪುರ: ಮಹಾರಾಷ್ಟ್ರದ ಹುಲಿ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿ ವಾಹನವನ್ನು ಅಟ್ಟಾಡಿಸಿಕೊಂಡು ಹೋದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ಘಟನೆ ಬಳಿಕ ಚಂದ್ರಾಪುರ ಜಿಲ್ಲೆಯ ತೊಡಬಾ-ಅಂಧೇರಿ ಹುಲಿ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ಮತ್ತು ಗೈಡ್ ಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಈ ವೀಡಿಯೋದಲ್ಲಿ ಹುಲಿ ಜೀಪನ್ನು ಛೇಸ್ ಮಾಡುತ್ತಿರುವುದನ್ನು ಪ್ರವಾಸಿಗರು ಲೈವ್ ವೀಡಿಯೋ ಮಾಡಿರುವುದನ್ನು ಕಾಣಬಹುದು.
ಈ ಬಗ್ಗೆ ಮಾಹಿತಿ ನೀಡಿದ ಅರಣ್ಯ ಅಧಿಕಾರಿ ರಾಘವೇಂದ್ರ ಮೂನ್, ಈ ಘಟನೆ ಭಾನುವಾರ ನಡೆದಿದ್ದು, ಮೂರೂವರೆ ವರ್ಷದ ಲಿಟ್ಲ್ ಹನಿ ಎಂಬ ಹೆಣ್ಣು ಹುಲಿ ವಾಹನ ನೋಡಿ ಹಿಂದೆ ಓದಿ ಬಂದಿದೆ. ಒಂದು ವರ್ಷದ ಹಿಂದೆಯೂ ಸಹ ಇದೇ ಹುಲಿ ಪ್ರವಾಸಿಗರ ವಾಹನವನ್ನು ಹಿಂಬಾಲಿಸಿತ್ತು ಎಂದು ಹೇಳಿದ್ದಾರೆ.
@deespeak @TandonRaveena This@morning at Tadoba , Chandrapur, a tigress chased a tourist vehicle . The guide warned them that the tigress chases vehicles but the tourist took it lightly and thought she was walking and won’t chase .moments later the tigress chased them . pic.twitter.com/jQKklQsIA2
— Parag Thakkar (@paragthakkar001) November 11, 2018