ಬೆಂಗಳೂರು: ಡಾ.ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪಂತರಪಾಳ್ಯದಲ್ಲಿ ತಲೆ ಎತ್ತಿದ 50 ಕೋಟಿ ವೆಚ್ಚದ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯನ್ನು ಸಿಎಂ ಬೊಮ್ಮಾಯಿ ಇಂದು ಅನಾವರಣಗೊಳಿಸಿದ್ದಾರೆ
ಇದರಿಂದಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ.ಸ್ಥಳೀಯ ಶಾಸಕ, ಹಾಗು ವಸತಿ ಸಚಿವ ವಿ. ಸೋಮಣ್ಣರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: ʼಬ್ರಾಂಡ್ ಬೆಂಗಳೂರಿನ ಖ್ಯಾತಿ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯʼ
ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಶೇಷ ಏನು?
ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನಿರ್ಮಾಣವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
209 ಹಾಸಿಗೆಯುಳ್ಳವ ಮೂರು ಅಂತಸ್ತಿನ ಕಟ್ಟಡವುಳ್ಳ ಸುಸಜ್ಜಿತ ಆಸ್ಪತ್ರೆ ಇದಾಗಿದ್ದು
ಒಟ್ಟು 9995.73 ಚದರ ಮೀಟರ್ ಜಾಗದ ವಿಸ್ತೀರ್ಣ ಹೊಂದಿದೆ
ನೆಲಮಹಡಿಯಲ್ಲಿ
ತುರ್ತು ಚಿಕಿತ್ಸಾ ಘಟಕ, ಔಷಾಧಾಲಯ
* ಕಚೇರಿಗಳ, ನರ್ಸ್ ಕೊಠಡಿ
* ಸ್ತ್ರೀ ರೋಗ ತಪಾಸಣಾ ವಿಭಾಗ
* ರಕ್ತ ಶೇಖರಣಾ ಕೊಠಡಿ
ಇದನ್ನೂ ಓದಿ: ಇನ್ನು ಮುಂದೆ ಜನ ಸಾಮಾನ್ಯರಿಗೆ ಎಂ ಸ್ಯಾಂಡ್ ಸುಗಮವಾಗಿ ಲಭ್ಯ!
ಮೊದಲ ಮಹಡಿ
* 10 ಸಾಮಾನ್ಯ ಕೊಠಡಿ
* ವೈದ್ಯರ ಕೊಠಡಿ
ಎರಡನೇ ಮಹಡಿ
* ನವಜಾತ ಶಿಶುಗಳ ತೀವ್ರನಿಗಾ ಘಟಕ
* ಶಸ್ತ್ರ ಚಿಕಿತ್ಸಾ ನಂತರ ಆರೈಕೆ ಕೊಠಡಿ
* ಅಪರೇಷನ್ ಥಿಯೇಟರ್
* ವೈದ್ಯಕೀಯ ತೀವ್ರನಿಗಾ ಘಟಕ
* ಮಕ್ಕಳ ತೀವ್ರನಿಗಾ ಘಟಕ
* ತಾಯಂದಿರ ಕೊಠಡಿ
* ಕ್ರಿಮಿನಾಶಕ ಕೊಠಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.