Aero India 2021 : ಮೈನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ

ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ ಫೆಬ್ರವರಿ 5 ರವರೆಗೆ ಏರೋ ಇಂಡಿಯಾ - 2021 ವೈಮಾನಿಕ ಪ್ರದರ್ಶನ ನಡೆಯಲಿದೆ.

Written by - Yashaswini V | Last Updated : Feb 2, 2021, 11:25 AM IST
  • ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಹಾರಾಟ
  • ಫೆಬ್ರವರಿ 3 ರಿಂದ ಫೆಬ್ರವರಿ 5 ರವರೆಗೆ ಏರೋ ಇಂಡಿಯಾ - 2021 ವೈಮಾನಿಕ ಪ್ರದರ್ಶನ
  • 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ
Aero India 2021 : ಮೈನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ title=
Aero India 2021

ಬೆಂಗಳೂರು : ಪ್ರತಿಷ್ಠಿತ ಮೈನವಿರೇಳಿಸುವ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕದ ಭಾರತೀಯ ವಾಯುನೆಲೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.

ನಗರದ  ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ ಫೆಬ್ರವರಿ 5 ರವರೆಗೆ ಏರೋ ಇಂಡಿಯಾ - 2021  (Aero India 2021) ವೈಮಾನಿಕ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಇಂದಿನಿಂದ ತಾಲೀಮು ಕೂಡ ಆರಂಭವಾಗಿದೆ. 

ಕಳೆದ ಬಾರಿ ಏರೋ ಇಂಡಿಯಾ (Aero India) ಪ್ರದರ್ಶನದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದ ಹಿನ್ನಲೆಯಲ್ಲಿ ಹಾಗೂ ಕರೋನಾವೈರಸ್ ಹಿನ್ನಲೆಯಲ್ಲಿ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ - ಏರ್ ಶೋ ರಿಹರ್ಸಲ್ ವೇಳೆ ಜೆಟ್ ವಿಮಾನಗಳ ಡಿಕ್ಕಿ; ಅಪಾಯದಿಂದ ಪಾರಾದ ಪೈಲೆಟ್​ಗಳು

ಏರೋ ಇಂಡಿಯಾ - 2021ರಲ್ಲಿ ಭಾರತ ಸೇರಿದಂತೆ ಇತರ ದೇಶಗಳ 63 ಏರ್ ಕ್ರಾಫ್ಟ್, ಕಾಪ್ಟರ್ ಪ್ರದರ್ಶನಗೊಳ್ಳಲಿವೆ. 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನಡೆಸಲಿದ್ದು ಜನರ ಕಣ್ಮನ ಸೆಳೆಯಲು ಸಿದ್ಧವಾಗಿವೆ.

ಇದಲ್ಲದೆ ರಫೆಲ್ (Rafale) , ಸುಖೋಯ್, ಜಾಗ್ವಾರ್ ಸೇರಿದಂತೆ ಅನೇಕ ಫೈಟರ್ ಜೆಟ್ ಏರ್ ಕ್ರಾಫ್ಟ್ ಹೆಲಿಕಾಪ್ಟರ್ ಗಳೂ ಕೂಡ ವೈಮಾನಿಕ ಪ್ರದರ್ಶನದ ರಸದೌತಣ ನೀಡಲು ಸಜ್ಜಾಗಿವೆ.

ಇದನ್ನೂ ಓದಿ - ಏರೋ ಇಂಡಿಯಾ: ವಾಹನ ಕಳೆದುಕೊಂಡವರಿಗೆ ಅಗತ್ಯ ನೆರವು ನೀಡಲು ನಿರ್ಧಾರ

ಇನ್ನು ಇದೇ ಮೊದಲ ಬಾರಿಗೆ ಸೂರ್ಯಕಿರಣ್ (Surya Kiran) ಮತ್ತು ಸಾರಂಗ್ ವೈಮಾನಿಕ ಪ್ರದರ್ಶನ ತಂಡಗಳು ಜಂಟಿಯಾಗಿ ಪ್ರದರ್ಶನ ನೀಡಲಿದ್ದು ವರ್ಚುಯಲ್ ಮತ್ತು ಪ್ರತ್ಯಕ್ಷವಾಗಿ ಶೋ ನಡೆಯಲಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News