#ಜನವಿರೋಧಿಕಾಂಗ್ರೆಸ್; “ಸದನದಲ್ಲಿ ನಿಮ್ಮ ಶಾಸಕರು ಮಾಡಿದ್ದೇನು, ಸಾಧಿಸಿದ್ದೇನು?”

ಪ್ರಶ್ನೆ ಕೇಳಿ, ಸರ್ಕಾರದಿಂದ ಉತ್ತರ ಕೇಳಲೂ ವ್ಯವಧಾನವಿಲ್ಲದಿದ್ದರೆ ಮತದಾರರು ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು? ಅಂತಾ ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Feb 22, 2022, 05:36 PM IST
  • ಜನರ ತೆರಿಗೆ ಹಣದಲ್ಲಿ ನಡೆದ ವಿಧಾನ ಸಭಾ ಕಲಾಪದಲ್ಲಿ ಕಾಂಗ್ರೆಸ್‌ ಮಾಡಿದ್ದೇನು?
  • ಎಷ್ಟು ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದಾರೆ?
  • ಪ್ರಶ್ನೆ ಕೇಳಿ, ಸರ್ಕಾರದಿಂದ ಉತ್ತರ ಕೇಳಲೂ ವ್ಯವಧಾನವಿಲ್ಲದಿದ್ದರೆ ಮತದಾರರು ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?
#ಜನವಿರೋಧಿಕಾಂಗ್ರೆಸ್; “ಸದನದಲ್ಲಿ ನಿಮ್ಮ ಶಾಸಕರು ಮಾಡಿದ್ದೇನು, ಸಾಧಿಸಿದ್ದೇನು?”   title=
ವಿಧಾನ ಸಭಾ ಕಲಾಪದಲ್ಲಿ ಕಾಂಗ್ರೆಸ್‌ ಮಾಡಿದ್ದೇನು?

ಬೆಂಗಳೂರು: ಜನರ ತೆರಿಗೆ ಹಣದಲ್ಲಿ ನಡೆದ ವಿಧಾನ ಸಭಾ ಕಲಾಪದಲ್ಲಿ ಕಾಂಗ್ರೆಸ್‌(Congress) ಮಾಡಿದ್ದೇನು? ಅಂತಾ ಬಿಜೆಪಿ ಪ್ರಶ್ನಿಸಿದೆ. #ಜನವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕೈ’ ನಾಯಕರ ವಿರುದ್ಧ ಗುಡುಗಿದೆ.

‘ಕಾಂಗ್ರೆಸ್‌ ಮತ್ತು ಕಲಾಪ ಎಂದು ವ್ಯಂಗ್ಯವಾಡಿರುವ ಬಿಜೆಪಿ, ‘ಕಲಾಪ(Karnataka Assembly Session)ದ ದಿನಗಳು ಹತ್ತು, ಇದುವರೆಗೆ ನಡೆದಿದ್ದು ಕೇವಲ ಎರಡು ದಿನ. 5 ದಿನ ಕಾಂಗ್ರೆಸ್ ಧರಣಿ. ಉಳಿದ ದಿನಗಳಲ್ಲಿ ನಡೆಯಬೇಕಿದ್ದ ಕಲಾಪ ಮುಂದೂಡಲೇಬೇಕಾದ ಪರಿಸ್ಥಿತಿ ನಿರ್ಮಾಣ. ಇದು ರಾಜ್ಯದ ಜನತೆಗೆ ಕಾಂಗ್ರೆಸ್‌ ಕೊಡುಗೆ!!!’ ಅಂತಾ ಟೀಖಿಸಿದೆ.

ಇದನ್ನೂ ಓದಿ: HD Kumaraswamy: ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣಕ್ಕೆ ಕ್ಷಮೆಯೇ ಇಲ್ಲ’

‘ಜನರ ತೆರಿಗೆ ಹಣದಲ್ಲಿ ನಡೆದ ವಿಧಾನಸಭಾ ಕಲಾಪ(Assembly Session)ದಲ್ಲಿ ಕಾಂಗ್ರೆಸ್‌ ಮಾಡಿದ್ದೇನು? ಎಷ್ಟು ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದಾರೆ? ಪ್ರಶ್ನೆ ಕೇಳಿ, ಸರ್ಕಾರದಿಂದ ಉತ್ತರ ಕೇಳಲೂ ವ್ಯವಧಾನವಿಲ್ಲದಿದ್ದರೆ ಮತದಾರರು ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?’ ಅಂತಾ ಬಿಜೆಪಿ ಪ್ರಶ್ನಿಸಿದೆ.

‘ಡಿಯರ್ ಕಾಂಗ್ರೆಸ್(Congress) ಸದನದಲ್ಲಿ ನಿಮ್ಮ ಶಾಸಕರು ಮಾಡಿದ್ದೇನು, ಸಾಧಿಸಿದ್ದೇನು? ಅಹೋರಾತ್ರಿ ಧರಣಿ, ವಿಧಾನಸಭಾ ಲಾಂಜ್‌ನಲ್ಲಿ ಹರಟೆ, ಮೂರೂ ಹೊತ್ತು ಮೃಷ್ಟಾನ್ನ ಭೋಜನ, ದಿಂಬು ಹಾಸಿಗೆ ತರಿಸಿ ಸದನದಲ್ಲಿ ನಿದ್ದೆ, ಇದು ಬಿಟ್ಟು ಬೇರೇನಾದರೂ ಮಾಡಿದ್ದೀರಾ?’ ಅಂತಾ ಕುಟುಕಿದೆ.

ಇದನ್ನೂ ಓದಿ: ಹರ್ಷ ಹತ್ಯೆ ಪೂರ್ವನಿಯೋಜಿತ, ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯ: ಸಚಿವ ಕೆ.ಸುಧಾಕರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News