ರಾಹುಲ್ ಗಾಂಧಿ ಪುಣ್ಯಾತ್ಮನಾ? ಚೈಲ್ಡಿಶ್ ಹಾ!

ಒಂದೇ ಪಕ್ಷದ ನಾಯಕರ ವಿಭಿನ್ನ ಹೇಳಿಕೆ ಬಗ್ಗೆ ಬಿಜೆಪಿ ಟ್ವೀಟ್...!

Updated: Aug 10, 2018 , 10:25 AM IST
ರಾಹುಲ್ ಗಾಂಧಿ ಪುಣ್ಯಾತ್ಮನಾ? ಚೈಲ್ಡಿಶ್ ಹಾ!

ಬೆಂಗಳೂರು: ನಾನು ಪುಣ್ಯಾತ್ಮ ರಾಹುಲ್ ಗಾಂಧಿಯವರಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಾಸ್ವಾಮಿ ಹೇಳಿರುವ ಹೇಳಿಕೆ ಹೊಸತೇನಲ್ಲ. ಆದರೆ ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹೆಚ್. ವಿಶ್ವನಾಥ್, ರಾಹುಲ್ ಗಾಂಧಿಯವರಿಗೆ ಈ ದೇಶದ ನಾಯಕತ್ವ ನೀಡುವ ಬಗ್ಗೆ ಯಾರಿಗೂ ಅಂತಹ ವಿಶ್ವಾಸವಿಲ್ಲ. ಯಾಕೆಂದರೆ ಅವರು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವವರಲ್ಲ. ಬಹಳ ಚೈಲ್ಡಿಶ್ ಆಗಿ ಇರುವಂತಹವರು ಎಂದಿದ್ದಾರೆ. 

ಇದೀಗ ಈ ಇಬ್ಬರೂ ನಾಯಕರ ಹೇಳಿಕೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ರಾಹುಲ್ ಗಾಂಧಿಯವರು  ಮುಖ್ಯಮಂತ್ರಿಗಳ ಪ್ರಕಾರ ಪುಣ್ಯಾತ್ಮ, ಜೆಡಿಎಸ್ ರಾಜ್ಯಾಧ್ಯಕ್ಷರ ಪ್ರಕಾರ ಚೈಲ್ಡಿಶ್! ಜನತೆಯ ಪ್ರಕಾರ ಏನು ಎಂದು ಪ್ರಶ್ನಿಸಿದೆ.