BMTC Bus Fare Hike : ಬಿಎಂಟಿಸಿ ಪ್ರಯಾಣಿಕರಿಗೆ ಸದ್ಯದಲ್ಲೇ ದೊಡ್ಡ ಶಾಕ್!

ಸದ್ಯ ದರ ಏರಿಕೆಯಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಬ್ಯಾಗಲ್ಲಿ ದುಡ್ಡು ತೆಗೆದುಕೊಂಡು ಹೋಗಿ ಜೇಬಲ್ಲಿ ವಸ್ತು ತರೋ ಸ್ಥಿತಿ ಬಂದಿದೆ. ಅದ್ರಲ್ಲೂ ಡೀಸೆಲ್ ಹಾಗೂ ಪೆಟ್ರೋಲ್ ದರ ದಿನ ದಿನವೂ ಏರುತ್ತಲೇ ಸಾಗ್ತಿದೆ. ಇದ್ರ ಮಧ್ಯೆ ಬಿಎಂಟಿಸಿಯೂ ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಾರಿ ಬರೋಬ್ಬರಿ ಶೇಕಡಾ 35ರಷ್ಟು ದರ ಏರಿಕೆಗೆ ಬಿಎಂಟಿಸಿ ಬೇಡಿಕೆ ಇಟ್ಟಿದೆ.

Written by - Manjunath Hosahalli | Last Updated : Apr 13, 2022, 06:37 PM IST
  • ಪೆಟ್ರೋಲ್, ಡೀಸೆಲ್, ಅಡುಗೆಎಣ್ಣೆ ಹೀಗೆ ಸದ್ಯ ಬೆಲೆ ಏರಿಕೆ
  • ಸಿಎಂ ಅಸ್ತು ಅಂದ್ರೆ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.
  • ಬಿಎಂಟಿಸಿ ಪ್ರಸ್ತಾವನೆಗೆ ಸಿಎಂ ನೀರಸ ಪ್ರತಿಕ್ರಿಯೆ
BMTC Bus Fare Hike : ಬಿಎಂಟಿಸಿ ಪ್ರಯಾಣಿಕರಿಗೆ ಸದ್ಯದಲ್ಲೇ ದೊಡ್ಡ ಶಾಕ್! title=

ಬೆಂಗಳೂರು : ಪೆಟ್ರೋಲ್, ಡೀಸೆಲ್, ಅಡುಗೆಎಣ್ಣೆ ಹೀಗೆ ಸದ್ಯ ಬೆಲೆ ಏರಿಕೆ ಅನ್ನೋದು ಜನಸಾಮಾನ್ಯರನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದ್ರ ನಡುವೆ ಬಿಎಂಟಿಸಿಯೂ ದರ ಏರಿಕೆಗೆ ಮತ್ತೆ ಕಸರತ್ತು ಆರಂಭಿಸಿದೆ. ಸಿಎಂ ಅಸ್ತು ಅಂದ್ರೆ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.

ಶೇ. 35ರಷ್ಟು ಟಿಕೆಟ್ ದರ ಏರಿಕೆಗೆ ಬಿಎಂಟಿಸಿ ಪ್ರಸ್ತಾಪ

ಸದ್ಯ ದರ ಏರಿಕೆಯಿಂದ ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಬ್ಯಾಗಲ್ಲಿ ದುಡ್ಡು ತೆಗೆದುಕೊಂಡು ಹೋಗಿ ಜೇಬಲ್ಲಿ ವಸ್ತು ತರೋ ಸ್ಥಿತಿ ಬಂದಿದೆ. ಅದ್ರಲ್ಲೂ ಡೀಸೆಲ್ ಹಾಗೂ ಪೆಟ್ರೋಲ್ ದರ ದಿನ ದಿನವೂ ಏರುತ್ತಲೇ ಸಾಗ್ತಿದೆ. ಇದ್ರ ಮಧ್ಯೆ ಬಿಎಂಟಿಸಿಯೂ ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಾರಿ ಬರೋಬ್ಬರಿ ಶೇಕಡಾ 35ರಷ್ಟು ದರ ಏರಿಕೆಗೆ ಬಿಎಂಟಿಸಿ ಬೇಡಿಕೆ ಇಟ್ಟಿದೆ.

ಇದನ್ನೂ ಓದಿ : ಸಂತೋಷ್ ಆತ್ಮಹತ್ಯೆ ಪ್ರಕರಣ 40% ಕಾಂಗ್ರೆಸ್ ಟೂಲ್ ಕಿಟ್‍ನ ಭಾಗ: ಬಿಜೆಪಿ

ಸದ್ಯ ಡೀಸೆಲ್ ದರ ಏರಿಕೆಯಿಂದ ನಿಗಮಕ್ಕೆ ಪ್ರತಿನಿತ್ಯ 50 ಲಕ್ಷ ರೂ. ಹೆಚ್ಚುವರಿ ಹೊರೆಯಾಗ್ತಿದೆ. ಬಲ್ಕ್ ಡೀಸೆಲ್ ದರವೂ ದುಪ್ಪಟ್ಟಾಗಿದೆ. ಹೀಗಾಗಿ ನಿಗಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ 7 ವರ್ಷದಿಂದ ಟಿಕೆಟ್ ದರ ಏರಿಕೆಯೂ ಆಗಿಲ್ಲ. ಬಸ್ ಬಿಡಿ ಭಾಗಗಳು ಬಹಳಷ್ಟು ದುಬಾರಿಯಾಗಿವೆ. ಎರಡು ವರ್ಷದ ಹಿಂದೆ 50 ಲಕ್ಷದಷ್ಟಿದ್ದ ಬಸ್ ಪ್ರಯಾಣಿಕರ ಸಂಖ್ಯೆ  ಸದ್ಯ 25 ಲಕ್ಷಕ್ಕೆ ಕುಸಿದಿದೆ. ಇದರಿಂದ ಟಿಕೆಟ್ ರೆವೆನ್ಯೂ ಕಲೆಕ್ಷನ್ ಸಹ ಪಾತಾಳಕ್ಕೆ ಇಳಿದಿದೆ. ಹೀಗಾಗಿ ದರ ಏರಿಕೆ ಮಾಡದಿದ್ರೆ ನಾವು ಬಸ್ ರಸ್ತೆಗಿಳಿಸೋದು ಕಷ್ಟ ಎಂದು ಬಿಎಂಟಿಸಿ ನಿಗಮ‌ ಹೇಳಿಕೊಂಡಿದೆ. ಸದ್ಯ ಆರ್ಥಿಕ ಸಂಕಷ್ಟದಿಂದ ಹೊರಬರಲು ಕನಿಷ್ಠ ಶೇಕಡಾ 35ರಷ್ಟು ಟಿಕೆಟ್  ದರ ಏರಿಕೆ ಮಾಡಬೇಕೆಂದು ಬಿಎಂಟಿಸಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಬಿಎಂಟಿಸಿ ಪ್ರಸ್ತಾವನೆಗೆ ಸಿಎಂ ನೀರಸ ಪ್ರತಿಕ್ರಿಯೆ

ಇನ್ನು ಶೇಕಡಾ 35ರಷ್ಟು ದರ ಏರಿಕೆ ಪ್ರಸ್ತಾವನೆಗೆ ಸಿಎಂ ಹೌಹಾರಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಸರ್ಕಾರದ ಮೇಲೆ ಜನಾಕ್ರೋಶ ಹೆಚ್ಚಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ಶೇಕಡಾ 35ರಷ್ಟು ಬಸ್ ಟಿಕೆಟ್ ದರ ಏರಿಸಿದ್ರೆ ಜನ ಸುಮ್ನೆ ಬಿಡ್ತಾರಾ? ಇದು ಆಗದ ಮಾತು ಎಂದು ಬಿಎಂಟಿಸಿಗೆ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಸದ್ಯದ ನಿಗಮದ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಕನಿಷ್ಠ ಶೇಕಡಾ 20ರಷ್ಟಾದ್ರೂ ದರ ಏರಿಕೆ ಮಾಡ್ಲೇಬೇಕು ಎಂದು ನಿಗಮ ಸರ್ಕಾರದ ಮುಂದೆ ಮಂಡಿಯೂರಿದೆ.

ಸಂಭವ್ಯ ಟಿಕೆಟ್ ದರ ಏರಿಕೆ

ಈಗಿದ್ದ ದರ ಸ್ಟೇಜ್ ವೈಸ್    ಶೇ. 35ರಷ್ಟು ಏರಿಕೆ   ಶೇ. 20ರಷ್ಟು ಏರಿಕೆಯಾದ್ರೆ!
2 ಕಿ.ಮೀ.ವರೆಗೆ ದರ 5 ರೂ. 7 ರೂ. 6 ರೂ.
3 ಕಿ.ಮೀ.ನಿಂದ 4 ಕಿ.ಮೀ.ವರೆಗೆ  10 ರೂ. 13 ರೂ. 12 ರೂ.
5 ಕಿ.ಮೀ.ನಿಂದ 6 ಕಿ.ಮೀ.ವರೆಗೆ  15 ರೂ. 20 ರೂ. 18 ರೂ.
7 ಕಿ.ಮೀ.ನಿಂದ 14 ಕಿ.ಮೀ.ವರೆಗೆ  20 ರೂ. 27 ರೂ. 24 ರೂ.
15 ಕಿ.ಮೀ.ನಿಂದ 40 ಕಿ.ಮೀ.ವರೆಗೆ  25 ರೂ.  29 ರೂ. 25 ರೂ.
41 ಕಿ.ಮೀ. ಮೀರಿದ ಪ್ರಯಾಣ 30 ರೂ. 40 ರೂ. 36 ರೂ.

ಇದನ್ನೂ ಓದಿ : ಕರ್ನಾಟಕದ 40% ನಲ್ಲಿ ಪ್ರಧಾನಿ ಮೋದಿಯವರೂ ಪಾಲು ಪಡೆಯುತ್ತಿದ್ದಾರಾ?: ಕಾಂಗ್ರೆಸ್

ಸಾರಿಗೆ ಮುಖಂಡರಿಂದ ತೀವ್ರ ಅಸಮಾಧಾನ

ಸರ್ಕಾರ ದರ ಏರಿಕೆಗೂ ಬಿಡದೇ, ಇತ್ತ ಆರ್ಥಿಕ ಸಹಾಯವನ್ನೂ ಮಾಡದೇ ಇರೋದಕ್ಕೆ ನಿಗಮದಲ್ಲಿ ಅಸಮಾಧಾನ ತೀವ್ರಗೊಳ್ತಿದೆ. ಹೀಗೆ ಆದ್ರೆ ಬಿಎಂಟಿಸಿ ಮುಚ್ಚೋ ಸ್ಥಿತಿಗೆ ಬಂದ್ರೂ ಆಶ್ಚರ್ಯವಿಲ್ಲ ಎಂದು ನೌಕರರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸ್ತಿವೆ. ಒಟ್ಟಾರೆ ಬಿಎಂಟಿಸಿ ಸದ್ಯ ಅಡಕತ್ತರಿಯಲ್ಲಿ ಸಿಲುಕಿದೆ. ದರ ಏರಿಕೆಗೆ ಸರ್ಕಾರ ಒಪ್ಪುತ್ತಿಲ್ಲ. ಕಳೆದ ಎರಡು ಬಾರಿ ದರ ಏರಿಕೆ ಪ್ರಸ್ತಾವನೆಯನ್ನೂ ಸಿಎಂ ತಿರಸ್ಕರಿಸಿದ್ರು. ಈಗ ಮತ್ತೆ ಶೇಕಡಾ 35ರಷ್ಟು ದರ ಏರಿಕೆ ಪ್ರಸ್ತಾವನೆಗೂ ಸಿಎಂ ಗರಂ ಆಗಿದ್ದಾರೆ. ಆದ್ರೆ ನಿಗಮ ಮಾತ್ರ ದರ ಏರಿಕೆ ಆಗದೇ ಬಸ್ ರಸ್ತೆಗಿಳಿಸೋದು ಕಷ್ಟ ಅಂತಿದೆ. ಇದ್ರ ಮಧ್ಯೆ ಜನಸಾಮಾನ್ಯರು ಬಸ್ ದರವೂ ಏರಿದ್ರೆ ನಮ್ಮ ಗತಿ ಏನು ಅಂತ ಚಿಂತೆಗೀಡಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News