Coronavirus : ದೇಶದಲ್ಲಿ ಕೋವಿಡ್ ನಿಯಂತ್ರಣ ; ಕಾಂಗ್ರೆಸ್ ಬಿಜೆಪಿ ಟ್ವೀಟ್ ಸಮರ

ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಟ್ವೀಟ್ ಸಮರ ಜೋರಾಗಿದೆ.  

Written by - Zee Kannada News Desk | Last Updated : Jan 3, 2021, 05:31 PM IST
  • ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಸಮರದಲ್ಲಿ ನಿರತವಾದ ಬಿಜೆಪಿ ಕಾಂಗ್ರೆಸ್
    ಕೋವಿಡ್ ನಿಯಂತ್ರಣದಲ್ಲಿದೆ ಎನ್ನುತ್ತಿದೆ ಬಿಜೆಪಿ
    ಕೋವಿಡ್ ನಿಯಂತ್ರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎನ್ನುವುದು ಕಾಂಗ್ರೆಸ್ ಆರೋಪ
Coronavirus : ದೇಶದಲ್ಲಿ ಕೋವಿಡ್ ನಿಯಂತ್ರಣ  ; ಕಾಂಗ್ರೆಸ್ ಬಿಜೆಪಿ ಟ್ವೀಟ್ ಸಮರ title=
ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಸಮರದಲ್ಲಿ ನಿರತವಾದ ಬಿಜೆಪಿ ಕಾಂಗ್ರೆಸ್

ಬೆಂಗಳೂರು: ದೇಶದಲ್ಲಿ ಕರೋನಾ ವೈರಸ್ ಗೆ (Coronavirus) ಇನ್ನು ಮುಂದೆ ಲಸಿಕೆ (Vaccine) ಲಭ್ಯವಾಗಲಿದೆ ಎಂದು ದೇಶದ ಜನತೆ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಟ್ವೀಟ್ ಸಮರ ಜೋರಾಗಿದೆ. ರಾಜ್ಯ ಮತ್ತು ದೇಶದಲ್ಲಿ ಕರೋನಾ ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಬಿಜೆಪಿ (BJP) ಹೇಳಿದರೆ, ಕರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದು ಕಾಂಗ್ರೆಸ್ (Congress) ಆರೋಪ.

ಕರೋನಾ (COVID-19) ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ಗೆ ಸಾಟಿಯೇ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಕರೋನಾ ಆರಂಭದ ದಿನಗಳಲ್ಲಿಯೇ ಜನತಾ ಕರ್ಫ್ಯೂ, ಲಾಕ್ ಡೌನ್ ಗಳನ್ನು ಹೇರಿ ಕರೋನಾ ನಿಯಂತ್ರತ್ರಿಸಿದ್ದು ಮೋದಿ ಸರ್ಕಾರ ಎಂದು ಬಿಜೆಪಿ (BJP) ಹೇಳಿದೆ. 1984 ರಲ್ಲಿ ಮಧ್ಯಪ್ರದೇಶದಲ್ಲಿ ಗ್ಯಾಸ್ ದುರಂತವಾದಾಗ ಆರೋಪಿಯನ್ನು ಕದ್ದು ಮುಚ್ಚಿ ಹೊರಗೆ ಕಳುಹಿಸಿದ ಭಂಡರು ನೀವೇ ಅಲ್ಲವೇ? ಎಂದು ಪ್ರಶ್ನಿಸಿದೆ. 

ALSO READ : ರಾಜ್ಯದಲ್ಲಿ ಜೆಡಿಎಸ್ ಮುಗಿಸುವ ಎಲ್ಲ ಪ್ರಯತ್ನಗಳು ವಿಫಲ : ಹೆಚ್ ಡಿ ಕುಮಾರಸ್ವಾಮಿ

ಇನ್ನು ದೇಶ ಪ್ಲೇಗ್, ಕಾಲರಾ, ದಡಾರ, ಪೋಲಿಯೋ,ಸಾರ್ಸ್ ಮುಂತಾದ ರೋಗಗಳನ್ನ ಸಮರ್ಥವಾಗಿ ಎದುರಿಸಿದೆ. ಏಕೆಂದರೆ ಆಗ ಇದ್ದಿದ್ದು ಭ್ರಷ್ಟ, ಬೇಜವಾಬ್ದಾರಿ ಸರ್ಕಾರ ಅಲ್ಲ. ಬದ್ಧತೆ, ಇಚ್ಛಾಶಕ್ತಿಯ ಕಾಂಗ್ರೆಸ್ (Congress) ಸರ್ಕಾರ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ, ನೀವು, ಕರೋನಾ ಸೋಂಕಿತ ವಿದೇಶಿ ಪ್ರಯಾಣಿಕರನ್ನ ನಿಗ್ರಹಿಸುವಲ್ಲಿ ಸೋತಿರಿ, ಈಗಲೂ ಸೋತಿದ್ದೀರಿ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ಉತ್ತರಿಸಿದ ಬಿಜೆಪಿ ಡಿಕೆಶಿವಕುಮಾರ್ ಅವರಿಗೆ ಇಷ್ಟೊಂದು ಅಜ್ಞಾನ ಇರಬಾರದಿತ್ತು. ಪ್ರಪಂಚವೇ ಕೋವಿಡ್ ಗೆ ತುತ್ತಾಗಿದೆ. ಸಾಂಕ್ರಾಮಿಕದಲ್ಲಿಯೂ ರಾಜಕೀಯ ಮಾಡುವ ಹೊಲಸು ಬುದ್ದಿಯಿಂದ ಕಾಂಗ್ರೆಸ್ ಹೊರಬರಬೇಕು ಎಂದು ಹೇಳಿದೆ. 

 

ದೇಶದಲ್ಲಿ ಕರೋನಾವನ್ನು ಹತೋಟಿಗೆ ತರುವಲ್ಲಿ ಕೇಂದ್ರ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ನಾಯಕತ್ವದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಬಿಜೆಪಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News