ಬೆಂಗಳೂರು: 2021-22 ನೇ ಸಾಲಿನ SSLC ಪರೀಕ್ಷೆಯಾ ದಿನಾಂಕ ಇನ್ನು ಪ್ರಕಟವಾಗಿಲ್ಲ. SSLC ಅರ್ಧವಾರ್ಷಿಕ ಪರೀಕ್ಷೆ ಕೂಡ ನಡೆಸಿಲ್ಲ. ಇದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ CBSE ಹಾಗೂ ICSE ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಮುಗಿದಿದೆ. ಆದ್ರೆ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿಲ್ಲ.
ಈಗಾಗಲೇ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಆಗ್ತಿದೆ. ಆದ್ರೆ ಇದು ಶೈಕ್ಷಣಿಕ ಚಟುವಟಿಕೆ ಮೇಲೆ ಒಮಿಕ್ರಾನ್ ಕರಿನೆರಳು ಬೀರುತ್ತಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ಒಮಿಕ್ರಾನ್ ಕೇಸ್ ಗಳ ಸಂಖ್ಯೆ ಲಕ್ಷ ಗಡಿ ದಾಟಲಿದೆ ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಿದ್ರೂ ಶಿಕ್ಷಣ ಇಲಾಖೆ ಮಕ್ಕಳ ಪರೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಿಲ್ಲ.
ಪರೀಕ್ಷೆ ನಡೆಸಬೇಕಾದ್ರೆ ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಪರೀಕ್ಷಾ ದಿನಾಂಕ ಪ್ರಕಟ ಮಾಡಬೇಕು. ಆದ್ರೆ ಇದುವರೆಗೂ ಶಿಕ್ಷಣ ಇಲಾಖೆ SSLC ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ.
ಈ ಬಗ್ಗೆ ಮಾತನಾಡಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, "ಇಲಾಖೆಗೆ ಮಕ್ಕಳ ಭವಿಷ್ಯದ ಚಿಂತೆ ಇಲ್ಲ. ಅಧಿಕಾರಿಗಳಿಗೆ ಹಣ ಮಾಡಿಕೊಳ್ಳುವ ಚಿಂತೆ. ಶಾಲೆಗಳ ಮಾನ್ಯತೆ ನವೀಕರಣ ಮಾಡುವ ವಿಚಾರದಲ್ಲಿ ಅಧಿಕಾರಿಗಳು ಮಗ್ನರಾಗಿದ್ದಾರೆ. ಹೀಗಾಗಿ ಇಲಾಖೆ ಇದುವರೆಗೂ SSLC ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ. ಕೂಡಲೇ ಶಿಕ್ಷಣ ಇಲಾಖೆ SSLC ಪರೀಕ್ಷೆ ಕುರಿತು ದಿನಾಂಕ ಪ್ರಕಟಿಸಬೇಕು. ಮಕ್ಕಳ ಭವಿಷ್ಯದ ಚಿಂತನೆ ಕಡೆ ಇಲಾಖೆ ಗಮನ ಕೊಡಲಿ" ಎಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: Omicron ಆತಂಕದ ನಡುವೆಯೇ ಸಿಹಿ ಸುದ್ದಿ, ಕರೋನ ಔಷಧಿ Molnupiravir ಮತ್ತು ಲಸಿಕೆ CORBEVAX, COVOVA ಗೆ ಅನುಮೋದನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.