ಬೆಂಗಳೂರು: ಪಾಪ ರಮೇಶ್ ಜಾರಕಿಹೊಳಿ ಅಮಾಯಕರಿದ್ದಾರೆ, ರಾಜಕಾರಣಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ(HD Kumaraswamy), 12 ಜನ ಮುಂಬೈಗೆ ಹೋಗಿದ್ದರು. ಮುಂಬೈಗೆ ಹೋಗಿ ಆ ಪುಣ್ಯಾತ್ಮರು ಏನು ಮಾಡಿದ್ದಾರೋ? ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಯಾರೂ ಇಳಿಯಬಾರದು. 6 ಜನ ಸಚಿವರು ನ್ಯಾಯಾಲಯಕ್ಕೆ ಹೋದಾಗ ಗೋವಾ, ಮುಂಬೈ, ಹೈದರಾಬಾದ್ ಸುತ್ತಾಡಿದ್ದರು. ಆಗ ಏಕೆ ಇವರು ಕೋರ್ಟ್ ಮೊರೆ ಹೋಗಿರಲಿಲ್ಲ. ಇಂತಹವರನ್ನು ನಂಬಿ ರಾಜಕಾರಣ ಮಾಡಬೇಕಾಗಿತ್ತಾ? ಎಂದು ಪ್ರಶ್ನಿಸಿದ್ದಾರೆ.
ನೇರ ಪೊಲೀಸ್ ಮಹಾನಿರ್ದೇಶಕರ ನಿವಾಸಕ್ಕೆ ನುಗ್ಗಿದ ಬಸ್..! ಕಾರಣ..?
ರಮೇಶ್ ಜಾರಕಿಹೊಳಿ(Ramesh Jarkiholi) ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ದೊಡ್ಡ ಪ್ರಚಾರ ನಡೆದಿದೆ. ನಮ್ಮ ಕುಟುಂಬದವರು, ನಮ್ಮ ತಂದೆ ಕಾಲದಿಂದಲೂ ಇಂತಹ ಕೆಲಸ ಮಾಡುತ್ತಿಲ್ಲ. ಸಿಡಿ ಮುಂದಿಟ್ಟುಕೊಂಡು ನಾವೆಂದೂ ರಾಜಕೀಯ ಮಾಡಿಲ್ಲ. ಆ ಹೆಣ್ಣು ಮಗಳು ಸಂತ್ರಸ್ತೆಯಾಗಿದ್ದರೆ, ನಿಜಕ್ಕೂ ಕಿರುಕುಳ ಆಗಿದ್ದರೆ ಏಕೆ ಸಮಾಜದ ಮುಂದೆ ಬರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆ ಹೆಣ್ಣು ಮಗಳ ವಿಡಿಯೋ ಬಂದಿದೆ. ಹೀಗಾಗಿ ಅವರ ಕುಟುಂಬಸ್ತರೋ, ಸಂತ್ರಸ್ತೆಯೋ ಅಥವಾ ನಕಲಿ ಅಂತಿರುವ ರಮೇಶ್ ಜಾರಕಿಹೊಳಿ ಸಂತ್ರಸ್ತರೋ ನೀವೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
CD case : ಅಪರಾಧಿ ನಾನಲ್ಲ..! ಅಪರಾಧ ಎಸಗಿಲ್ಲ.!ಸ್ಫೋಟಕ ಮಾಹಿತಿ ನೀಡಿದ ಜಾರಕಿಹೊಳಿ
ಬ್ಲಾಕ್ ಮೇಲ್ ಮಾಡುವ ಪ್ರಕರಣಗಳಿಗೆ ಅಂತ್ಯ ಎಂದರೆ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂದು ಅರ್ಥ. ಮಹಾಭಾರತ(Mahabharat) ಹಾಗೂ ರಾಮಾಯಣ ಯಾವ ಕಾರಣಕ್ಕೆ ಆಯ್ತು? ಇದೆಲ್ಲಾ ಗಂಡು ಹೆಣ್ಣಿನಿಂದ ಅಲ್ಲವೇ.. ದಿನೇಶ್ ಕಲ್ಲಳ್ಳಿ ಮೇಲೆ ನಾನು ಹಣದ ವಿಚಾರವಾಗಿ ಏನು ಹೇಳಿಲ್ಲ. ಅವರು ಏಕೆ ಆ ರೀತಿ ನನ್ನ ಮೇಲೆ ದೂರು ಹೇಳಿ ವಾಪಸ್ ತೆಗೆದುಕೊಂಡರು ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
Karnataka Budget 2021: ಬಜೆಟ್ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
ಇನ್ನು ಆ ಆರು ಜನಕ್ಕೆ ಯಾರು ಸಲಹೆ ಕೊಟ್ಟರು ಗೊತ್ತಿಲ್ಲ. ನೀವು ತಪ್ಪು ಮಾಡಿಲ್ಲ ಎಂದರೆ ಯಾಕೆ ನ್ಯಾಯಾಲಯಕ್ಕೆ ಹೋಗಬೇಕು. ನಿಮ್ಮ ಮುಖಕ್ಕೆ ನೀವೆ ಮಸಿ ಬಳಿದುಕೊಳ್ಳುತ್ತಿದ್ದೀರಿ. ನಾನು ಕೂಡ ತಪ್ಪು ಮಾಡಿದ್ದೇ ಎಂದು ವಿಧಾನ ಸಭೆಯ ಕಲಾಪದಲ್ಲೇ ಹೇಳಿದ್ದೆ. ಅದನ್ನ ತಿದ್ದುಕೊಂಡು ಬದುಕಬೇಕು. ಕೋರ್ಟ್ಗೆ ಹೋದವರು ಅಮಾಯಕರು. ನೀವು ಇಂತಹ ಸರ್ಕಾರ ತರುವುದಕ್ಕೆ ಹೋಗಬೇಕಿತ್ತಾ?. ಇಲ್ಲೇ ಅರಾಮಾಗಿ ಇರಬಹುದಿತ್ತಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
"ಇದೊಂದು ಕಣ್ಣಾಮುಚ್ಚಾಲೆಯ ಬೋಗಸ್ ಬಜೆಟ್"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.