2 ಸಾವಿರ ಎಕರೆ ಪ್ರದೇಶದಲ್ಲಿ 'ನಾಲೆಡ್ಜ್ ಸಿಟಿ': ಸಿಎಂ ಬಸವರಾಜ್ ಬೊಮ್ಮಾಯಿ

ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಅನುಷ್ಠಾನ ಮಾಡಿದ್ದು, ಇದಕ್ಕೆ ಅವಕಾಶವಿದೆ. 3 ವರ್ಷದಲ್ಲಿ 2 ಪದವಿ ಪಡೆಯಬಹುದು. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಅವಕಾಶ, ನೆರವನ್ನು ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Written by - Prashobh Devanahalli | Edited by - Puttaraj K Alur | Last Updated : Mar 23, 2023, 08:20 PM IST
  • ಬೆಂಗಳೂರಿನ ಹತ್ತಿರ 2 ಸಾವಿರ ಎಕರೆ ಪ್ರದೇಶದಲ್ಲಿ ಜ್ಞಾನನಗರ ನಿರ್ಮಾಣದ ಕನಸಿದೆ
  • ಅಂತಾರಾಷ್ಟ್ರೀಯ ಮಟ್ಟದ ಉತ್ತಮ ವಿವಿಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಬೇಕು
  • ಐಐಟಿ, ಹಾವರ್ಡ್ ವಿವಿಗಳಂತೆ ಇಲ್ಲಿಯೂ ಚೆನ್ನಾಗಿ ಕಲಿತು ನಮ್ಮ ಮಕ್ಕಳ ಭವಿಷ್ಯ ಬರೆಯಬೇಕು
2 ಸಾವಿರ ಎಕರೆ ಪ್ರದೇಶದಲ್ಲಿ 'ನಾಲೆಡ್ಜ್ ಸಿಟಿ': ಸಿಎಂ ಬಸವರಾಜ್ ಬೊಮ್ಮಾಯಿ title=
'2 ಸಾವಿರ ಎಕರೆ ಪ್ರದೇಶದಲ್ಲಿ ನಾಲೆಡ್ಜ್ ಸಿಟಿ'

ಬೆಂಗಳೂರು: ಬೆಂಗಳೂರಿನ ಹತ್ತಿರ 2 ಸಾವಿರ ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್ ಸಿಟಿ’ ನಿರ್ಮಿಸುವ ಕನಸಿದ್ದು, ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಬೆಂಗಳೂರು ನಗರ ವಿವಿಯ ನವೀಕೃತ ಆವರಣ’ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ‘ರಾಜ್ಯ ಮಾತ್ರವಲ್ಲ ದೇಶದ ಉತ್ತಮ ವಿವಿಗಳು ಅಲ್ಲಿಗೆ ಬರಬೇಕು’ ಎಂದು ಹೇಳಿದರು.

‘ವಿದೇಶದಲ್ಲಿ ವ್ಯಾಸಂಗ ಮಾಡಲು ಅವಕಾಶವಿಲ್ಲದ ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು. ಹಾರ್ವರ್ಡ್ ವಿವಿ, ಐಐಟಿಗಳನ್ನು ಅಲ್ಲಿಗೆ ತರುವ ಮೂಲಕ ವಿದ್ಯಾರ್ಥಿಗಳು ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳುವಂತಾಗಬೇಕು. ಸೆಂಟ್ರಲ್ ಕಾಲೇಜು ಇರುವ ಭಾಗದಲ್ಲಿ ಹಲವು ವಿವಿಗಳಿವೆ. ಆದ್ದರಿಂದ ‘ಬೆಂಗಳೂರು ಶಿಕ್ಷಣ ಜಿಲ್ಲೆ’ಯಾಗಿ ಘೋಷಿಸುತ್ತಿದ್ದೇವೆ’ ಎಂದು ಹೇಳಿದರು.

ಇದನ್ನೂ ಓದಿ: ಮಾಜಿ ಸಿಎಂ ಎಸ್. ಎಂ.ಕೃಷ್ಣಾಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ

ಬೆಂಗಳೂರು ವಿಶ್ವವಿದ್ಯಾಲಯದ ಭಾಗದಲ್ಲಿ 6  ಶೈಕ್ಷಣಿಕ ಸಂಸ್ಥೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಅದರ ಅಭಿವೃದ್ಧಿಗೆ ಹಣವನ್ನು ನೀಡಲಾಗುತ್ತಿದೆ. ಈ ಎಲ್ಲಾ ಸಂಸ್ಥೆಗಳೂ ಇದಕ್ಕೆ ಕೊಡುಗೆ ನೀಡಲಿವೆ.ಇಡೀ ವಿಶ್ವದಲ್ಲಿಯೇ ಒಂದೇ ಕಡೆ ಇಷ್ಟು ದೊಡ್ಡ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳಿಲ್ಲ. ವಿದ್ಯಾರ್ಥಿಗಳನ್ನು ಆಕರ್ಷಿಸಲು ಹೊಸ ಪ್ರಯೋಗವನ್ನು ಮಾಡುತ್ತಿದ್ದೇವೆ. ಇದು ಯಶಸ್ವಿಯಾದಲ್ಲಿ ಹಲವು ಕಡೆ ಶಿಕ್ಷಣ ಜಿಲ್ಲೆಯನ್ನು ಘೋಷಿಸಲಾಗುವುದು ಎಂದು ಹೇಳಿದರು.

ಈ ಯೋಜನೆ ಯಶಸ್ವಿಯಾದರೆ ವಿದ್ಯಾರ್ಥಿಗಳಿಗೂ ಹೆಚ್ಚು ಅನುಕೂಲವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಜಗತ್ತಿನಲ್ಲಿಯೇ ಅತ್ತುತ್ತಮ ಶಿಕ್ಷಣ ನೀತಿಯಾಗಿದೆ. ಎನ್‌ಇಪಿಯಲ್ಲಿ ಬಹುಶಿಸ್ತೀಯ ಶಿಕ್ಷಣ ಅಳವಡಿಕೆ. ಒಂದೇ ಸಮಯದಲ್ಲಿ ಡಬಲ್ ಡಿಗ್ರಿ ಸೇರಿ ವಿವಿಧ ಅನುಕೂಲಗಳಿವೆ. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಅವಕಾಶ, ನೆರವನ್ನು ನೀಡಲಾಗುತ್ತದೆ. 3 ವರ್ಷ ಸಂಶೋಧನೆ ಮಾಡಿ  NEP ಅನುಷ್ಠಾನ ಮಾಡಲಾಗಿದೆ. ಕರ್ನಾಟಕ ಇದನ್ನು ಅನುಷ್ಠಾನ ಮಾಡಿದ ಮೊದಲ ರಾಜ್ಯ ಎಂದು ಹೇಳಿದರು.

ಇದನ್ನೂ ಓದಿ: ‘ಗಾಂಧಿ’ ಎಂಬ ಉಪನಾಮವನ್ನು ಕದ್ದ ಈ ವಿದೇಶಿ ಕೈಗೊಂಬೆ ಈಗ ‘ಗಾಂಧೀಜಿ’ಯ ಉಲ್ಲೇಖ ಕದಿಯಲು ಯತ್ನಿಸುತ್ತಿದೆ!-ಬಿಜೆಪಿ

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವ ಪ್ರಭು ಚೌಹಾಣ್, ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News