Nalin Kumar Kateel : ರಾಹುಲ್ ಗಾಂಧಿಯ ಒಬ್ಬ 'ಡ್ರಗ್ ಪೆಡ್ಲರ್ ಮತ್ತು ವ್ಯಸನಿ' : ನಳಿನ್ ಕುಮಾರ್ ಕಟೀಲ್

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು "ಭಯೋತ್ಪಾದಕ" ಎಂದು ಕರೆದ ಮೂರು ವಾರಗಳ ನಂತರ ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡಿದ್ದಾರೆ.

Written by - Channabasava A Kashinakunti | Last Updated : Oct 20, 2021, 12:25 PM IST
  • ಹೊಸ ವಿವಾದ ಹುಟ್ಟು ಹಾಕಿದ ನಳಿನ್ ಕುಮಾರ್ ಕಟೀಲ್
  • ರಾಹುಲ್ ಗಾಂಧಿ ಒಬ್ಬ 'ಡ್ರಗ್ ಪೆಡ್ಲರ್ ಮತ್ತು ವ್ಯಸನಿ
  • ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಳಿನ್ ಕುಮಾರ್
Nalin Kumar Kateel : ರಾಹುಲ್ ಗಾಂಧಿಯ ಒಬ್ಬ 'ಡ್ರಗ್ ಪೆಡ್ಲರ್ ಮತ್ತು ವ್ಯಸನಿ' : ನಳಿನ್ ಕುಮಾರ್ ಕಟೀಲ್ title=

ಬೆಂಗಳೂರು : ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ 'ಡ್ರಗ್ ಪೆಡ್ಲರ್ ಮತ್ತು ವ್ಯಸನಿ' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆಯುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.

ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel), ಇದು ನಿಮ್ಮ (ಕಾಂಗ್ರೆಸ್) ಕಥೆ. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ, ನಿಮ್ಮ ರಾಷ್ಟ್ರೀಯ ಉಪಾಧ್ಯಕ್ಷ ಕೂಡ ಜಾಮೀನಿನಲ್ಲಿದ್ದಾರೆ. ಆತ ಆದರ್ಶಪ್ರಾಯವಾಗಿ ಜೈಲಿನಲ್ಲಿರಬೇಕಾಗಿತ್ತು ಆದರೆ ತನಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಬೇಡಿಕೊಂಡಿದ್ದಾರೆ. ನಿಮ್ಮ ರಾಜ್ಯ ಅಧ್ಯಕ್ಷರು ಕೂಡ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.

ಇದನ್ನೂ ಓದಿ : Helpdesk: ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪಿಸಿದ ರಾಜ್ಯ ಸರ್ಕಾರ

"ನೀವು ಯಾವ ನೈತಿಕತೆಯನ್ನು ಹೊಂದಿದ್ದೀರಿ? ಸೋನಿಯಾ ಗಾಂಧಿ(Sonia Gandhi) ಅವರು ಎಐಸಿಸಿ ಅಧ್ಯಕ್ಷೆ ಎಂದು ಹೇಳುತ್ತಾರೆ ಆದರೆ ನಿಮ್ಮ ನಾಯಕರು ರಾಹುಲ್ ಗಾಂಧಿ(Rahul Gandhi) ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹೇಳುತ್ತಾರೆ. ರಾಹುಲ್ ಗಾಂಧಿ ಯಾರು? ಅವನು ಡ್ರಗ್ ಪೆಡ್ಲರ್ ಮತ್ತು ಡ್ರಗ್ ಅಡಿಕ್ಟ್. ನಾನು ಇದನ್ನು ಹೇಳುತ್ತಿಲ್ಲ, ಒಮ್ಮೆ ವರದಿ ಮಾಡಲಾಗಿದೆ. ಅಂತಹ ಜನರು ಹೇಗೆ ಪಕ್ಷವನ್ನು ನಡೆಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರನ್ನು "ಭಯೋತ್ಪಾದಕ" ಎಂದು ಕರೆದ ಮೂರು ವಾರಗಳ ನಂತರ ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡಿದ್ದಾರೆ.

ಗಾಂಧಿ ವಿರುದ್ಧದ ಟೀಕೆಗಳು ಬಗ್ಗೆ ಕಟೀಲ್ ಕ್ಷಮೆ ಯಾಚಿಸಬೇಕು ಮತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರೆ.

" ಕಟೀಲ್ ಅವರ ಹೇಳಿಕೆಗಳು "ಬಿಜೆಪಿಯ ಸಂಸ್ಕೃತಿಯನ್ನು" ಪ್ರತಿಬಿಂಬಿಸುತ್ತದೆ. ಕಟೀಲ್ ಅವರ ಅಜ್ಞಾನ ಮತ್ತು ಭಾಷೆಯ ಮಟ್ಟವು ಆಘಾತಕಾರಿಯಾಗಿದೆ. ನಾನು ಬಿಜೆಪಿ(BJP)ಯನ್ನು ಖಂಡಿಸುತ್ತೇನೆ ಮತ್ತು ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ.  ಎಂದು ತಮಿಳುನಾಡು, ಪುದುಚೇರಿ ಮತ್ತು ಗೋವಾ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡು ರಾವ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ನಳೀನ್ ಕುಮಾರ್ ಕಟೀಲ್ ರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ಸಿದ್ದರಾಮಯ್ಯ ಅಗ್ರಹ

"ಈ ಭಾಷೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಅಥವಾ ಎಂಪಿಗೆ ಸರಿಹೊಂದುತ್ತದೆಯೇ? ಮೋದಿ(PM Modi) ಮತ್ತು ಶಾ ಇಂತಹ ಜನರನ್ನು ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ, ದ್ವೇಷವನ್ನು ಪ್ರಚೋದಿಸುವ ಜನರು, ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಾರೆ, ಗೊಂದಲವನ್ನು ಸೃಷ್ಟಿಸುತ್ತಾರೆ "ಎಂದು ರಾವ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News