ದೆಹಲಿ ನಾಯಕರಿಗೆ ಡಿಕೆಶಿ ಹತ್ತಿರವಾಗಬಹುದೆಂಬ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ: ಬಿಜೆಪಿ

ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಅವರಿಗೆ, ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಪ್ರಭಾವ ಮಾಸುತ್ತಿರುವುದು ತಿಳಿದಿದೆ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Feb 26, 2022, 12:53 PM IST
  • ಡಿಕೆಶಿ ದೆಹಲಿ ನಾಯಕರಿಗೆ ಹತ್ತಿರವಾಗಬಹುದೆಂಬ ಭಯ ಸಿದ್ದರಾಮಯ್ಯರಿಗೆ ಕಾಡುತ್ತಿದೆ
  • ಮೇಕೆದಾಟು ಪಾದಯಾತ್ರೆ ಪ್ರಹಸನದಲ್ಲಿ ಲಾಭವಾಗುವುದು ಡಿಕೆಶಿಯವರಿಗೆ ಎಂದು ಸಿದ್ದರಾಮಯ್ಯಗೆ ತಿಳಿದಿದೆ
  • ಕಾಂಗ್ರೆಸ್ ಆಂತರಿಕ ಕಲಹ ಯಾವ ಸ್ವರೂಪದಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿಕೆಯಿಂದಲೇ ತಿಳಿಯಬಹುದು
ದೆಹಲಿ ನಾಯಕರಿಗೆ ಡಿಕೆಶಿ ಹತ್ತಿರವಾಗಬಹುದೆಂಬ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ: ಬಿಜೆಪಿ title=
ಕಾಂಗ್ರೆಸ್ ವಿರುದ್ಧ ಫೆ.27 ಮತ್ತು 28ರಂದು ಬಿಜೆಪಿ ಪ್ರತಿಭಟನೆ

ಬೆಂಗಳೂರು: ಮೇಕೆದಾಟು ಪಾದಯಾತ್ರೆಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ದೆಹಲಿಯ ನಾಯಕರಿಗೆ ಹತ್ತಿರ ಆಗಬಹುದೆಂಬ ಭಯ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ. #ಕಾಂಗ್ರೆಸ್‌ಕಲಹ ಹ್ಯಾಶ್ ಟ್ಯಾಗ್ ಬಳಿಸಿ ಬಿಜೆಪಿ ಶನಿವಾರ ಸರಣಿ ಟ್ವೀಟ್ ಮಾಡಿದೆ.

‘ಕರ್ನಾಟಕ ಕಾಂಗ್ರೆಸ್(Congress) ಮನೆಯಲ್ಲಿ, ಈಗ ಮನೆಯೊಂದು ಮೂರು ಬಾಗಿಲು! ದೆಹಲಿ ಪ್ರವಾಸದ ಮೂಲಕ ತೇಪೆ ಹಚ್ಚುವ ಕಾರ್ಯ ನಡೆದಿದೆ. ಆದರೂ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ಕಾಂಗ್ರೆಸ್ ಆಂತರಿಕ ಕಲಹ ಯಾವ ಸ್ವರೂಪದಲ್ಲಿದೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯಿಂದಲೇ ತಿಳಿಯಬಹುದು’ ಅಂತಾ ಕುಟುಕಿದೆ.

ಇದನ್ನೂ ಓದಿ: 'ರಾಜ್ಯ ಮತ್ತು ಸಂವಿಧಾನವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು'

‘ಮೇಕೆದಾಟು ಪಾದಯಾತ್ರೆಯಿಂದ ಡಿಕೆಶಿಯವರು ದೆಹಲಿಯ ನಾಯಕರಿಗೆ ಹತ್ತಿರ ಆಗಬಹುದೆಂಬ ಭಯ ಸಿದ್ದರಾಮಯ್ಯರಿಗೆ ಕಾಡುತ್ತಿದೆ. ಈ ಭಯದ ನಡುವೆಯೂ ಮೇಕೆದಾಟು ಪಾದಯಾತ್ರೆ(Mekedatu Project) ಎಂಬ #ಸುಳ್ಳಿನಜಾತ್ರೆ ಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಉದರ ನಿಮಿತ್ತಂ ಬಹುಕೃತ ವೇಷಂ!!!’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

‘ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ(Siddaramaiah)ಅವರಿಗೆ, ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಪ್ರಭಾವ ಮಾಸುತ್ತಿರುವುದು ತಿಳಿದಿದೆ. ಮೇಕೆದಾಟು ಪಾದಯಾತ್ರೆ ಪ್ರಹಸನದಲ್ಲಿ ಲಾಭವಾಗುವುದು ಡಿಕೆಶಿಯವರಿಗೆ ಎಂದು ಸಿದ್ದರಾಮಯ್ಯಗೆ ತಿಳಿದಿದೆ. ಸಿದ್ದರಾಮಯ್ಯ ಅವರೇ ಇದು ನಿಮಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಅಲ್ವೇ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: Mekedatu Project: ‘ಪರಿಸರ ಇಲಾಖೆ ಅನುಮತಿ ಪಡೆಯಲು ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ’

ಜನವಿರೋಧಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

#ಜನವಿರೋಧಿಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಿಸಿ ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ(BJP), ‘ಜನವಿರೋಧಿ, ಸದನ ವಿರೋಧಿ, ಭಯೋತ್ಪಾದಕರ ಪರ ಇರುವ ಕಾಂಗ್ರೆಸ್ ವಿರುದ್ಧ ಫೆಬ್ರವರಿ 27 ಮತ್ತು 28 ರಂದು ಬಿಜೆಪಿ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ(Protest Against Congress)ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News