#ಉತ್ತರಕೊಡಿಶಾ: ಗೃಹ ಸಚಿವ ಅಮಿತ್ ಶಾ ಗೆ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ

ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿವಾದ ಬಗೆ ಹರಿಯಲಿದೆ ಎಂದಿದ್ದೀರಿ ಎಂದು ರಾಜ್ಯಕ್ಕೆ ಬಿಜೆಪಿ ನೀಡಿದ್ದ ಭರವಸೆಯನ್ನು ನೆನಪಿಸಿದ ರಾಜ್ಯ ಕಾಂಗ್ರೆಸ್.  

Last Updated : Jan 18, 2020, 12:50 PM IST
#ಉತ್ತರಕೊಡಿಶಾ: ಗೃಹ ಸಚಿವ ಅಮಿತ್ ಶಾ ಗೆ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ title=
File Image

ಬೆಂಗಳೂರು: ಒಂದೆಡೆ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರಚಾರ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ರಾಜ್ಯದ ಜನತೆಗೆ ಬಿಜೆಪಿ ನೀಡಿರುವ ಭರವಸೆಗಳನ್ನು ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ನೆನಪಿಸುತ್ತಿದೆ. 

ಹೌದು, ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರಚಾರ ಮಾಡಲು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷರೂ ಆಗಿರುವ  ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ಸಭೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಏತನ್ಮಧ್ಯೆ '#ಉತ್ತರಕೊಡಿಶಾ' ಎಂಬ ಹ್ಯಾಶ್ ಟ್ಯಾಗ್ ಮೂಲಕ  ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗೈದಿದೆ.

@AmitShah ಅವರೇ, ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿವಾದ ಬಗೆ ಹರಿಯಲಿದೆ ಎಂದಿದ್ದಿರಿ, ಗೋವಾ ಸಿಎಂ ನೀರು ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ @BSYBJP ಅವರಿಗೆ ಪತ್ರ ಬರೆದಿದ್ದರು. ಇದೆಲ್ಲಾ ಕೇವಲ ಚುನಾವಣಾ ಕುತಂತ್ರವೇ? ಇನ್ನೂ ಮಹದಾಯಿ ವಿವಾದ ಬಗೆಹರಿಸಲಿಲ್ಲವೇಕೆ? #ಉತ್ತರಕೊಡಿಶಾ ಎಂದು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.

Trending News