ಚಿಕ್ಕೋಡಿ: ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿರುವ ಚಂದ್ರು ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಸಿಐಡಿ ತನಿಖೆ ಆಗುವುದಾದರೆ ಆಗಲಿ ತಪ್ಪೇನು’ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೊಡನಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಮ್ಮ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಚಂದ್ರು ಕೊಲೆ ಪ್ರಕರಣ ಸಂಬಂಧ ಅವರು ಆಕಸ್ಮಿಕವಾಗಿ ಆತುರವಾಗಿ ಬಂದ ಮಾಹಿತಿ ಮೇಲೆ ಮಾತನಾಡಿದ್ದಾರೆ. ಈಗ ಅದೇ ವಿಚಾರ ಚರ್ಚೆ ಮಾಡುವುದು ಸರಿ ಅಲ್ಲವೆಂದು ಹೇಳಿದಿದ್ದಾರೆ.
ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಲು ನಿರ್ಧಾರ: ಸಿಎಂ ಬೊಮ್ಮಾಯಿ
ಪೊಲೀಸ್ ಕಮೀಷನರ್ ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಗೃಹ ಸಚಿವರು ಹೇಳಿದ ಹೇಳಿಕೆಯನ್ನು ಅವರು ಸರಿಪಡಿಸಿದ್ದಾರೆ. ಈ ಕೊಲೆ ಪ್ರಕರಣ ಸಿಐಡಿ ತನಿಖೆ ಆಗುವುದಾದರೆ ಆಗಲಿ ತಪ್ಪೇನು. ಸಿಎಂ ಅವರೇ ಹೇಳಿದ ಮೇಲೆ ಚರ್ಚೆ ಎನಿದೆ? ಗ್ರಹ ಮಂತ್ರಿಗಳ ವಿರುದ್ಧ ಅಧಿಕಾರಿಗಳು ಯಾರು ತಿರುಗಿ ಬಿದ್ದಿಲ್ಲ. ಯಾರೋ ಮಾಹಿತಿ ಕೊಟ್ಟ ತಕ್ಷಣ ಗೃಹ ಸಚಿವರು ಮಾತನಾಡಿದ್ದಾರೆ. ಅವರು ಒಂದೆರಡು ನಿಮಿಷ ತಡೆದು ಮಾತನಾಡಬೇಕಾಗಿತ್ತು. ಪೂರ್ಣ ಮಾಹಿತಿ ಪಡೆದು ಹೇಳಿಕೆ ನೀಡಿದ್ದರೆ ಸರಿ ಹೋಗುತ್ತಿತ್ತು ಎಂದು ಹೇಳಿದ್ದಾರೆ.
ಸರಿಯಾದ ಮಾಹಿತಿ ಬಂದ ಮೇಲೆ ನಾನು ಹೇಳಿದ್ದು ಬೇರೆ ರೀತಿ ಇದೆ ಎಂದು ಗೃಹ ಸಚಿವರು ಒಪ್ಪಿಕೊಂಡಿದ್ದಾರೆ. ಅವರು ಒಪ್ಪಿಕೊಂಡ ಮೇಲೂ ಚರ್ಚೆ ಮಾಡುವುದರಲ್ಲಿ ಎನು ಅರ್ಥವಿಲ್ಲವೆಂದು ತಿಳಿಸಿದ್ದಾರೆ.
ಎಡವಟ್ ಹೇಳಿಕೆ ನೀಡಿದ್ದ ಗೃಹ ಸಚಿವರು
ಬೆಂಗಳೂರಿನ ಜೆಜೆ ನಗರದಲ್ಲಿ ನಡೆದ ಚಂದ್ರು ಹತ್ಯೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆರೋಪಿಗಳು ಉರ್ದು ಮಾತಾಡಲು ಆತನಿಗೆ ಹೇಳಿದ್ದಾರೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಲು ಬರುವುದಿಲ್ಲವೆಂದು ಹೇಳಿದ್ದಕ್ಕೆ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚೂರಿಯಿಂದ ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕನಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಕೆಲವರ ಬಂಧನ ಆಗಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅವರು ತಮ್ಮ ಹೇಳಿಕೆ ತಪ್ಪಾಗಿದೆ ಅಂತಾ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ‘ರಾಮನವಮಿ ಶೋಭಾಯಾತ್ರೆ ಹೆಸರಿನಲ್ಲಿ ಶಾಂತಿಗೆ ಭಂಗ ತರುವುದು ಬೇಡ’
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.