ಸಿದ್ದರಾಮಯ್ಯನವರ ವಯಸ್ಸು ಎಷ್ಟು? ಸದನದಲ್ಲಿ ಜನ್ಮಪತ್ರದ ಸ್ವಾರಸ್ಯಕರ ಚರ್ಚೆ!

ಆರ್ ವಿ ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಭಿನಂದನಾ ಭಾಷಣ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ವಯಸ್ಸಿನ ಬಗ್ಗೆ ಚರ್ಚೆ ಎಲ್ಲರ ಗಮನ ಸೆಳೆಯಿತು.

Written by - Prashobh Devanahalli | Edited by - Manjunath N | Last Updated : Dec 28, 2022, 01:44 PM IST
  • ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ,‌ ನೀವು ಹೀಗೆ ಹೇಳಿದರೆ ನಾವು ತನಿಖೆ ಮಾಡಿಸಬೇಕಾಗುತ್ತೆ ಎಂದರು.
  • ಸದನ ಸಮಿತಿ ಮಾಡೋನಾ ಬೇಕಾದ್ರೆ ಎಂದು ಸ್ಪೀಕರ್ ತಮಾಷೆ ಮಾಡಿದರು
  • ಆಗಲಿ,‌ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಸದನ ಸಮಿತಿ ರಚನೆ ಮಾಡಿ ಎಂದು ಸಿದ್ದರಾಮಯ್ಯ, ಹಾಸ್ಯ ಮಾಡಿದರು
ಸಿದ್ದರಾಮಯ್ಯನವರ ವಯಸ್ಸು ಎಷ್ಟು? ಸದನದಲ್ಲಿ ಜನ್ಮಪತ್ರದ ಸ್ವಾರಸ್ಯಕರ ಚರ್ಚೆ! title=
screengrab

ಬೆಳಗಾವಿ:  ಆರ್ ವಿ ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿರುವ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಭಿನಂದನಾ ಭಾಷಣ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ವಯಸ್ಸಿನ ಬಗ್ಗೆ ಚರ್ಚೆ ಎಲ್ಲರ ಗಮನ ಸೆಳೆಯಿತು.

ಶಾಸಕ ಆರ್ ವಿ ದೇಶಪಾಂಡೆಗೆ ಅಭಿನಂದನೆ ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯ,ದೇಶಪಾಂಡೆ ಅವರು, ‌ನನಗಿಂತ ನಾಲ್ಕು ತಿಂಗಳು ದೊಡ್ಡವರು . ಆದರೆ  ನನಗಿಂತ ಹೆಚ್ಚು ವಯಸ್ಸು ಆದ ಹಾಗೆ ಕಾಣುತ್ತಾರೆ ಎಂದರು.

ಇದನ್ನೂ ಓದಿ: ಕಾರು ಹಾಗೂ ಬೈಕ್ ಮಧ್ಯೆ ಡಿಕ್ಕಿ, ಸ್ಥಳದಲ್ಲಿಯೇ ಮೂವರ ಸಾವು

ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಕೃಷ್ಣ ಬೈರೇಗೌಡ, 'ಸಿದ್ದರಾಮಯ್ಯ ಅವರನ್ನು ನೋಡಿದರೆ ನನಗಂತೂ ಅನುಮಾನ ಬರುತ್ತದೆ. ಇವರ ಬರ್ತ್ ಸರ್ಟಿಫಿಕೇಟ್ ಜನ್ವಿನ್ ಇಲ್ಲ ಎಂದು.ಇವರಿಗೆ 75 ವರ್ಷ ಆಗೇ ಇಲ್ಲ',ನಮ್ಮ ನಾಯಕ ರಾಹುಲ್ ಗಾಂಧಿ ಹುಬ್ಬಳ್ಳಿ ಮೀಟಿಂಗ್ ನಲ್ಲಿ ಇವರ ಕೈಹಿಡಿದು ಸಿದ್ದರಾಮಯ್ಯ ವಯಸ್ಸಿನ ಬಗ್ಗೆ ಪ್ರಶ್ನೆ ಮಾಡಿದ್ದರು. ಸಿದ್ದರಾಮಯ್ಯಜಿ ನಿಮ್ಮ ನಿಜ ವಯಸ್ಸು ಎಷ್ಟು? ನಿಮಗೆ 75 ವರ್ಷ ಆಗಿದೆ ಎಂದು ಅನ್ನಿಸೋದಿಲ್ಲ ಎಂದಿದ್ದರು. ಆದರೂ ಇವರ ಆರೋಗ್ಯ ನೋಡಿ ನಮಗೆ ಖುಷಿ ಆಗುತ್ತೆ ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ,‌ ನೀವು ಹೀಗೆ ಹೇಳಿದರೆ ನಾವು ತನಿಖೆ ಮಾಡಿಸಬೇಕಾಗುತ್ತೆ ಎಂದರು.ಇದಕ್ಕೆ ಹಾಗಾದರೆ ಒಂದು ತನಿಖೆಗೆ ಆದೇಶ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ,‌ ಸದನ ಸಮಿತಿ ಮಾಡೋನಾ ಬೇಕಾದ್ರೆ ಎಂದು ಸ್ಪೀಕರ್ ತಮಾಷೆ ಮಾಡಿದರು. ಆಗಲಿ,‌ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಸದನ ಸಮಿತಿ ರಚನೆ ಮಾಡಿ  ಎಂದು ಸಿದ್ದರಾಮಯ್ಯ, ಹಾಸ್ಯ ಮಾಡಿದರು 

'ನನ್ನ ವಯಸ್ಸು 75 ಇದು ನಿಜ, ಐದಾರು‌ ತಿಂಗಳು ಹೆಚ್ಚು ಕಡಿಮೆ ಇರಬಹುದು ಗೊತ್ತಿಲ್ಲ . 3-8-1947 ಎಂದು ಮೇಷ್ಟ್ರು ಬರೆದುಕೊಂಡಿರುವ ದಿನಾಂಕ. ದೇಶಪಾಂಡೆ ತಂದೆ ಲಾಯರ್ ನಮ್ಮ ಅಪ್ಪ ಹೊಲ ಉಳುವವರಾಗಿದ್ದರು.ಆದ್ದರಿಂದ ದೇಶಪಾಂಡೆ ಡೇಟ್ ಆಫ್ ಬರ್ತ್ ಸರಿ ಇದೆ. ನನ್ನದು ಐದಾರು ತಿಂಗಳು ಹೆಚ್ಚು ಕಡಿಮೆ ಇರಬಹುದು', ಎಂದು ಸಿದ್ದರಾಮಯ್ಯ ಹೇಳಿದರು,

ಈ ವೇಳೆ ಸಿಎಂ ಬೊಮ್ಮಾಯಿ ಮಧ್ಯಪ್ರವೇಶ ಮಾಡಿ,‌ 'ದೇಶಪಾಂಡೆ ತಂದೆ ಲಾಯರ್, ನಿಮ್ಮ ತಂದೆ ಹೊಲ‌ಉಳುತ್ತಿದ್ದರು. ಆದರೂ ನೀವು ಬಹಳ ಫಾಸ್ಟ್ ಆಗಿ ಅವರನ್ನು ಓವರ್ ಟೇಕ್ ಮಾಡಿ ಸಿಎಂ ಆಗಿ ಬಿಟ್ರಿ' ಎಂದು ಸಿದ್ದು ಕಾಲೆಳೆದರು.

ಇದನ್ನೂ ಓದಿ : ಮಿಡ್‍ನೈಟ್ ಎಲಿಮಿನೇಷನ್, ‘ಬಿಗ್ ಬಾಸ್’ ಮನೆಯಿಂದ ಗುರೂಜಿ ಔಟ್!

ಇದಕ್ಕೆ, ಬಿಎಸ್ ವೈ ಮುಂದಿನ ಚುನಾವಣೆ ನಿಲ್ಲಲ್ಲ. ಆದರೆ ದೇಶಪಾಂಡೆ ಅವರಿಗೆ ನಾನೇ‌‌ ಹೇಳಿದ್ದೆ ಮತ್ತೊಂದು ಚುನಾವಣೆ ನಿಲ್ಲಲು. ಚುನಾವಣಾ ವ್ಯವಸ್ಥೆ ಕೆಟ್ಟು ಹೋಗಿದೆ ಬೇಡ ಎಂದಿದ್ದರು. ಆದರೆ ನಾನೂ ಒಂದು ಚುನಾವಣೆ‌ ನಿಲ್ತೇನೆ ನೀವೂ ನಿಲ್ಲಿ ಎಂದು ಹೇಳಿದ್ದೆ ಎಂದರು ಸಿದ್ದರಾಮಯ್ಯ.

ಅವರ ಕ್ಷೇತ್ರದ ಕೆಲಸ ಮಾಡೋದು ನೋಡಿದ್ರೆ ಖಂಡಿತಾ ನಿಲ್ಲುತ್ತಾರೆ, ಅನುಮಾನ ಬೇಡ ಎಂದು ಸಿಎಂ ಬೊಮ್ಮಾಯಿ ಅವರು ದೇಶಪಾಂಡೆ ಕಾಲೆಳೆದರು. ಹೀಗೆ ಸಿದ್ದರಾಮಯ್ಯ ವಯಸ್ಸು ಸದನದಲ್ಲಿ ಕೆಲ ಹೊತ್ತು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News