ಹಳೆಯ ಪೊರಕೆಯನ್ನು ಈ ಮೂರು ದಿನ ಮನೆಯಿಂದ ಹೊರ ಹಾಕಬಾರದು.!

ಹಳೆಯದಾದ ಪೊರಕೆಯನ್ನು ಮೆನಯಿಂದ ಹೊರ ಹಾಕುವುದಕ್ಕೂ ಒಂದು ನಿಯಮವಿದೆ. ಯಾವಾಗ ಬೇಕೋ ಆವಾಗ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬಾರದು.

Written by - Ranjitha R K | Last Updated : Sep 2, 2022, 03:53 PM IST
  • ಪೊರಕೆಯನ್ನು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
  • ಇದು ನಮ್ಮ ಮನೆಯಲ್ಲಿ ಹಣದ ಕೊರತೆಯನ್ನು ನೀಗಿಸುತ್ತದೆ
  • ಪೊರಕೆಯನ್ನು ಮನೆಯಿಂದ ಹೊರ ಹಾಕುವುದಕ್ಕೂ ನಿಯಮವಿದೆ
ಹಳೆಯ ಪೊರಕೆಯನ್ನು ಈ ಮೂರು ದಿನ ಮನೆಯಿಂದ ಹೊರ ಹಾಕಬಾರದು.!  title=
Vastu tips (file photo)

ಬೆಂಗಳೂರು : ಹಿಂದೂ ನಂಬಿಕೆಗಳ ಪ್ರಕಾರ, ಪೊರಕೆಯನ್ನು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯನ್ನು ಪೊರಕೆಯಿಂದ ಶುಚಿಗೊಳಿಸಲಾಗುತ್ತದೆ. ಪೊರಕೆಯನ್ನು ಪೂಜಿಸಲಾಗುತ್ತದೆ. ಇದು ನಮ್ಮ ಮನೆಯಲ್ಲಿ ಹಣದ ಕೊರತೆಯನ್ನು ನೀಗಿಸುತ್ತದೆ ಮತ್ತು ಸಂಪತ್ತು ಹರಿಯುವಂತೆ ಮಾಡುತ್ತದೆ ಎನ್ನುವುದು ನಂಬಿಕೆ. ಆದರೆ, ಹಳೆಯದಾದ ಪೊರಕೆಯನ್ನು ಮನೆ ಯಿಂದ ಹೊರ ಹಾಕುವುದಕ್ಕೂ ಒಂದು ನಿಯಮವಿದೆ. ಯಾವಾಗ ಬೇಕೋ ಆವಾಗ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬಾರದು. ಹೇಗೆ ಬೇಕೋ ಹಾಗೆ ಪೊರಕೆಯನ್ನು ಎಸೆಯಬಾರದು. ಒಂದು ವೇಳೆ ಹೀಗೆ ಮಾಡಿದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  

ಪೊರಕೆಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದಿನ ಲೇಖನದಲ್ಲಿ ಪೊರಕೆಗೆ ಸಂಬಂಧಪಟ್ಟ ನಿಯಮಗಳ ಬಗ್ಗೆ ಹೇಳಲಾಗಿದೆ. ಪೊರಕೆಯನ್ನು ಯಾವ ದಿನ ಖರೀದಿಸಬೇಕು? ಯಾವ ದಿನ ಪೊರಕೆಯನ್ನು ಮನೆಯಿಂದ ಹೊರ ಹಾಕಬೇಕು? ಎನ್ನುವುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ.  ಪೊರಕೆ ಖರೀದಿಸುವುದಕ್ಕೆ ಯಾವ ರೀತಿ ನಿಯಮವಿದೆಯೋ, ಪೊರಕೆ ಎಸೆಯುವುದಕ್ಕೂ ನಿಯಮಗಳನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. 

ಇದನ್ನೂ ಓದಿ Ratna: ಈ ರತ್ನವನ್ನು ಧರಿಸುವುದು 2 ರಾಶಿಯವರಿಗೆ ತುಂಬಾ ಮಂಗಳಕರ: ಒಂದೇ ರಾತ್ರಿಯಲ್ಲಿ ಬದಲಾಗುತ್ತೆ ಅದೃಷ್ಟ!

 ಪೊರಕೆ ಬಗೆಗಿನ ಪ್ರಮುಖ ವಿಷಯಗಳು : 
-ನಿಮ್ಮ ಮನೆಯಲ್ಲಿ ಹಳೆಯ ಪೊರಕೆ ಇದ್ದರೆ, ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಶನಿವಾರ,  ಹೋಳಿಕಾ ದಹನದ ನಂತರ, ಗ್ರಹಣದ ನಂತರ ಮತ್ತು ಅಮಾವಾಸ್ಯೆಯ ದಿನದಂದು ಪೊರಕೆಯನ್ನುಮನೆಯಿಂದ ಹೊರ ಹಾಕಬಹುದು. 

-ಹಳೆಯ ಪೊರಕೆ ಅಥವಾ ಮುರಿದ ಪೊರಕೆಯನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ವಾಸ್ತು ಪ್ರಕಾರ ಹೀಗೆ ಮಾಡುವುದು ತಪ್ಪು ಎಂದು  ಹೇಳಲಾಗುತ್ತದೆ. ಇದರಿಂದ ಮನೆಗೆ ನೆಗೆಟಿವ್ ಎನರ್ಜಿ ಬರುತ್ತದೆ.

ಇದನ್ನೂ ಓದಿ : ಈ ಹೊತ್ತಿನಲ್ಲಿ ಕುಡಿಯುವ ನೀರು ವಿಷದಂತೆ ಕೆಲಸ ಮಾಡುತ್ತದೆ .! ನೀವೂ ಈ ತಪ್ಪು ಮಾಡುತ್ತಿದ್ದರೆ ಸರಿಪಡಿಸಿಕೊಳ್ಳಿ

-ಪೊರಕೆ ಎಸೆಯುವಾಗ ಸ್ವಲ್ಪ ಜಾಗ್ರತೆ ವಹಿಸಬೇಕು. ಪೊರಕೆಯನ್ನು ಲಕ್ಷ್ಮೀ  ದೇವಿಯ ರೂಪವೆಂದು ಪರಿಗಣಿಸಿರುವುದರಿಂದ, ಪೊರಕೆಯ ಮೇಲೆ ಯಾರೂ ಕಾಲಿಡದಂತಹ ಸ್ಥಳದಲ್ಲಿ ಅದನ್ನು ಎಸೆಯಿರಿ. ಪೊರಕೆಯನ್ನು ಚರಂಡಿಯಲ್ಲಿ ಅಥವಾ ಯಾವುದೇ ಮರದ ಬಳಿ ಎಸೆಯಬಾರದು.
- ಯಾರೂ ಪೊರಕೆಯನ್ನು ಸುಡಬಾರದು. ಪೊರಕೆಯನ್ನು ಸುಡುವುದರಿಂದ ಹಣದ ನಷ್ಟವಾಗಬಹುದು.
- ಏಕಾದಶಿ, ಗುರುವಾರ ಅಥವಾ ಶುಕ್ರವಾರದಂದು ತಪ್ಪಿಯೂ ಪೊರಕೆಯನ್ನು ಎಸೆಯಬಾರದು. ಏಕೆಂದರೆ ಗುರುವಾರ ಮತ್ತು ಶುಕ್ರವಾರವು ಲಕ್ಷ್ಮೀ ದೇವಿಗೆ ಸಮರ್ಪಿತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನ ಪೊರಕೆ ಎಸೆದರೆ, ತಾಯಿ  ಲಕ್ಷ್ಮೀ  ಕೋಪಗೊಳ್ಳಬಹುದು. ಲಕ್ಷ್ಮೀ ಮುನಿಸಿಕೊಂಡರೆ ಇಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News