Holi 2024 : ಹೋಳಿ ಹಬ್ಬದಂದು ಈ ವಸ್ತು ಖರೀದಿಸಿದ್ರೆ ಹಣದ ಸಮಸ್ಯೆ ಎಂದಿಗೂ ಕಾಡುವುದಿಲ್ಲ..!

Holi vastu tips in Kannada : ಹೋಳಿ ಹಬ್ಬದಂದು ನಾಡಿನ ಜನತೆ ಬಣ್ಣದಲ್ಲಿ ಮಿಂದೆದ್ದು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಕಾಮನನ್ನು ಧಹಿಸಿ ಸಂಸ್ಕೃತಿಯನ್ನು ಕೊಂಡಾಡುತ್ತಾರೆ. ನೀವು ಹೋಳಿಯನ್ನು ಹೇಗಾದರೂ ಆಚರಿಸಿ ಅದರೆ, ವಾಸ್ತು ಪ್ರಕಾರ ಈ ಕೆಲವು ವಸ್ತುಗಳನ್ನು ಖರೀದಿಸಲು ಮರೆಯಬೇಡಿ..

Written by - Krishna N K | Last Updated : Mar 22, 2024, 06:12 PM IST
    • ಹೋಳಿ ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ.
    • ಜನ ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸುತ್ತಾರೆ.
    • ಈ ಕೆಲವು ವಸ್ತುಗಳನ್ನು ಖರೀದಿಸಲು ಮರೆಯಬೇಡಿ..
Holi 2024 : ಹೋಳಿ ಹಬ್ಬದಂದು ಈ ವಸ್ತು ಖರೀದಿಸಿದ್ರೆ ಹಣದ ಸಮಸ್ಯೆ ಎಂದಿಗೂ ಕಾಡುವುದಿಲ್ಲ..! title=
holi 2024

Holi vastu tips : ಹೋಳಿ ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಹಬ್ಬವನ್ನು ಭಾರತದಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವರು ಈ ವಿಶೇಷ ದಿನದಂದು ಬಹಳಷ್ಟು ಸಿಹಿತಿಂಡಿಗಳು ಮತ್ತು ಭಕ್ಷ್ಯಗಳನ್ನು ಸೇವಿಸುವ ಮೂಲಕ ಸಂತೋಷಪಡುತ್ತಾರೆ. ಇತರರು ಬಣ್ಣದಲ್ಲಿ ಮಿಂದೆದ್ದು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ನೀವು ಹೋಳಿಯನ್ನು ಹೇಗಾದರೂ ಆಚರಿಸಿ ಅದರೆ, ವಾಸ್ತು ಪ್ರಕಾರ ಈ ಕೆಲವು ವಸ್ತುಗಳನ್ನು ಖರೀದಿಸಲು ಮರೆಯಬೇಡಿ.

ಹೌದು.. ವಾಸ್ತುಶಾಸ್ತ್ರ ಪ್ರಕಾರ ಈ ಹಬ್ಬದಂದು ಕೆಲ ವಸ್ತುಗಳನ್ನು ಖರೀದಿಸುವುದರಿಂದ ಮನೆಗೆ ಮಂಗಳಕರ ಎಂದು ಹೇಳಲಾಗುತ್ತದೆ. ಅಲ್ಲದೆ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಹಾಗಾದರೆ ಆ ವಸ್ತುಗಳು ಯಾವವು ಅಂತ ತಿಳಿಯೋಣ ಬನ್ನಿ..

ಇದನ್ನೂ ಓದಿ:ರಾತ್ರಿ ವೇಳೆ ದೇಹದ ಈ ಭಾಗಕ್ಕೆ ತುಪ್ಪ ಹಚ್ಚಿ ಮಲಗಿ… ಬೆಳಗಾಗುವಷ್ಟರಲ್ಲಿ ಪವಾಡದಂತೆ ಬೆಳ್ಳಗಾದ ಕೂದಲು ಮರಳಿ ಕಪ್ಪಾಗುತ್ತೆ!

ಬಿದಿರಿನ ಗಿಡ : ಬಿದಿರಿನ ಗಿಡವನ್ನು ಅದೃಷ್ಟದ ಸಸ್ಯವೆಂದು ಹಿರಿಯರು ಹೇಳುತ್ತಾರೆ.. ಹೋಳಿ ದಿನ ಇದನ್ನು ಖರೀದಿಸಿ ಮನೆಗೆ ತಂದರೆ ಲಕ್ಷ್ಮಿ ದೇವಿ ಸಂತೋಷಪಡುತ್ತಾಳೆ ಅಂತ ಹೇಳಲಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಬಿದಿರಿನ ಗಿಡ ನೆಟ್ಟರೆ ಒಳ್ಳೆಯದು.. ಹೋಳಿ ದಿನ ಮನೆಯಲ್ಲಿ ಈ ಗಿಡವನ್ನು ಪೂಜಿಸಿ..

ಬೆಳ್ಳಿ ನಾಣ್ಯ : ಹೋಳಿ ಹಬ್ಬದ ದಿನದಂದು ಬೆಳ್ಳಿಯನ್ನು ಖರೀದಿಸುವುದು ಮಂಗಳಕರ. ಲಕ್ಷ್ಮಿ ದೇವಿಯ ಮುಂದೆ ಈ ಬೆಳ್ಳಿಯ ನಾಣ್ಯವನ್ನು ಇರಿಸಿ, ಅದಕ್ಕೆ ಕುಂಕುಮ ಹಚ್ಚಿ ಪೂಜಿಸಿ ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ.

ಇದನ್ನೂ ಓದಿ:ಬೇಸಿಗೆಯಲ್ಲಿ ಮೈಗ್ರೇನ್ ದಾಳಿಗೆ 5 ಪ್ರಮುಖ ಕಾರಣಗಳಿವು

ಕುಂಕುಮ : ಲಕ್ಷ್ಮಿ ದೇವಿಗೆ ಕುಂಕುಮ ಎಂದರೆ ತುಂಬಾ ಇಷ್ಟ. ವಿಶೇಷವಾಗಿ ಹೋಳಿ ದಿನದಂದು ಕುಂಕುಮವನ್ನು ಖರೀದಿಸಿ, ಅದನ್ನು ದೇವಿಗೆ ಅರ್ಪಿಸಿದರೆ ತಾಯಿ ಮಹಾಲಕ್ಷ್ಮಿ ಆಶೀರ್ವಾದ ನಿಮ್ಮೊಂದಿಗೆ ಸದಾ ಇರುತ್ತದೆ. ಹೋಳಿಯಲ್ಲಿ ಕುಂಕುಮ ಖರೀದಿಸುವುದು ಮಂಗಳಕರ.

ಲೋಹದ ಆಮೆ : ಹೋಳಿ ಹಬ್ಬದಂದು ಲೋಹದ ಆಮೆಯನ್ನು ಖರೀದಿಸುವುದು ಮಂಗಳಕರ. ಲೋಹದ ಆಮೆಯನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಕ್ರಮೇಣ ಪ್ರಗತಿಯನ್ನು ತರುತ್ತದೆ. ಹೋಳಿ ದಿನದಂದು ಲೋಹದಿಂದ ಮಾಡಿದ ಆಮೆಯನ್ನು ತನ್ನಿ, ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News