Horoscope Today (13-11-2022): ಇಂದು ಈ ರಾಶಿಯವರು ಪ್ರೇಮಪಾಶದಲ್ಲಿ ಬೀಳುತ್ತಾರೆ!

Horoscope Today (13-11-2022):  ಕುಂಭ ರಾಶಿಯವರ ಪೂರ್ವ ಪುಣ್ಯದ ಫಲವಾಗಿ ನಿಂತುಹೋದ ಕಾರ್ಯಗಳು ಪುನಃ ಪ್ರಾರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಉಳಿದಂತೆ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

Written by - Zee Kannada News Desk | Last Updated : Nov 13, 2022, 06:02 AM IST
    • ಸಿಂಹ ರಾಶಿಯವರಿಗೆ ಭೂಮಿ ವ್ಯವಹಾರದಿಂದ ಲಾಭವಾಗಲಿದೆ
    • ಕುಂಭ ರಾಶಿಯವರ ಪೂರ್ವ ಪುಣ್ಯದ ಫಲವಾಗಿ ನಿಂತುಹೋದ ಕಾರ್ಯಗಳು ಪುನಃ ಪ್ರಾರಂಭವಾಗುವ ಸಾಧ್ಯತೆ
    • ಉಳಿದಂತೆ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ
Horoscope Today (13-11-2022): ಇಂದು ಈ ರಾಶಿಯವರು ಪ್ರೇಮಪಾಶದಲ್ಲಿ ಬೀಳುತ್ತಾರೆ!  title=
Rashi Prediction

ದಿನಾಂಕ: 13-11-2022 ವಾರ: ಭಾನುವಾರ ತಿಥಿ: ಪಂಚಮಿ ಪಕ್ಷ: ಕೃಷ್ಣ ಪಕ್ಷ ನಕ್ಷತ್ರ: ಆರಿದ್ರ ಯೋಗ: ಸಾಧ್ಯ ಕರಣ: ಕೌಲವ 

Horoscope Today (13-11-2022): ಇಂದು ಸಿಂಹ ರಾಶಿಯವರಿಗೆ ಭೂಮಿ ವ್ಯವಹಾರದಿಂದ ಲಾಭವಾಗಲಿದೆ. ಆದರೆ ಪ್ರಯಾಣ ಮಾಡುವಾಗ ಕಂಟಕ ಉಂಟಾಗುವ ಸಾಧ್ಯತೆಯಿದೆ. ಇನ್ನು ಕುಂಭ ರಾಶಿಯವರ ಪೂರ್ವ ಪುಣ್ಯದ ಫಲವಾಗಿ ನಿಂತುಹೋದ ಕಾರ್ಯಗಳು ಪುನಃ ಪ್ರಾರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಉಳಿದಂತೆ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಮೇಷ ರಾಶಿ: ಆಧ್ಯಾತ್ಮಿಕ ಜೀವನದ ಕಡೆ ಒಲವು. ಸಹೋದರರಲ್ಲಿ ಆಸ್ತಿಗಾಗಿ ಮಾತುಕತೆ. ನೆಮ್ಮದಿಗಾಗಿ ದುರ್ಗೆಯನ್ನು ಪ್ರಾರ್ಥಿಸಿ,

ವೃಷಭ ರಾಶಿ: ಕಣ್ಣಿಗೆ ತೊಂದರೆಯಾಗುವ ಸಾಧ್ಯತೆ. ವಿವಾಹಿತರಿಗೆ ಸಂತಾನದಲ್ಲಿ /ಸಂತಾನದ ವಿಷಯದಲ್ಲಿ ಶುಭ.

ಮಿಥುನ ರಾಶಿ: ಗೌರವ ಸಿಗುವ ಅವಕಾಶ. ತಂದೆ ತಾಯಿಯಿಂದ ಆಶೀರ್ವಾದ ಲಭಿಸುವ ಸಮಯ.

ಕಟಕ ರಾಶಿ: ವೈವಾಹಿಕ ಜೀವನದಲ್ಲಿ ಏರುಪೇರು. ಸ್ವಂತ ಪರಾಕ್ರಮದಿಂದ ಕಾರ್ಯಸಿದ್ಧಿ. ದೇವಕಾರ್ಯಗಳಲ್ಲಿ ಆಸಕ್ತಿ

ಸಿಂಹ ರಾಶಿ: ಭೂಮಿ ವ್ಯವಹಾರದಿಂದ ಲಾಭ. ಪ್ರಯಾಣ ಮಾಡುವಾಗ ಕಂಟಕ ಉಂಟಾಗುವ ಸಾಧ್ಯತೆ.

ಕನ್ಯಾ ರಾಶಿ: ಹಳೇ ಸ್ನೇಹಿತರನ್ನು ಭೇಟಿ ಮಾಡುವ ಸಂಭವ. ಕೆಲಸದಲ್ಲಿ ಆಸಕ್ತಿ. ಪ್ರಯಾಣದಿಂದ ಲಾಭ

ತುಲಾ ರಾಶಿ: ಹೊಸ ಉತ್ಸಾಹ. ಸಂಬಂಧಿಕರಿಂದ ಲಾಭ. ಉಡುಗೊರೆ ಸಿಗುವ ಸಮಯ

ವೃಶ್ಚಿಕ ರಾಶಿ:  ಕುಟುಂಬದಲ್ಲಿ ಶುಭಕಾರ್ಯಳಿಗೆ ಆಹ್ವಾನ. ಚರ್ಮ ವ್ಯಾಧಿಯ ಸೋಂಕು ಉಂಟಾಗಬಹುದು

ಧನು ರಾಶಿ: ಆರ್ಥಿಕವಾಗಿ ಪ್ರಗತಿ.ಅನಿರೀಕ್ಷಿತ ಅವಕಾಶಗಳು. ಸ್ತ್ರೀ ವ್ಯಾಮೋಹದಿಂದ ನಷ್ಟ.

ಮಕರ ರಾಶಿ: ಮನಸ್ಸಿಗೆ ಕಿರಿಕಿರಿ. ಅಪವಾದಗಳು ಬರುವ ಸಾಧ್ಯತೆ. ಹೆಚ್ಚು ನಿದ್ರೆ

ಕುಂಭ ರಾಶಿ: ಪೂರ್ವ ಪುಣ್ಯದ ಫಲವಾಗಿ ನಿಂತುಹೋದ ಕಾರ್ಯಗಳು ಪುನಃ ಪ್ರಾರಂಭವಾಗುವ ಸಾಧ್ಯತೆ ಹೆಚ್ಚು. ರಹಸ್ಯವಾಗಿ ಮಾಡಿದ ಕೆಲಸಗಳಲ್ಲಿ ಹೆಚ್ಚು ಲಾಭ.

ಮೀನ ರಾಶಿ: ದೇಹದ ತೂಕ ಹೆಚ್ಚಾಗುವ ಸಾಧ್ಯತೆ. ಪ್ರೇಮಪಾಶದಲ್ಲಿ ಸಿಲುಕುವ ಸಮಯ. ಹಳೇ ವಿಚಾರವಾಗಿ ಜೈಲು ವಾಸ ಆಗಬಹುದು.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News