ಕಿಡ್ನಿ ಸ್ಟೋನ್ ಇರುವವರು ಈ ಹಣ್ಣುಗಳನ್ನು ಸೇವಿಸಿದರೆ ಕಲ್ಲು ಕರಗಿ ನೀರಾಗುವುದು !

ಕೆಲವು ಪದಾರ್ಥಗಳನ್ನು ಸೇವಿಸುವ ಮೂಲಕ ಕಿಡ್ನಿ  ಸ್ಟೋನ್ ಗಳನ್ನು ಹೋಗಲಾಡಿಸಬಹುದು. ಕೆಲವು ಹಣ್ಣುಗಳನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.  

Written by - Ranjitha R K | Last Updated : Nov 8, 2023, 04:19 PM IST
  • ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವುದು ಸಾಮಾನ್ಯ ಸಮಸ್ಯೆ
  • ಹಣ್ಣುಗಳನ್ನು ಪ್ರತಿದಿನ ಸೇವಿಸಬೇಕು
  • ನೀರಿನಾಂಶವಿರುವ ಹಣ್ಣುಗಳನ್ನು ಸೇವಿಸಿ
ಕಿಡ್ನಿ ಸ್ಟೋನ್ ಇರುವವರು ಈ ಹಣ್ಣುಗಳನ್ನು ಸೇವಿಸಿದರೆ ಕಲ್ಲು ಕರಗಿ ನೀರಾಗುವುದು ! title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ. ಯಾರಿಗೆ ಕೇಳಿದರೂ ಕಿಡ್ನಿ ಸ್ಟೋನ್ ಸಮಸ್ಯೆಯಿಂದ  ಬಳಲುತ್ತಿರುತ್ತಾರೆ. ಕಿಡ್ನಿ ಸ್ಟೋನ್ ಉಂಟಾಗಲು ಒಂದು ಪ್ರಮುಖ ಕಾರಣವೆಂದರೆ ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿ. ಈ ಕಾರಣದಿಂದಲೇ ಮೂತ್ರಪಿಂಡದಲ್ಲಿ ಶೇಖರಣೆಯಾಗುವ ಹೆಚ್ಚಿನ ಪ್ರಮಾಣದ ಖನಿಜಗಳು ಕಲ್ಲುಗಳನ್ನು ರೂಪಿಸುತ್ತವೆ. ಆದ್ದರಿಂದ, ನೀವು ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಹೊಂದಿರುವ ಆಹಾರದಿಂದ ದೂರವಿರಬೇಕು. ಹೀಗಿರುವಾಗ ಕೆಲವು ಪದಾರ್ಥಗಳನ್ನು ಸೇವಿಸುವ ಮೂಲಕ ಕಿಡ್ನಿ  ಸ್ಟೋನ್ ಗಳನ್ನು ಹೋಗಲಾಡಿಸಬಹುದು. ಕೆಲವು ಹಣ್ಣುಗಳನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಈ ಹಣ್ಣುಗಳನ್ನು ಪ್ರತಿದಿನ ಸೇವಿಸಬೇಕು : 
ನೀರಿನಾಂಶವಿರುವ ಹಣ್ಣುಗಳನ್ನು ಸೇವಿಸಿ : 

ಎಳ ನೀರು, ಕಲ್ಲಂಗಡಿ, ಖರ್ಬೂಜ ಮುಂತಾದ ನೀರು ಹೆಚ್ಚಿನ ಪ್ರಮಾಣದಲ್ಲಿ ಇರುವ ಹಣ್ಣುಗಳನ್ನು ಪ್ರತಿದಿನ ಸೇವಿಸಿ. ಏಕೆಂದರೆ ನೀರಿನಂಶವಿರುವ ಆಹಾರಗಳು ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ನೀರು ಸಮೃದ್ಧವಾಗಿರುವ ಹಣ್ಣುಗಳನ್ನು ಸೇರಿಸಿಕೊಳ್ಳಬೇಕು. ಅದೇ ಸಮಯದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು 
ಕುಡಿಯಬೇಕು. 

ಇದನ್ನೂ ಓದಿ : ಯೂರಿಕ್ ಆಸಿಡ್ ನಿಯಂತ್ರಿಸಿ ಕೀಲು, ಸಂಧಿ ನೋವಿಗೆ ಸಂಪೂರ್ಣ ಪರಿಹಾರ ನೀಡುತ್ತದೆ ಈ ಐದು ಹಣ್ಣುಗಳು

ಸಿಟ್ರಸ್ ಹಣ್ಣುಗಳನ್ನು ಸೇವಿಸಿ : 
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಕಿಡ್ನಿ ಸ್ಟೋನ್ ಗಳನ್ನು ಕರಗಿಸಲು ಇದು ಕೆಲಸ ಮಾಡುತ್ತದೆ. ಸಿಟ್ರಸ್ ಹಣ್ಣುಗಳು ಮತ್ತು  ಜ್ಯೂಸ್ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಆದ್ದರಿಂದ ಇದನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಕಿತ್ತಳೆ, ಮೋಸಂಬಿ, ಮತ್ತು ದ್ರಾಕ್ಷಿಯನ್ನು ಸೇವಿಸಬೇಕು.

ಕ್ಯಾಲ್ಸಿಯಂ ಹೇರಳವಾಗಿರುವ ವಸ್ತುಗಳನ್ನು ಸೇವಿಸಿ : 
ನಿಮಗೂ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಕ್ಯಾಲ್ಸಿಯಂ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸಿ. ಇದಕ್ಕಾಗಿ ಕಪ್ಪು ದ್ರಾಕ್ಷಿ, ಅಂಜೂರದ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.ಇದರ ಹೊರತಾಗಿ  ಸೌತೆಕಾಯಿಯಂತಹ ನೀರಿನಲ್ಲಿ ಸಮೃದ್ಧವಾಗಿರುವ ವಸ್ತುಗಳನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವುಗಳ ಸೇವನೆಯಿಂದ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ : ನಿಮ್ಮ ಸಂಗಾತಿ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ? ಹಾಸಿಗೆಯಲ್ಲಿ ನೀವು ಮಲಗುವ ವಿಧಾನ ಹೇಳುತ್ತೆ ಈ ಗುಟ್ಟು?

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News