ಸತ್ತ ವ್ಯಕ್ತಿಯ ಬಟ್ಟೆಯನ್ನು ಏಕೆ ಧರಿಸಬಾರದು ಗೊತ್ತೇ...? ನಿಗೂಢ ರಹಸ್ಯ ಇಲ್ಲಿದೆ ನೋಡಿ..!

Dont wear Dead person Clothes : ಸತ್ತ ವ್ಯಕ್ತಿಗಳ ಬಟ್ಟೆಗಳನ್ನು ಧರಿಸುವುದಿರಲಿ ಮನೆಯಲ್ಲಿ ಇಟ್ಟುಕೊಳ್ಳದಂತೆ ಹಿರಿಯರು ಹೇಳುತ್ತಾರೆ. ಅಲ್ಲದೆ, ಹೊಸ ಬಟ್ಟೆ ಇದ್ದರೂ ಸಹ ಅದನ್ನು ಮನೆಯಿಂದ ಹೊರಗೆ ಹಾಕುವಂತೆ ತಿಳಿಸಲಾಗುತ್ತದೆ. ಇಂತಹ ಪದ್ದತಿಯ ಹಿಂದೆ ಆತ್ಮದ ಕಾರಣ ಇದೆಯಾ..? ಎನ್ನುವುದು ಹಲವು ಜನರ ಪ್ರಶ್ನೆ.. ಹಾಗಿದ್ರೆ ನಿಜ ಏನು ಅಂತ ತಿಳಿಯಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

Written by - Krishna N K | Last Updated : Apr 29, 2023, 06:17 PM IST
  • ಆತ್ಮ ದೇಹವನ್ನು ತೊರೆದ ನಂತರ ಅವರ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.
  • ಸತ್ತ ವ್ಯಕ್ತಿಯ ಆತ್ಮ ವಾಸನೆಯಿಂದ ಮಾತ್ರ ತನ್ನ ಕುಟುಂಬ ಮತ್ತು ಮನೆಯನ್ನು ಗುರುತಿಸುತ್ತದೆ.
  • ಅನೇಕ ರೀತಿಯ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಅವನ ದೇಹದೊಳಗೆ ಪ್ರವೇಶಿಸಿರುತ್ತವೆ.
 ಸತ್ತ ವ್ಯಕ್ತಿಯ ಬಟ್ಟೆಯನ್ನು ಏಕೆ ಧರಿಸಬಾರದು ಗೊತ್ತೇ...? ನಿಗೂಢ ರಹಸ್ಯ ಇಲ್ಲಿದೆ ನೋಡಿ..! title=

Dead person Clothes :  ಮನೆಯಲ್ಲಿ ಯಾರಾದರೂ ಸತ್ತರೆ ಕುಟುಂಬದ ಸದಸ್ಯರಿಗೆ ಸತ್ತವರ ಬಟ್ಟೆಯನ್ನು ಧರಿಸಬೇಡಿ ಎಂದು ಹೇಳುವುದನ್ನು ನೀವು ಅನೇಕ ಬಾರಿ ಕೇಳಿರುತ್ತೀರಾ. ಅಲ್ಲದೆ ಸತ್ಯ ವ್ಯಕ್ತಿಯ ಬಟ್ಟೆಗಳನ್ನು ಮನೆಯಿಂದ ದೂರ ಬಿಸಾಕುತ್ತಾರೆ ಇಲ್ಲವೆ ಸುಡುತ್ತಾರೆ. ಬಟ್ಟೆಗಳು ಎಷ್ಟೇ ಹೊಸದಾಗಿದ್ದರೂ ಸಹ ಮತ್ತೊಬ್ಬರು ಅವುಗಳನ್ನು ಧರಿಸಲು ಬಿಡುವುದಿಲ್ಲ. ಈ ರೀತಿಯ ಪದ್ದತಿ ಹಿಂದಿನ ಕಾರಣವೇನು...? ಇದರ ಹಿಂದೆ ಆತ್ಮಕ್ಕೆ ಸಂಬಂಧಿಸಿದ ವಿಚಾರವೇನಾದರೂ ಇದೆಯೇ ಅಥವಾ ವೈಜ್ಞಾನಿಕ ಕಾರಣವಿದೆಯೇ..?..

ಆತ್ಮ ರೂಪಾಂತರ : ಮರಣಾನಂತರ ಸತ್ತವರ ಬಟ್ಟೆಗಳನ್ನು ಧರಿಸುವುದಿಲ್ಲ ಎಂದು ಖ್ಯಾತ ಧಾರ್ಮಿಕ ಮುಖಂಡ ಜಗ್ಗಿ ವಾಸುದೇವ್ ಹೇಳುತ್ತಾರೆ. ಆತ್ಮ ದೇಹವನ್ನು ತೊರೆದ ನಂತರ, ಕುಟುಂಬ ಸದಸ್ಯರು ದೇಹಕ್ಕೆ ಸಂಬಂಧಿಸಿದ ಬಟ್ಟೆ ಮತ್ತು ಇತರ ವಸ್ತುಗಳನ್ನು ದಾನ ಮಾಡಬೇಕು ಅಥವಾ ಅವುಗಳನ್ನು ಸುಡಬೇಕು. ಏಕೆಂದರೆ ಆತ್ಮವು ತನ್ನ ಬಟ್ಟೆ ಮತ್ತು ಇತರ ಆಯ್ಕೆಗಳ ವಾಸನೆಯಿಂದ ಮಾತ್ರ ತನ್ನ ಕುಟುಂಬ ಮತ್ತು ಮನೆಯನ್ನು ಗುರುತಿಸುತ್ತದೆ ಎಂದು ಜಗ್ಗಿ ವಾಸುದೇವ್ ಹೇಳುತ್ತಾರೆ. ಸಾವಿನ ನಂತರವೂ, ಆತ್ಮವು ತನ್ನ ಕುಟುಂಬದೊಂದಿಗೆ ತನ್ನ ಬಾಂಧವ್ಯವನ್ನು ಇಟ್ಟುಕೊಂಡಿರುತ್ತದೆಯಂತೆ.

ಇದನ್ನೂ ಓದಿ: White Hair: ಕೇವಲ 3 ವಾರಗಳಲ್ಲಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಹೇರ್‌ಪ್ಯಾಕ್‌!

ಸಾವಿನ ನಂತರ ಆತ್ಮವು ಶಕ್ತಿಯ ರೂಪವಾಗಿ ರೂಪಾಂತರಗೊಳ್ಳುತ್ತದೆ ಎಂದು ಜಗ್ಗಿ ವಾಸುದೇವ್‌ ಅವರು ತಿಳಿಸುತ್ತಾರೆ. ಆ ಶಕ್ತಿ ಧನಾತ್ಮಕ ಅಥವಾ ಋಣಾತ್ಮಕವಾಗಿರಬಹುದು. ಆ ಶಕ್ತಿಯು ನಕಾರಾತ್ಮಕವಾಗಿ ಪರಿಣಮಿಸಿದರೆ, ಕುಟುಂಬದ ಸದಸ್ಯರು ಅದಕ್ಕೆ ಸಂಬಂಧಿಸಿದ ಬಟ್ಟೆಗಳನ್ನು ಧರಿಸಿದರೆ, ಅದರ ಪ್ರಭಾವವು ಅವರನ್ನು ಆವರಿಸಬಹುದು. ಇದು ಕುಟುಂಬದಲ್ಲಿ ಅಹಿತಕರ ಘಟನೆಗಳ ಸರಣಿಯನ್ನು ಪ್ರಾರಂಭಿಸುತ್ತದೆ. ಮೃತರ ಬಟ್ಟೆ ಹೊರತುಪಡಿಸಿ ಅವರ ಇಷ್ಟದ ವಸ್ತುಗಳು, ಪೆನ್ನು, ಮೊಬೈಲ್ ಅಥವಾ ಇತರೆ ದುಬಾರಿ ವಸ್ತುಗಳನ್ನು ಬಳಸಬಾರದು ಎನ್ನುತ್ತಾರೆ ಗುರೂಜಿ.

ವಿಜ್ಞಾನಿಗಳ ಪ್ರಕಾರ : ಮಾರಣಾಂತಿಕ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಬಹುದು : ವಿಜ್ಞಾನಿಗಳ ಪ್ರಕಾರ, ಒಬ್ಬ ವ್ಯಕ್ತಿಯು ಸತ್ತಾಗ, ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಅವನು ಈಗಾಗಲೇ ತುಂಬಾ ದುರ್ಬಲನಾಗಿದ್ದಾನೆ. ಅನೇಕ ರೀತಿಯ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಅವನ ದೇಹದೊಳಗೆ ಪ್ರವೇಶಿಸಿರುತ್ತವೆ. ಅವುಗಳನ್ನು ಬರಿಗಣ್ಣಿನಿಂದ ನೋಡಲಾಗದು. ಈ ರೀತಿಯಾಗಿ, ಆ ವ್ಯಕ್ತಿಯ ಮರಣದ ನಂತರವೂ, ಬ್ಯಾಕ್ಟೀರಿಯಾವು ಬಟ್ಟೆ ಮತ್ತು ಇತರ ವಸ್ತುಗಳಲ್ಲಿ ಉಳಿಯುತ್ತದೆ. ಇದರಿಂದಾಗಿ ಅದನ್ನು ಹಿಡಿದಿರುವ ಕುಟುಂಬದ ಸದಸ್ಯರು ಸಹ ರೋಗಗಳಿಂದ ಬಳಲುತ್ತಾರೆ ಎನ್ನುತ್ತಾರೆ.

ಇದನ್ನೂ ಓದಿ: Rahu-Guru Yuti 2023: 36 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ರಾಹು-ಗುರು ಮೈತ್ರಿ, 7 ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭ!

ಮನಶ್ಶಾಸ್ತ್ರಜ್ಞರು ಪ್ರಕಾರ : ಮನೆಯ ಒಬ್ಬ ವ್ಯಕ್ತಿ ಸತ್ತಾಗ ಅವನಿಗೆ ಸಂಬಂಧಿಸಿದ ವಸ್ತುಗಳನ್ನು ಪದೇ ಪದೇ ನೋಡಿದ್ರೆ, ಅವರ ನೆನೆಪು ಕಾಡುತ್ತಿರುತ್ತದೆ. ಮನೆಯವರು ಭಾವುಕರಾಗುತ್ತಾರೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಸತ್ತವರ ಬಟ್ಟೆ, ಪೆನ್ನು, ಮೊಬೈಲ್, ಇತರೆ ವಸ್ತುಗಳನ್ನು ನೋಡಿದಾಗಲೆಲ್ಲ ಅವರ ನೆನಪು ಮರುಕಳಿಸುತ್ತವೆ. ಇದರಿಂದ ವ್ಯಕ್ತಿಯು ಮಾನಸಿಕವಾಗಿ ದುರ್ಬಲನಾಗಲು ಪ್ರಾರಂಭಿಸುತ್ತಾನೆ. ಸತ್ತ ವ್ಯಕ್ತಿಯನ್ನು ಪ್ರತಿ ಕ್ಷಣವನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತಾನೆ. ಈ ನೆನಪುಗಳು ಅವನಿಗೆ ಜೀವನದಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಸತ್ತ ವ್ಯಕ್ತಿಯ ವಸ್ತುಗಳನ್ನು ದಾನ ಮಾಡಬೇಕು ಅಥವಾ ಸುಡಬೇಕು ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News