ದ್ವಿತೀಯ ಟೆಸ್ಟ್: ಆರಂಭಿಕ ಆಘಾತ ಕಂಡ ವೆಸ್ಟ್ ಇಂಡೀಸ್, 70ಕ್ಕೆ 5 ವಿಕೆಟ್ ಪತನ

ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 367 ರನ್​ಗೆ ಸರ್ವಪತನವಾಗಿದೆ.

Last Updated : Oct 14, 2018, 02:27 PM IST
ದ್ವಿತೀಯ ಟೆಸ್ಟ್: ಆರಂಭಿಕ ಆಘಾತ ಕಂಡ ವೆಸ್ಟ್ ಇಂಡೀಸ್, 70ಕ್ಕೆ 5 ವಿಕೆಟ್ ಪತನ  title=
file photo

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 367 ರನ್​ಗೆ ಸರ್ವಪತನವಾಗಿದೆ.

ಮೂರನೇ ದಿನದ ಇಂದಿನ ಪಂದ್ಯದಲ್ಲಿ ಕೇವಲ 59 ರನ್ ಕಲೆ ಹಾಕಿ ಭಾರತ ಆರು ವಿಕೆಟ್ ಗಳನ್ನು ಕಳೆದುಕೊಂಡಿತು.ಆ ಮೂಲಕ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 367 ರನ್​ಗೆ ಆಲೌಟ್ ಆಗಿದೆ.

ಇನ್ನೊಂದೆಡೆಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿರುವ ವೆಸ್ಟ್ ಇಂಡಿಸ್ ತಂಡವು ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಸಿಕ್ಕು ಕೇವಲ 70 ರನ್ ಗಳಿಸಿ  5 ವಿಕೆಟ್ ಗಳನ್ನು ಕಳೆದುಕೊಂಡಿದೆ. ಉಮೇಶ್ ಯಾದವ್ ಅವರು ವಿಂಡಿಸ್ ತಂಡದ 2 ಪ್ರಮುಖ ವಿಕೆಟ್ ಗಳನ್ನು ತೆಗೆದುಕೊಂಡು ಮಿಂಚಿದರು.

 

Trending News