Video : ಟೀಂ ಇಂಡಿಯಾಗೆ ಮರಳಲು ಟ್ರೈನಿಂಗ್ ಆರಂಭಿಸಿದ ಈ ಸ್ಟಾರ್ ಬೌಲರ್!

ಟೀಂ ಇಂಡಿಯಾದ ಸ್ಟಾರ್ ಆಟಗಾರನೊಬ್ಬ ಮೈದಾನಕ್ಕೆ ಮರಳಲು ತರಬೇತಿ ಆರಂಭಿಸಿದ್ದಾನೆ. ಈ ಆಟಗಾರ ತನ್ನ ಕಿಲ್ಲರ್ ಬೌಲಿಂಗ್ ನಲ್ಲಿ ಪರಿಣಿತ. ಈ ಆಟಗಾರನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

Written by - Channabasava A Kashinakunti | Last Updated : Nov 25, 2022, 10:11 PM IST
  • ತರಬೇತಿ ಪ್ರಾರಂಭಿಸಿದ ಈ ಆಟಗಾರ
  • ಗಾಯದ ಕಾರಣದಿಂದ ಹೊರಗುಳಿದಿದ್ದ ಬುಮ್ರಾ
  • ಟೀಂ ಇಂಡಿಯಾದಲ್ಲಿ ಬುಮ್ರಾ ಪಯಾ
Video : ಟೀಂ ಇಂಡಿಯಾಗೆ ಮರಳಲು ಟ್ರೈನಿಂಗ್ ಆರಂಭಿಸಿದ ಈ ಸ್ಟಾರ್ ಬೌಲರ್! title=

Indian Cricket Team : ಭಾರತ ತಂಡ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಆಡುತ್ತಿದೆ. ಇದಾದ ಬಳಿಕ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿದೆ. ಇದಕ್ಕೂ ಮುನ್ನವೇ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಟೀಂ ಇಂಡಿಯಾದ ಸ್ಟಾರ್ ಆಟಗಾರನೊಬ್ಬ ಮೈದಾನಕ್ಕೆ ಮರಳಲು ತರಬೇತಿ ಆರಂಭಿಸಿದ್ದಾನೆ. ಈ ಆಟಗಾರ ತನ್ನ ಕಿಲ್ಲರ್ ಬೌಲಿಂಗ್ ನಲ್ಲಿ ಪರಿಣಿತ. ಈ ಆಟಗಾರನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

ತರಬೇತಿ ಪ್ರಾರಂಭಿಸಿದ ಈ ಆಟಗಾರ

ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತರಬೇತಿಯ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಬುಮ್ರಾ ವ್ಯಾಯಾಮ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದರೆ ಶೀಘ್ರದಲ್ಲೇ ಟೀಂ ಇಂಡಿಯಾಗೆ ಮರಳಲಿದ್ದಾರೆ ಎಂದು ಅನಿಸುತ್ತದೆ. ಬುಮ್ರಾ ತರಬೇತಿ ವಿಡಿಯೋ ನೋಡಿ ಕ್ರಿಕೆಟ್ ಅಭಿಮಾನಿಗಳು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Umran Malik : ಮೊದಲ ODI ಪಂದ್ಯದಲ್ಲಿ ಅದ್ಬುತ ಪ್ರದರ್ಶನ ತೋರಿದ ಬೌಲರ್ ಉಮ್ರಾನ್ ಮಲಿಕ್ 

ಗಾಯದ ಕಾರಣದಿಂದ ಹೊರಗುಳಿದಿದ್ದ ಬುಮ್ರಾ 

ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಏಷ್ಯಾ ಕಪ್ 2022 ಮತ್ತು ಟಿ20 ವಿಶ್ವಕಪ್ 2022 ರಿಂದ ಹೊರಗುಳಿದಿದ್ದರು. ನಂತರ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿಗೆ ಅವಕಾಶ ನೀಡಲಾಯಿತು. ಆದರೆ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಸೋಲುವ ಮೂಲಕ ಬುಮ್ರಾ ಕೊರತೆಯನ್ನು ತೀರಿಸಬೇಕಾಯಿತು.

 
 
 
 

 
 
 
 
 
 
 
 
 
 
 

Shared post on

ಟೀಂ ಇಂಡಿಯಾದಲ್ಲಿ ಬುಮ್ರಾ ಪಯಾ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಟೀಂ ಇಂಡಿಯಾ ಪರ 30 ಟೆಸ್ಟ್ ಪಂದ್ಯಗಳಲ್ಲಿ 128 ವಿಕೆಟ್, 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್ ಹಾಗೂ 60 ಟಿ20 ಪಂದ್ಯಗಳಲ್ಲಿ 70 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : IND vs NZ 1st ODI: ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲು: ಕೀವಿಸ್ ಬ್ಯಾಟಿಂಗ್ ಅಬ್ಬರಕ್ಕೆ ತತ್ತರಿಸಿದ ಟೀಂ ಇಂಡಿಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News