ಇನ್ನು ಐದು ತಿಂಗಳು ಗುರು ನೀಡುತ್ತಾನೆ ಭರ್ಜರಿ ಧನಲಾಭ.!

Jupiter Retrograde 2022: ಗ್ರಹಗಳು ತನ್ನ ಚಲನೆಯನ್ನು ಕೂಡಾ ಬದಲಿಸುತ್ತದೆ.  ಅದೇ ರೀತಿ ಇತ್ತೀಚೆಗೆ, ದೇವಗುರು ಬೃಹಸ್ಪತಿ ಮೀನ ರಾಶಿಯಲ್ಲಿ ಸಂಕ್ರಮಿಸಿದ್ದಾರೆ.  ಇನ್ನು ಮುಂದಿನ ಐದು ತಿಂಗಳವರೆಗೆ ಇದೇ  ರಾಶಿಯಲ್ಲಿರಲಿದ್ದಾರೆ.  

Written by - Ranjitha R K | Last Updated : Nov 30, 2022, 12:44 PM IST
  • ಜಾತಕದಲ್ಲಿ ಗುರುವನ್ನು ಬಲಪಡಿಸಲು ಈ ಕೆಲಸ ಮಾಡಿ
  • ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬೇಕಾದರೆ ಏನು ಮಾಡಬೇಕು ?
  • ಜೀವನದ ಅಡೆತಡೆಗಳು ದೂರವಾಗಬೇಕಾದರೆ ಈ ಪರಿಹಾರ ಮಾಡಿಕೊಳ್ಳಿ
ಇನ್ನು ಐದು ತಿಂಗಳು  ಗುರು ನೀಡುತ್ತಾನೆ ಭರ್ಜರಿ ಧನಲಾಭ.!  title=
Jupiter Retrograde 2022:

Jupiter Retrograde 2022 : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹ ನಿರ್ದಿಷ್ಟ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತದೆ. ಇದಕ್ಕೆ ಗ್ರಹಗಳ ರಾಶಿ ಪರಿವರ್ತನೆ ಎಂದು ಕರೆಯಲಾಗುತ್ತದೆ. ಮಾತ್ರವಲ್ಲ ಗ್ರಹಗಳು ತನ್ನ ಚಲನೆಯನ್ನು ಕೂಡಾ ಬದಲಿಸುತ್ತದೆ.  ಅದೇ ರೀತಿ ಇತ್ತೀಚೆಗೆ, ದೇವಗುರು ಬೃಹಸ್ಪತಿ ಮೀನ ರಾಶಿಯಲ್ಲಿ ಸಂಕ್ರಮಿಸಿದ್ದಾರೆ.  ಇನ್ನು ಮುಂದಿನ ಐದು ತಿಂಗಳವರೆಗೆ ಇದೇ  ರಾಶಿಯಲ್ಲಿರಲಿದ್ದಾರೆ.  ನಂತರ ಗುರು ಗ್ರಹ ತನ್ನ ರಾಶಿಯನ್ನು ಬದಲಾಯಿಸಿ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಗುರುವನ್ನು ಅದೃಷ್ಟ, ಉನ್ನತ ಶಿಕ್ಷಣ, ಸಂಪತ್ತು, ಜ್ಞಾನ, ಗೌರವದ ಅಂಶ ಎಂದು ಕರೆಯಲಾಗುತ್ತದೆ.  ಯಾರ ಜಾತಕ ದಲ್ಲಿ  ಗುರು ದುರ್ಬಲನಾಗಿರುತ್ತಾನೆಯೋ ಆ ವ್ಯಕ್ತಿಯ ಜೀವನದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಗುರು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಎಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ. 

ಜಾತಕದಲ್ಲಿ ಗುರುವನ್ನು ಬಲಪಡಿಸಲು ಈ ಕೆಲಸ ಮಾಡಿ  :
ವ್ಯಕ್ತಿಯ ಜಾತಕದಲ್ಲಿ ಗುರುವಿನ ಸ್ಥಾನವು ದುರ್ಬಲವಾಗಿದ್ದರೆ, ಬ್ರಹ್ಮ ಮುಹೂರ್ತದಲ್ಲಿ ಎದ್ದು  ಮಡಿಯುಟ್ಟು ಗುರು ಮಂತ್ರವಾದ  ಓಂ ಬೃಹಸ್ಪತಯೇ ನಮಃ ಜಪಿಸಬೇಕು. ಜೊತೆಗೆ ಯಾವುದಾದರೂ ದೇವಸ್ಥಾನಕ್ಕೆ ತೆರಳಿ ಅಲ್ಲಿ ಸೇವೆ ಮಾಡಬೇಕು.   ಹೀಗೆ ಮಾಡುತ್ತಾ ಬಂದರೆ ಜಾತಕದಲ್ಲಿ ಗುರುಬಲ ಚೆನ್ನಾಗಿರುತ್ತದೆ. 

ಇದನ್ನೂ ಓದಿ : ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯಲು ನಿಮ್ಮ ಮನೆಯ ಈ ದಿಕ್ಕಿನಲಿರಲಿ ತುಳಸಿ ಸಸ್ಯ

ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬೇಕಾದರೆ ಏನು ಮಾಡಬೇಕು ? :
ಆರ್ಥಿಕ ಸಮಯೇ ಎದುರಿಸುತ್ತಿದ್ದರೆ, ಗುರುವಾರ, ಸ್ನಾನ ಮತ್ತು ಧ್ಯಾನದ ನಂತರ, ಬಾಳೆ ಮರಕ್ಕೆ ಬೆಲ್ಲ ಮತ್ತು ನೆನೆಸಿದ ಕಡಲೆ ಬೇಳೆಯನ್ನು ಅರ್ಪಿಸಬೇಕು.  ಅಲ್ಲದೆ, ಬಾಳೆ  ಮರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ .

ಜೀವನದ ಅಡೆತಡೆಗಳು ದೂರವಾಗಬೇಕಾದರೆ : 
ಜೀವನದಲ್ಲಿ ಬರುವ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಎದುರಿಸಲು, ಗುರುವಾರದಂದು ಪೂಜೆ ಮಾಡಿ ಮತ್ತು ಗುರು ದೇವರಿಗೆ ಸುಗಂಧ ದ್ರವ್ಯ, ಹಳದಿ ಹೂವುಗಳು, ಹಳದಿ ಭಕ್ಷ್ಯಗಳು, ಹಳದಿ ಬಟ್ಟೆಗಳನ್ನು ಅರ್ಪಿಸಬೇಕು.   ಅಲ್ಲದೆ ಗುರುವಾರದ ಪೂಜೆ ಮಾಡುವಾಗ ಹಳದಿ ಬಟ್ಟೆ ಧರಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. 

ಸಂತೋಷ ಮತ್ತು ಸಮೃದ್ಧಿಗಾಗಿ :
ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗಬೇಕಾದರೆ, ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಅಲ್ಲದೆ, ಹಳದಿ ದಾರಕ್ಕೆ ಅಲ್ಲಲ್ಲಿ ಗಂಟು ಹಾಕಿ  ಕೈಗೆ ಕಟ್ಟಿಕೊಳ್ಳಿ. ಇದಾದ ನಂತರ ರಾತ್ರಿ ಮಲಗುವಾಗ ದಿಂಬಿನ ಮೇಲೆ ನೀರು ಮತ್ತು  ಸೊಂಫನ್ನು  ಇಟ್ಟುಕೊಂಡು ಮಲಗಬೇಕು. 

ಇದನ್ನೂ ಓದಿ : Chanakya Niti: ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿಯೂ ಕೂಡ ನಿಮ್ಮ ಈ 3 ಗುಟ್ಟನ್ನು ಯಾರಿಗೂ ಹೇಳ್ಬೇಡಿ

ಗುರುವಿನ ಶುಭ ಪರಿಣಾಮಗಳಿಗೆ  :
ಜಾತಕದಲ್ಲಿ ಗುರುವಿನ ಶುಭ ಪರಿಣಾಮಗಳಿಗಾಗಿ, 27 ಗುರುವಾರದವರೆಗೆ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಬೇಕು. ಇದರೊಂದಿಗೆ, ಹಳದಿ ಬಣ್ಣದ ಬಟ್ಟೆಯಲ್ಲಿ ಕೇಸರಿ  ಪುಡಿಯನ್ನು ಹಾಕಿಟ್ಟುಕೊಂಡು ಅದನ್ನು ಸದಾ ನಿಮ್ಮ ಜೊತೆ ಇಟ್ಟುಕೊಳ್ಳಿ.  ಇನ್ನು ಮನೆಯಲ್ಲಿ ಸೂರ್ಯಕಾಂತಿ ಗಿಡ ನೆಟ್ಟರೂ ಗುರು ಗ್ರಹ ಬಲಗೊಳ್ಳುತ್ತದೆ.  

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿವೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

Trending News