ರಾಜಧಾನಿಯಲ್ಲಿ ಸಾವಿರ ಕೆ.ಜಿ.ತೂಕದ ಬೃಹದಾಕಾರದ ಕರದಂಟು ಪ್ರದರ್ಶನ

ಅಮೀನಗಡದ ಸುಪ್ರಸಿದ್ಧ ವಿಜಯಾ ಕರದಂಟು ತನ್ನ ನಾಲ್ಕನೇ ಮಳಿಗೆಯನ್ನು ಜಯನಗರದಲ್ಲಿ ಆರಂಭಿಸಿದೆ.  ೮೦ ಜನ ಬಾಣಸಿಗರು ಮೂರು ದಿನ ತಯಾರಿಸಿದ ೧೦೦೦ ಕೆ.ಜಿ. ಕರದಂಟನ್ನು ಪ್ರದರ್ಶನಕ್ಕೆ ಇಡಲಾಗಿದೆ. 

Written by - Zee Kannada News Desk | Last Updated : Dec 13, 2022, 03:43 PM IST
  • ವಿಜಯಾ ಕರದಂಟು ತನ್ನ ನಾಲ್ಕನೇ ಮಳಿಗೆ ಆರಂಭ
  • ೧೦೦೦ ಕೆ.ಜಿ. ಕರದಂಟನ್ನು ಪ್ರದರ್ಶನಕ್ಕೆ ಇಡಲಾಗಿದೆ
  • ೮೦ ಜನ ಬಾಣಸಿಗರು ಸೇರಿ ತಯಾರಿಸಿದ ೧೦೦೦ ಕೆ.ಜಿ. ಕರದಂಟು
ರಾಜಧಾನಿಯಲ್ಲಿ ಸಾವಿರ ಕೆ.ಜಿ.ತೂಕದ ಬೃಹದಾಕಾರದ ಕರದಂಟು ಪ್ರದರ್ಶನ   title=

ಬೆಂಗಳೂರು : ಪೌಷ್ಟಿಕಾಂಶಗಳ ಕಣಜದಿಂದ ಕೂಡಿದ, ಬಾಣಂತಿಯರ ಅಚ್ಚುಮೆಚ್ಚಿನ ಸಿಹಿ ತಿನಿಸು, ಅಮೀನಗಡದ ಸುಪ್ರಸಿದ್ಧ ವಿಜಯಾ ಕರದಂಟು ತನ್ನ ನಾಲ್ಕನೇ ಮಳಿಗೆಯನ್ನು ಜಯನಗರದಲ್ಲಿ ಆರಂಭಿಸಿದೆ. ಶಾಸಕಿ ಸೌಮ್ಯಾರೆಡ್ಡಿ ಮಳಿಗೆಗೆ ಚಾಲನೆ ನೀಡಿದ್ದಾರೆ. ವಿಶ್ವದ ಅತಿ ದೊಡ್ಡ ಅಂದರೆ  ೧೦೦೦ ಕೆ.ಜಿ.ತೂಕದ ಕರದಂಟನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅನಾವರಣಗೊಳಿಸಲಾಯಿತು. 

ನಂತರ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ, ರುಚಿಯ ಜೊತೆಗೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ನೀಡುವ ಡ್ರೈ ಫ್ರುಟ್ಸ್ ಗಳಿಂದ ಇದನ್ನು ತಯಾರಿಸುವುದರಿಂದ  ಬಾಣಂತಿಯರು ಸೇರಿದಂತೆ ಪ್ರತಿಯೊಬ್ಬರಿಗೂ ಇದು ಅತ್ಯುಪಯುಕ್ತವಾಗಿದೆ ಎಂದು  ಹೇಳಿದರು. 

ಇದನ್ನೂ ಓದಿ : Shocking news: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಅಪ್ಪನ ಹತ್ಯೆಗೈದು 30 ಪೀಸ್ ಮಾಡಿದ ಮಗ!

ಬೆಂಗಳೂರಿನ ವಿಜಯ ನಗರದಲ್ಲಿ ನಾಲ್ಕು ವರ್ಷಗಳ ಹಿಂದೆ ಮೊದಲ ಮಳಿಗೆ ಆರಂಭಿಸಿದ ವಿಜಯಾ ಕರದಂಟು, ಜಯನಗರದಲ್ಲಿ ನಾಲ್ಕನೇ ಮಳಿಗೆಗೆ ಚಾಲನೆ ನೀಡಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಲ್ಲಿ ಮಳಿಗೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ವಿಜಯಾ ಕರದಂಟು ಮಾಲೀಕ ಸಂತೋಷ್ ಐಹೊಳ್ಳಿ.

ಮಳಿಗೆಯ ಆಕರ್ಷಣೆಯ ಕೇಂದ್ರಬಿಂದುವಾಗಿ ಗೊಡಂಬಿ, ಬದಾಮಿ, ಪಿಸ್ತಾ, ಒಣದ್ರಾಕ್ಷಿ, ಅಂಜೂರ್ ಸೇರಿದಂತೆ ವಿವಿಧ ಒಣ ಹಣ್ಣಗಳನ್ನು ಉಪಯೋಗಿಸಿ ೮೦ ಜನ ಬಾಣಸಿಗರು ಮೂರು ದಿನ ತಯಾರಿಸಿದ ೧೦೦೦ ಕೆ.ಜಿ. ಕರದಂಟನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದು ವಿಶ್ವದ ಅತಿ ದೊಡ್ಡ ಕರದಂಟು ಪ್ರದರ್ಶನ ಎನ್ನುವ ಸರ್ವಕಾಲಿಕ ದಾಖಲೆಗೆ ಭಾಜನವಾಗಲಿದೆ. 

ಇದನ್ನೂ ಓದಿ : ಟೀಕೆಗೆ ಅಳುಕಲ್ಲ-ಅಂಜಲ್ಲ; ಆತ್ಮಸಾಕ್ಷಿ, ಸತ್ಯದ ಪರ ಅಧಿಕಾರ: ಸಿಎಂ ಬೊಮ್ಮಾಯಿ

ಅಂದಹಾಗೆ ಜಯನಗರದ ೯ನೇ ಬ್ಲಾಕ್‌ನ ೪೧ನೇ ಕ್ರಾಸ್‌ನಲ್ಲಿರುವ ಈ ಸಾವಿರ ಕೆ,ಜಿ, ಕರದಂಟು ಮುಂದಿನ ೧೦ ದಿನಗಳ ಕಾಲ ಪ್ರದರ್ಶನಕ್ಕೆ ಇರಲಿದ್ದು, ಕ್ರಿಸ್‌ಮಸ್‌ನ ಪ್ರಮುಖ ಆಕರ್ಷಣೆಯ ತಾಣವಾಗಿ ಪರಿಣಮಿಸಲಿದೆ.     

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News