ಬೆಂಗಳೂರು: ರಾಜ್ಯದಲ್ಲಿ ಎನ್ಪಿಎಸ್ ಸರ್ಕಾರಿ ನೌಕರರು ಎನ್ಪಿಎಸ್ (New Pension Scheme) ನ್ನು ರದ್ದು ಮಾಡಬೇಕು ಎಂದು ಹೋರಾಟ ನಡೆಸ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿಯವರ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಗೊಂದಲ ಮೂಡಿಸಿತ್ತು. ಸದ್ಯ ಈ ನಿಟ್ಟಿನಲ್ಲಿ ಸಂಘ ಹೋರಾಟಕ್ಕೆ ಸಿದ್ಧವಿದೆ ಎಂದು ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಂಘ ಈ ನಿಟ್ಟಿನಲ್ಲಿ ನಿರ್ಣಾಯಕವಾದ ಹೋರಾಟ ನಡೆಸಲಿದೆ. ಮುಂದಿನ ಏಪ್ರಿಲ್ ನಂತರ ಈ ಸಂಬಂಧ ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : Basavaraja Bommai : ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಬಜೆಟ್ : ಸಿಎಂ ಬೊಮ್ಮಾಯಿ
ತಮ್ಮನ್ನು ಕೆಲವರು ಈ ವಿಚಾರದಲ್ಲಿ ಟೀಕಿಸಿದ್ದಾರೆ. ಸರ್ಕಾರದ ಏಜೆಂಟ್ ಅಂತಾ ದೂರಿದ್ಧಾರೆ. ಆದರೆ, ಸದ್ಯ ಏಳನೇ ವೇತನ ಆಯೋಗದ ಬಗ್ಗೆ ಸಂಘ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮುಂದಿಟ್ಟ ಬೇಡಿಕೆ ಅಸ್ತು ಆಗಿದ್ದು, ವೇತನ ಆಯೋಗ ಕೂಡ ರಚನೆಯಾಗಿದೆ. ಬರುವ ಮಾರ್ಚ್ ಅಂತ್ಯಕ್ಕೆ ಆಯೋಗದ ವರದಿ ಸಲ್ಲಿಸಲಿದ್ದು, ಆ ನಂತರ ಎನ್ಪಿಎಸ್ ರದ್ಧತಿಗಾಗಿ ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.ನಮ್ಮದು ಎರಡು ಪ್ರಮುಖ ಬೇಡಿಕೆ, ಒಂದು ವೇತನ ಆಯೋಗ ರಚನೆ, ಇನ್ನೊಂದು ಎನ್ಪಿಎಸ್ ರದ್ದತಿ, ಸದ್ಯ ವೇತನ ಆಯೋಗ ಸಂಬಂಧ ಆದ್ಯತೆ ನೀಡಿದ್ದೇವೆ,
16 ವರ್ಷದಿಂದ ಎನ್ಪಿಎಸ್ ಜಾರಿಯಲ್ಲಿದೆ. ಆದರೆ ಈಗ ಷೇರು ಮಾರುಕಟ್ಟೆಯ ಪ್ರತಿಕೂಲ ಸನ್ನಿವೇಶದಿಂದ ಪರಿಸ್ಥಿತಿ ಬದಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಲಾಗಿದೆ ಎಂದ ಷಡಾಕ್ಷರಿ, ವೇತನ ಆಯೋಗದಿಂದ 8 ಲಕ್ಷ ನೌಕರರು, 4.5 ಲಕ್ಷ ನಿವೃತ್ತ ನೌಕರರು ಸೇರಿ 12 ಲಕ್ಷ ಮಂದಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!
ಇನ್ನೂ ಎನ್ಪಿಎಸ್ ರದ್ದತಿ ಮತ್ತು ವೇತನ ಆಯೋಗದ ವಿಚಾರದಲ್ಲಿ ಸರ್ಕಾರದ ಮೇಲೆ 40 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ ಇದು ಸರ್ಕಾರ ಮಟ್ಟಿಗೂ ಕಷ್ಟವಾಗಲಿದೆ. ಹೀಗಾಗಿ ಮೂರುವರೆ ಲಕ್ಷ ನೌಕರರ ಸಮಸ್ಯೆಯನ್ನು ಏಪ್ರಿಲ್ ನಂತರ ಕ್ರಮಬದ್ಧ ಹೋರಾಟದೊಂದಿಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.