ಬೆಳಗಾವಿ : ಅಮಿತ್ ಶಾ ಮಂಡ್ಯ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಅಮಿತ್ ಶಾ ಅವರು ಯಾವಾ ಪಿಚ್ ನಲ್ಲಿ ಬೇಕಾದ್ರೂ ಆಡ್ತಾರೆ, ಇಡೀ ರಾಜ್ಯವನ್ನ ಫೋಕಸ್ ಮಾಡ್ತೇವೆ ಎಂದು ಸಿಟಿ ರವಿ ಹೇಳಿದ್ದಾರೆ.
ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗದೆ ಇರುವುದಕ್ಕೆ ವ್ಯಾಪಾಕ ಟೀಕೆಗಳು ವ್ಯಕ್ತವಾಗುತ್ತಿದೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸಿ ಟಿ ರವಿ,ಅಧಿವೇಶನ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಲ್ಲ.ಸಮಗ್ರ ಕರ್ನಾಟಕದ ದೃಷ್ಟಿಯಿಂದ ಅಧಿವೇಶನ ನಡೆಸಲಾಗಿದೆ,ಬಜೆಟ್ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಯಾಗಲಿದೆ ಎಂದರು.
ಇದನ್ನೂ ಓದಿ : ಮಿಡ್ನೈಟ್ ಎಲಿಮಿನೇಷನ್, ‘ಬಿಗ್ ಬಾಸ್’ ಮನೆಯಿಂದ ಗುರೂಜಿ ಔಟ್!
ಬುಧವಾರ ಅಧಿವೇಶನಕ್ಕೂ ಮುನ್ನ ಮಾತಾನ್ನಾಡಿದ ಇವರು,ಅಮಿತ್ ಶಾ ಮಂಡ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ "ಒಳ್ಳೆ ಆಟಗಾರ ಯಾವ ಪಿಚ್ ಆದ್ರೂ ಆಡ್ತಾನೆ,ಒನ್ ಪಿಚ್ ಆದ್ರೂ ಸರಿ,ಬೇರೆ ಪಿಚ್ ಆದ್ರೂ ಸರಿ.ಅಮಿತ್ ಶಾ ಯಾವ ಪಿಚ್ ನಲ್ಲಿಬೇಕಾದ್ರೂ ಆಡ್ತಾರೆ.ಇಡೀ ರಾಜ್ಯವನ್ನ ಫೋಕಸ್ ಮಾಡ್ತೇವೆ,ಒಂದು ಕಾಲದಲ್ಲಿ ನಾವು ಹೇಗಿದ್ವಿ,ಈಗ ಹೇಗಿದ್ದೇವೆ.ಪರಿಶ್ರಮ ಹಾಕಿದ್ರೆ ಮುಂದೊಂದು ದಿನ ಲಾಭ, ಮಂಡ್ಯ,ಕೋಲಾರ, ಚಿಕ್ಕಬಳ್ಳಾಪುರದಲ್ಲೂ ನಾವು ಬರ್ತೇವೆ.ಮಂಡ್ಯ ಯಾರ ಜಾಗೀರೂ ಅಲ್ಲ,ಕುಮಾರಸ್ವಾಮಿಯವರಿಗೂ ಇದು ಗೊತ್ತಿದೆ", ಎಂದರು.
ಹಳೆ ಮೈಸೂರು ಭಾಗದ ವಿಚಾರವಾಗಿ ಹೆಚ್ ಡಿ ಕೆ ಟೀಕೆ:
ಕುಮಾರಸ್ವಾಮಿ ಎಲ್ಲಾ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕಿಲ್ಲ,ಅವರ ಹೇಳಿಕೆ ಬಗ್ಗೆ ಅವರಿಗೆ ಕಮಿಟ್ಮೆಂಟ್ ಇರಲ್ಲ.ಯಾವುದೇ ಜಿಲ್ಲೆಯನ್ನು ಯಾರಿಗೂ ಜಹಾಗೀರ್ ಕೊಟ್ಟಿಲ್ಲ.ಯಾವ ಜಿಲ್ಲೆ ಕೂಡ ಯಾರ ಅಪ್ಪನ ಆಸ್ತೀನು ಅಲ್ಲ,ಪ್ರಜಾಪ್ರಭುತ್ವದಲ್ಲಿ ಜಹಾಗೀರು ಇರೋಕೆ ಆಗಲ್ಲ.ನಮ್ಮದು 5 ಜಿಲ್ಲೆ ಮಾತ್ರ ಅದನ್ನು ಕಳ್ಕೋತಿವಿ ಅಂತ ಅವರಿಗೆ ಆತಂಕ, ಎಂದು ಪರೋಕ್ಷವಾಗಿವಾಗಿ ಹೆಚ್ ಡಿ ಕೆ ಟಾಂಗ್ ನೀಡಿದರು.
ಇದನ್ನೂ ಓದಿ : ಕುತೂಹಲ ಮೂಡಿಸಿದೆ ‘ಜೂಲಿಯೆಟ್ 2’ ಚಿತ್ರದ ಫಸ್ಟ್ ಲುಕ್
ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.ಹಳೆಮೈಸೂರು ಭಾಗದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ,ರಿಪೋರ್ಟ್ ಕಾರ್ಡ್ ಇಡುತ್ತೇವೆ.ದೇವೆಗೌಡ್ರು ಪ್ರಧಾನಿಯಾದಗಿಂದಲೂ ಹಾಸನಕ್ಕೆ ವಿಮಾನ ನಿಲ್ದಾಣದ ಕನಸಿತ್ತು.ಆದ್ರೆ ವಿಮಾನ ನಿಲ್ದಾಣ ಆಗಲು ಡಬಲ್ ಇಂಜಿನ ಸರ್ಕಾರ ಬರಬೇಕಾಯಿತು.ಹಾಸನ,ಮಂಡ್ಯ, ಎಲ್ಲ ಕಡೆಯೂ ನಮ್ಮ ರಿಪೋರ್ಟ್ ಕಾರ್ಡ್ ಇದೆ ಅದನ್ನು ಮುಂದಿಡುತ್ತೇವೆ ಎಂದರು.
ಅಮಿತ್ ಶಾಗೆ ರಾಜಕೀಯ ಚಾಣಕ್ಷ ಅಂತ ಅಭಿದಾನ ಕೊಟ್ಟಿದ್ದಾರೆ,ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಮಿತ್ ಶಾ ಬದಲಾವಣೆ ತಂದಿದ್ದಾರೆ.ಅಮಿತ್ ಶಾ ಬಂದ್ರೆ ಕಾರ್ಯಕರ್ತರಿಗೆ ವಿಶ್ವಾಸ ಹೆಚ್ಚುತ್ತದೆ, ಎಂದರು.ಇದೇ ಸಂದರ್ಭದಲ್ಲಿ ಹಳೇಮೈಸೂರು ಭಾಗದಲ್ಲಿ ಯಾವ ಆಧಾರದಡಿ ಚುನಾವಣೆ ಎದುರಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಹಳೇ ಮೈಸೂರು ಭಾಗದಲ್ಲಿ ಸಿದ್ದಾಂತದ ಮೂಲಕ ಚುನಾವಣೆ ಎದುರಿಸುತ್ತೇವೆ.ಜಾತಿಯಡಿಯಲ್ಲ ಹಿಂದುತ್ವದ ಅಡಿಯಲ್ಲಿ ಪಕ್ಷ ಬೆಳೆದಿದೆ.ಅದೇ ಸಿದ್ದಾಂತದಲ್ಲಿ ಚುನಾವಣಾ ಎದುರಿಸುತ್ತೇವೆ,ಅಭಿವೃದ್ಧಿ ಮತ್ತು ಸಿದ್ದಾಂತದ ಅಡಿಯಲ್ಲಿ ಚುನಾವಣೆ ಎದುರಿಸುತ್ತೇವೆ, ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಜೆ ಹಳ್ಳಿ ಗಲಭೆ ವಿಚಾರವಾಗಿ ಮಾಜಿಸ್ಟ್ರೇಟ್ ವರದಿ:
ಎಸ್ ಡಿ ಪಿ ಐ ಕೃತ್ಯ ಎಂದು ಮಾಜಿಸ್ಟ್ರೇಟ್ ವರದಿ ನೀಡಲಾಗಿದೆ,ಇಂದೊಂದು ವ್ಯವಸ್ಥಿತವಾದ ಷಡ್ಯಂತ್ರ ಅಂತ ಮೊದಲೇ ಹೇಳಿದ್ದೆವು.ಇಲ್ಲಂದ್ರೆ ಅಷ್ಟು ಸಂಘಟಿತವಾಗಿ ದಾಳಿ ನಡೆಸಲು ಆಗ್ತಿರಲಿಲ್ಲ.ನಾವು ಹಿಂದೆ ಎಸ್ ಡಿ ಪಿಐ ಕೃತ್ಯ ಅಂತ ಹೇಳಿದ್ದೆವು,ಈಗ ವರದಿ ಅದನ್ನು ಸಾಕ್ಷಿಕರಿಸಿದೆ, ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.