ʼಮ್ಯಾನ್‌ ಅಪ್‌ ಮಾಸ್‌ʼ ಎನ್‌ಟಿಆರ್‌ ಭೇಟಿಯಾದ ಕ್ರಿಕೆಟಿಗ ಚಹಲ್‌, ಸೂರ್ಯಕುಮಾರ್‌..!

ಆರ್‌ಆರ್‌ಆರ್‌ ಸಿನಿಮಾ ಅಶ್ವಮೇಧದ ಕುದುರೆಯಂತೆ ಒಂದರ ಮೇಲೊಂದು ದಾಖಲೆ ಬರೆಯುತ್ತ ಸಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜಮೌಳಿ ನಿರ್ದೇಶನದ ಚಿತ್ರ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು. ಅತ್ಯುತ್ತಮ ಒರಿಜಿನಲ್‌ ಹಾಡಿಗಾಗಿ ಈ ಪ್ರಶಸ್ತಿ ಬಂದಿತ್ತು. ನಾಟು ನಾಟು ಹಾಡಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

Written by - Krishna N K | Last Updated : Jan 19, 2023, 02:24 PM IST
  • ಆರ್‌ಆರ್‌ಆರ್‌ ಸಿನಿಮಾ ಅಶ್ವಮೇಧದ ಕುದುರೆಯಂತೆ ಒಂದರ ಮೇಲೊಂದು ದಾಖಲೆ ಬರೆಯುತ್ತ ಸಾಗುತ್ತಿದೆ.
  • ಪ್ರಪಂಚದಾದ್ಯಂತ ರಾಜಮೌಳಿ ನಿರ್ದೇಶನದ ಚಿತ್ರ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು.
  • ಇದೀಗ ಎನ್‌ಟಿಆರ್‌ ಅವರನ್ನು ಭೇಟಿಯಾಗಿ ಯುಜ್ವೇಂದ್ರ ಚಹಾಲ್, ಸೂರ್ಯ ಕುಮಾರ್ ಯಾದವ್ ಶುಭ ಕೋರಿದ್ದಾರೆ.
ʼಮ್ಯಾನ್‌ ಅಪ್‌ ಮಾಸ್‌ʼ ಎನ್‌ಟಿಆರ್‌ ಭೇಟಿಯಾದ ಕ್ರಿಕೆಟಿಗ ಚಹಲ್‌, ಸೂರ್ಯಕುಮಾರ್‌..! title=

Yuzvendra Chahal met NTR : ಆರ್‌ಆರ್‌ಆರ್‌ ಸಿನಿಮಾ ಅಶ್ವಮೇಧದ ಕುದುರೆಯಂತೆ ಒಂದರ ಮೇಲೊಂದು ದಾಖಲೆ ಬರೆಯುತ್ತ ಸಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜಮೌಳಿ ನಿರ್ದೇಶನದ ಚಿತ್ರ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು. ಅತ್ಯುತ್ತಮ ಒರಿಜಿನಲ್‌ ಹಾಡಿಗಾಗಿ ಈ ಪ್ರಶಸ್ತಿ ಬಂದಿತ್ತು. ನಾಟು ನಾಟು ಹಾಡಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಇತ್ತೀಚೆಗೆ, ನಟ ಜೂನಿಯರ್ ಎನ್‌ಟಿಆರ್‌ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರನ್ನು ಭೇಟಿಯಾದರು. ಇಬ್ಬರೂ ಒಟ್ಟಿಗೆ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋವನ್ನು ಯುಜುವೇಂದ್ರ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʼಮ್ಯಾನ್‌ ಅಪ್‌ ಮಾಸ್‌ ಜೂ.ಎನ್‌ಟಿಆರ್ ಅವರನ್ನು ಭೇಟಿಯಾಗಿದ್ದು, ನಿಜಕ್ಕೂ ಸಂತೋಷ ತಂದಿದೆ. ಸರಳ ವ್ಯಕ್ತತ್ವ. ಗೋಲ್ಡನ್ ಗ್ಲೋಬ್ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ನಾವೆಲ್ಲರೂ ಹೆಮ್ಮೆಪಡುತ್ತೇವೆ" ಎಂದು ಶೀರ್ಷಿಕೆ ಬರೆದುಕೊಂಡಿದ್ದರು.

 
 
 
 

 
 
 
 
 
 
 
 
 
 
 

A post shared by Surya Kumar Yadav (SKY) (@surya_14kumar)

ಇದನ್ನೂ ಓದಿ: ಕರಾವಳಿ ಕನ್ಯೆ ಸಮೃದ್ದಿ ವಿ. ಶೆಟ್ಟಿ ಮುಡಿಗೆ ಮಿಸ್ ಕ್ವೀನ್ ಆಫ್ ಇಂಡಿಯಾ ಕಿರೀಟ

ಇದಲ್ಲದೇ, ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಕೂಡ ಎನ್‌ಟಿಆರ್‌ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ʼನಿಮ್ಮನ್ನು ಭೇಟಿಯಾಗುವುದು ತುಂಬಾ ಸುಂದರವಾಗಿತ್ತು, ಸಹೋದರ! ಆರ್‌ಆರ್‌ಆರ್ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು" ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಜೂ.ಎನ್‌ಟಿಆರ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಸಂಗೀತ ಸಂಯೋಜಕ ಎಂಎಂ ಕೀರವಾಣಿಯನ್ನು ಅಭಿನಂದಿಸಿದರು. 

ಅಲ್ಲದೆ, ʼಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ಅಭಿನಂದನೆಗಳು ಸರ್ಜಿʼ... ʼನನ್ನ ವೃತ್ತಿಜೀವನದುದ್ದಕ್ಕೂ ನಾನು ಅನೇಕ ಹಾಡುಗಳಿಗೆ ನೃತ್ಯ ಮಾಡಿದ್ದೇನೆ ಆದರೆ ನಾಟು ನಾಟು ನನ್ನ ಹೃದಯಕ್ಕೆ ಶಾಶ್ವತವಾಗಿ ಉಳಿಯುತ್ತದೆ... ಎಂದು  ಬರೆದುಕೊಂಡಿದ್ದರು. ಆರ್‌ಆರ್‌ಆರ್‌ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಈ ಸಿನಿಮಾ ವಿಶ್ವಾದ್ಯಂತ ₹1200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಜೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಜೊತೆಗೆ ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರಿಯಾ ಸರನ್ ಕೂಡ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News