Rachita Ram : ನಟಿ ರಚಿತಾ ರಾಮ್ ವಿರುದ್ಧ ದೂರು, ಗಡಿಪಾರಿಗೆ ಆಗ್ರಹ

Complaint against actress Rachita Ram : ನಟಿ ರಚಿತಾ ರಾಮ್ ಗಡಿಪಾರಿಗೆ ಆಗ್ರಹಿಸಲಾಗಿದೆ. ಸಕ್ಕರೆ ನಾಡಲ್ಲಿ ನಟಿ ರಚಿತಾ ರಾಮ್ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ನಟಿ ರಚಿತಾ ರಾಮ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Written by - Chetana Devarmani | Last Updated : Jan 21, 2023, 01:35 PM IST
  • ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ
  • ಗಣರಾಜ್ಯೋತ್ಸವ ಮರೆತುಬಿಡಿ ಎಂದ ರಚಿತಾ
  • ನಟಿ ರಚಿತಾ ರಾಮ್ ವಿರುದ್ಧ ದೂರು ದಾಖಲು
Rachita Ram : ನಟಿ ರಚಿತಾ ರಾಮ್ ವಿರುದ್ಧ ದೂರು, ಗಡಿಪಾರಿಗೆ ಆಗ್ರಹ  title=
Rachita Ram

ಮಂಡ್ಯ : ನಟಿ ರಚಿತಾ ರಾಮ್ ಗಡಿಪಾರಿಗೆ ಆಗ್ರಹಿಸಲಾಗಿದೆ. ಸಕ್ಕರೆ ನಾಡಲ್ಲಿ ನಟಿ ರಚಿತಾ ರಾಮ್ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ನಟಿ ರಚಿತಾ ರಾಮ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಿಂದ ದೂರು ದಾಖಲಾಗಿದೆ.

ಗಣರಾಜ್ಯೋತ್ಸವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಸಿ, ಈ ದೂರು ನೀಡಿದ್ದಾರೆ. ಗಣರಾಜ್ಯೋತ್ಸವದಂದು ಕ್ರಾಂತಿ ಉತ್ಸವ ಮಾಡಿ ಎಂದು ನಟಿ ರಚಿತಾ ಹೇಳಿಕೆ ಕೊಟ್ಟಿದ್ದರು. ಈ ಹಿನ್ನೆಲೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ದೂರು ನೀಡಿದೆ. 

ಇದನ್ನೂ ಓದಿ : Rachita Ram : ಗಣರಾಜ್ಯೋತ್ಸವ ಮರೆತುಬಿಡಿ ಎಂದ ರಚಿತಾಗೆ ಚಳಿ ಬಿಡಿಸಿದ ನೆಟ್ಟಿಗರು

ಸಂವಿಧಾನ ದಿನಕ್ಕೆ ಅಪಮಾನ ಮಾಡಿದ್ದಾರೆ. ನಾಲಿಗೆ ಹರಿ ಬಿಟ್ಟು ಕ್ರಾಂತಿ ಉತ್ಸವ ಮಾಡಿ ಅಂತ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡಲು ರಚಿತಾ ರಾಮ್ ಗೆ ಯೋಗ್ಯತೆ ಇಲ್ಲ. ಚಿತ್ರರಂಗದಿಂದ ಅವರನ್ನ ಬ್ಯಾನ್ ಮಾಡಿ. ರಚಿತಾ ರಾಮ್ ವಿರುದ್ದ ದೇಶ ದ್ರೋಹದ ಪ್ರಕರಣ ದಾಖಲಿಸಿ. ಈ ದೇಶದಿಂದ ಗಡಿ ಪಾರು ಮಾಡಿ ಎಂದು ದೂರುದಾರರು ಆಗ್ರಹಿಸಿದ್ದಾರೆ.

ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಜನವರಿ 26 ರಂದು ಗಣರಾಜ್ಯೋತ್ಸವದ ದಿನದಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಮೋಷನ್‌ ವೇಳೆ ಮಾತನಾಡಿರುವ ನಟಿ ರಚಿತಾ ರಾಮ್‌, ಇಷ್ಟು ವರ್ಷ ಜನವರಿ 26 ಅಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತು ಬಿಡಿ, ಬರೀ ಕ್ರಾಂತಿ ಉತ್ಸವ ಅಷ್ಟೇ" ಎಂದು ನಟಿ ರಚಿತಾ ರಾಮ್‌ ಹೇಳಿದ್ದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು.  

ಇದನ್ನೂ ಓದಿ : ʼನಾನು ಆರಂಭದಲ್ಲೇ ʼಆ ತಪ್ಪುʼ ಮಾಡಿದೆ..ʼ : ಕನ್ನಡತಿ ರಶ್ಮಿಕಾ ಹೀಗ್ಯಾಕಂದ್ರು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News