ಕಳೆದ 18 ತಿಂಗಳಿನಿಂದ ವೈಟ್ ಬಾಲ್ ಕ್ರಿಕೆಟ್ನಲ್ಲಿ ಸಾಕಷ್ಟು ರನ್ಪ್ರವಾಹ ಹರಿಸಿರುವ ಆಟಗಾರ ಆಗಿರುವ ಸೂರ್ಯಕುಮಾರ್ ಅವರು ಟಾಟಾ ಐಪಿಎಲ್ ವೇಳೆ ಜಿಯೋ ಸಿನಿಮಾದ ಡಿಜಿಟಲ್ ಪ್ರತಿಪಾದನೆ ಮತ್ತು ಕೊಡುಗೆಗಳನ್ನು ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ತಲುಪಿಸಲು ನೆರವಾಗುತ್ತಾರೆ.
'ಮುಂಬರುವ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಜಿಯೋ ಸಿನಿಮಾದ ಜೊತೆ ಕೈಜೋಡಿಸಲು ಖುಷಿಯಾಗುತ್ತಿದೆ. ಕೈಗೆಟಕುವ ಮತ್ತು ಸುಲಭವಾಗಿ ಪಡೆದುಕೊಳ್ಳಬಹುದಾದ ವಿಶ್ವ ದರ್ಜೆಯ ಪ್ರಸ್ತುತತೆಯೊಂದಿಗೆ ಜಗತ್ತಿನೆಲ್ಲೆಡೆಯ ಕ್ರೀಡಾ ಅಭಿಮಾನಿಗಳಿಗೆ ಡಿಜಿಟಲ್ ವೀಕ್ಷಣೆಯ ಅನುಭವವನ್ನು ಜಿಯೋ ಸಿನಿಮಾ ಕ್ರಾಂತಿಕಾರಿಗೊಳಿಸಿದೆ. ಡಿಜಿಟಲ್ ಫ್ಲಾಟ್ಫಾರ್ಮ್ನಲ್ಲಿ ನಿರಂತರವಾದ ಆವಿಷ್ಕಾರಗಳಿಂದ ಅದು ಅಭಿಮಾನಿಗಳಿಗೆ ಆದ್ಯತೆಯ ಆಯ್ಕೆ ಎನಿಸಿದೆ. ನಾನು ಈ ಅತ್ಯಾಕರ್ಷಕ ಜೊತೆಗಾರಿಕೆಯನ್ನು ಎದುರು ನೋಡುತ್ತಿದ್ದೇನೆ' ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ವಿಶ್ವ ದರ್ಜೆಯ ಆವಿಷ್ಕಾರ, ಸಾಟಿಯಿಲ್ಲದ ರೋಚಕತೆ ಮತ್ತು ಅಭಿಮಾನಿಗಳಿಗೆ ಸದಾ ಮನರಂಜನೆ ಒದಗಿಸಬೇಕಾದ ನಮ್ಮ ನಿಲುವನ್ನು ಸೂರ್ಯಕುಮಾರ್ ಯಾದವ್ ಪ್ರತಿಬಿಂಬಿಸುತ್ತಾರೆ. ನಮ್ಮ ಟಾಟಾ ಐಪಿಎಲ್ ಪ್ರಸ್ತುತಿಯು ಸೂರ್ಯಕುಮಾರ್ ಅವರ ಅಮೋಘವಾದ 360-ಡಿಗ್ರಿ ಬ್ಯಾಟಿಂಗ್ ಶೈಲಿಯನ್ನೇ ಪ್ರತಿಫಲಿಸುತ್ತದೆ. ಗ್ರಾಹಕರಿಗೆ ಯಾವುದೇ ಭಾಷೆ, ಕೈಗೆಟುಕುವಿಕೆಯ ಗಡಿಗಳಿಲ್ಲದೆ ಡಿಜಿಟಲ್ನಲ್ಲಿ ಕ್ರೀಡೆಯನ್ನು ಸವಿಯುವ ಸಂಪೂರ್ಣ ಅವಕಾಶವನ್ನು ಒದಗಿಸುತ್ತದೆ' ಎಂದು ವಯಾಕಾಮ್18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.
ಇದನ್ನೂ ಓದಿ-ಐಪಿಎಸ್ ಅಧಿಕಾರಿ ಸೋಗಿನಲ್ಲಿ 1.75 ಕೋಟಿ ವಂಚಿಸಿದ ನಕಲಿ ಎಸ್ಪಿ..!
ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸುವುದರೊಂದಿಗೆ 2023ರ ಆವೃತ್ತಿಯ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಂದು ಆರಂಭಗೊಳ್ಳಲಿದೆ. ಈ ವರ್ಷ ಎಲ್ಲ ಪಂದ್ಯಗಳು ಯಾವುದೇ ಶುಲ್ಕವಿಲ್ಲದೆ ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಕಾಣಲಿವೆ.
ಇದರೊಂದಿಗೆ, ಜಿಯೋ ಸಿನಿಮಾ 4ಕೆ ಫೀಡ್ಅನ್ನೂ ಪೂರೈಸಲಿದೆ. ಇದರಲ್ಲಿ ಬಹುಭಾಷೆ ಮತ್ತು ಬಹು ಕ್ಯಾಮರಾಗಳ ಆಯ್ಕೆಯೂ ಇರಲಿದೆ. ಜತೆಗೆ ಅಂಕಿ-ಅಂಶಗಳ ಮಾಹಿತಿಯೂ ಲಭಿಸಲಿದೆ. ಇದರೊಂದಿಗೆ 700 ದಶಲಕ್ಷಕ್ಕೂ ಅಧಿಕ ಇಂಟರ್ನೆಟ್ ಬಳಕೆದಾರರಿಗೆ 2023ರ ಟಾಟಾ ಐಪಿಎಲ್ ತಲುಪಲಿದೆ. ಜಿಯೋ ಸಿನಿಮಾ ಈಗ ಜಿಯೋ, ಏರ್ಟೆಲ್, ವಿ ಮತ್ತು ಬಿಎಸ್ಎನ್ಎಲ್ ಸಬ್ಸ್ಕ್ರೈಬರ್ಗಳಿಗೆ ಲಭ್ಯವಿದೆ. ಇದರಲ್ಲಿ ಐದು ಭಾಷೆಗಳಾದ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ನ ಎಲ್ಲ ಪಂದ್ಯಗಳ ನೇರಪ್ರಸಾರವನ್ನೂ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ-ಸಾಕಷ್ಟು ನಿಗೂಢವಾಯ್ತು ವಿ. ಸೋಮಣ್ಣನ ನಡೆ...!
ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.