Hair Care: ನೀರಿಗೆ ಈ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಜೀವನದಲ್ಲಿ ಮತ್ತೆಂದೂ ಕಾಡುವುದಿಲ್ಲ ತಲೆಹೊಟ್ಟಿನ ಸಮಸ್ಯೆ!

Hair Care Tips: ನಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಮತ್ತು ರಂಜಕದಂತಹ ಗುಣಲಕ್ಷಣಗಳು ಹೇರಳವಾಗಿವೆ. ಇದು ನಿಮ್ಮ ಕೂದಲನ್ನು ಒಡೆಯದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿ ಮಾಡುತ್ತದೆ.

Written by - Bhavishya Shetty | Last Updated : Apr 8, 2023, 01:56 AM IST
    • ನಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಮತ್ತು ರಂಜಕದಂತಹ ಗುಣಲಕ್ಷಣಗಳು ಹೇರಳವಾಗಿವೆ.
    • ಇದು ನಿಮ್ಮ ಕೂದಲನ್ನು ಒಡೆಯದಂತೆ ರಕ್ಷಿಸಲು ಸಹಾಯ ಮಾಡುತ್ತದೆ.
    • ಜೊತೆಗೆ ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿ ಮಾಡುತ್ತದೆ
Hair Care: ನೀರಿಗೆ ಈ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಜೀವನದಲ್ಲಿ ಮತ್ತೆಂದೂ ಕಾಡುವುದಿಲ್ಲ ತಲೆಹೊಟ್ಟಿನ ಸಮಸ್ಯೆ! title=
Hair Care Tips

Hair Care Tips: ಇಂದಿನ ಕಾಲದ ಜೀವನಶೈಲಿಯಿಂದಾಗಿ ಕೂದಲು ಒಣಗುವುದರಿಂದ ತಲೆಹೊಟ್ಟು ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ನಿಮ್ಮ ಕೂದಲಿನಲ್ಲಿ ತುರಿಕೆ ಪ್ರಾರಂಭವಾಗುತ್ತದೆ, ಇದರಿಂದ ನೀವು ಕಿರಿಕಿರಿಯನ್ನು ಅನುಭವಿಸುತ್ತೀರಿ. ಮತ್ತೊಂದೆಡೆ, ಕೆಲವು ಜನರ ಎಣ್ಣೆಯುಕ್ತ ನೆತ್ತಿಯ ಕಾರಣ, ಅವರ ಕೂದಲು ಜಿಗುಟಾಗಿ ಕಾಣಲು ಪ್ರಾರಂಭಿಸುತ್ತದೆ. ಈ ಎರಡೂ ಸಮಸ್ಯೆಗಳನ್ನು ತಪ್ಪಿಸಲು, ಕೂದಲಿಗೆ ನಿಂಬೆ ನೀರನ್ನು ಹಚ್ಚಿ.

ಇದನ್ನೂ ಓದಿ: IPL 2023: ಹೀನಾಯ ಸೋಲಿನ ಬಳಿಕ RCBಯಿಂದ ಹೊರಬಿದ್ದ ಆಟಗಾರ: ಈ ಮಾರಕ ಬೌಲರ್ ಗ್ರ್ಯಾಂಡ್ ಎಂಟ್ರಿ!

ನಿಂಬೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಮತ್ತು ರಂಜಕದಂತಹ ಗುಣಲಕ್ಷಣಗಳು ಹೇರಳವಾಗಿವೆ. ಇದು ನಿಮ್ಮ ಕೂದಲನ್ನು ಒಡೆಯದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿ ಮಾಡುತ್ತದೆ.

ಕೂದಲಿನ ಆರೈಕೆಗೆ ನಿಂಬೆ ನೀರನ್ನು ಹೀಗೆ ತಯಾರಿಸಿ ಹಚ್ಚಿ:

  • ಮೊದಲು ಒಂದು ಲೋಟ ನೀರನ್ನು ತೆಗೆದುಕೊಳ್ಳಿ.
  • ನಂತರ ಅದಕ್ಕೆ 1 ನಿಂಬೆಹಣ್ಣಿನ ರಸವನ್ನು ಹಿಂಡಿ.
  • ಇದರ ನಂತರ, ನೀರಿನಿಂದ ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ನಿಮ್ಮ ಕೂದಲಿಗೆ  ಹಚ್ಚಲು ನಿಂಬೆ ಮನೆಮದ್ದು ಸಿದ್ಧವಾಗಿದೆ.

ಕೂದಲಿಗೆ ನಿಂಬೆ ನೀರನ್ನು ಹೀಗೆ ಹಚ್ಚಿರಿ:

  • ಕೂದಲಿಗೆ ನಿಂಬೆ ನೀರನ್ನು ಹಚ್ಚುವಮೊದಲು ನಿಮ್ಮ ಕೂದಲನ್ನು ತೊಳೆದು ಸ್ವಚ್ಛಗೊಳಿಸಿ.
  • ನಂತರ ಸಿದ್ಧಪಡಿಸಿದ ನಿಂಬೆ ನೀರನ್ನು ನಿಮ್ಮ ಕೂದಲಿಗೆ ಹಚ್ಚಿ.
  • ಕೂದಲಿಗೆ ನಿಂಬೆ ನೀರನ್ನು ಬಳಸುವುದರಿಂದ ನೆತ್ತಿಯಲ್ಲಿರುವ ಎಣ್ಣೆ ಅಂಶ ಕಡಿಮೆಯಾಗುತ್ತದೆ.
  • ಇದರೊಂದಿಗೆ, ಇದು ನಿಮ್ಮ ಕೂದಲಿನಲ್ಲಿ ಆಮ್ಲ-ಕ್ಷಾರೀಯವನ್ನು ಸಮತೋಲನದಲ್ಲಿಡುತ್ತದೆ.
  • ಲಿಂಬೆಯನ್ನು ಬಳಸುವುದರಿಂದ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಪಂದ್ಯಕ್ಕೂ ಮುನ್ನ ಪುಟ್ಟ ಅಭಿಮಾನಿಗೆ ಆಟೋಗ್ರಾಫ್ ಕೊಟ್ಟ Virat Kohli: ಆ ಕಂದಮ್ಮನ ಖುಷಿಯನ್ನೊಮ್ಮೆ ನೋಡಿ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News