ಮುಂಬೈ: ವಿಶ್ವದ ಟಾಪ್ ಟೆಕ್ ಆಪಲ್ ಕಂಪನಿಯು ಮುಂಬೈನಲ್ಲಿ ತನ್ನ ಮೊದಲ ಮಳಿಗೆಯನ್ನುಇಂದು ತೆರೆದಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಸಾರಥ್ಯದಲ್ಲಿ ಆಪಲ್‌ನ ಮೊದಲ ಅಧಿಕೃತ ಸ್ಟೋರ್ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ತೆರೆಯಲಾಯಿತು.
ಇದನ್ನೂ ಓದಿ: Amarnath Yatra: ಅಮರನಾಥ ಯಾತ್ರೆಗೆ ಹೋಗಬಯಸುವವರಿಗೆ ಗುಡ್ ನ್ಯೂಸ್ !
ಮಳಿಗೆಯಲ್ಲಿ ನಾಳೆಯಿಂದ ಕಾರ್ಯಾರಂಭಿಸಲಿದ್ದು, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಡ್ರೈವ್ ಮಾಲ್ ಮುಖೇಶ್ ಅಂಬಾನಿ ಒಡೆತನದಲ್ಲಿದೆ. ಆಪಲ್‌ನ ಸ್ಟೋರ್ ಬಗ್ಗೆ ಸಿಇಒ ಟೀಮ್ ಕುಕ್ , ಆಪಲ್‌ನಲ್ಲಿ ನಮ್ಮ ಧ್ಯೇಯವು ಜೀವನವನ್ನು ಸಮೃದ್ಧಗೊಳಿಸುವುದು ಮತ್ತು ಪ್ರಪಂಚದಾದ್ಯಂತದ ಜನರನ್ನು ಸಬಲೀಕರಣಗೊಳಿಸುವುದರ ಜೊತೆ ದೀರ್ಘಕಾಲದ ಇತಿಹಾಸವನ್ನು ನಿರ್ಮಿಸಲು ಉತ್ಸುಕರಾಗಿದ್ದೇವೆ ಎಂದು ಟೀಮ್ ಕುಕ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ನೀರಡಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ನೀರುಣಿಸಿದ ವ್ಯಕ್ತಿ..! ಹೃದಯಸ್ಪರ್ಶಿ ವಿಡಿಯೋ ವೈರಲ್
ಆಪಲ್ ಈಗ 25 ದೇಶಗಳಲ್ಲಿ ಒಟ್ಟು 551 ಮಳಿಗೆಗಳನ್ನು ಹೊಂದಿದ್ದು, ಏಪ್ರಿಲ್ 20 ರಂದು ದೆಹಲಿಯ ಸಾಕೇತ್‌ನಲ್ಲಿ ಮತ್ತೊಂದು ಆಪಲ್ ಸ್ಟೋರ್ ತೆರೆಯಲಿದ್ದು, ನಂತರ ಅದರ ಸಂಖ್ಯೆ 552 ಕ್ಕೆ ಏರಲಿದೆ.
The energy, creativity, and passion in Mumbai is incredible! We are so excited to open Apple BKC — our first store in India. pic.twitter.com/talx2ZQEMl
— Tim Cook (@tim_cook) April 18, 2023
ಆಪಲ್ ಸ್ಟೋರ್ ವಿಶೇಷತೆಗಳು..
* ಅಧಿಕೃತ ಮಳಿಗೆಯು ಸೂಪರ್ ಲಾರ್ಜ್ ಸ್ಟೋರ್ ಆಗಿದೆ.
* ಎಷ್ಟೇ ಜನಸಂದಣಿ ಇದ್ದರೂ ಉತ್ಪನ್ನವನ್ನು ನೋಡಲು ಅಥವಾ ಆರಿಸಲು ಯಾವುದೇ ತೊಂದರೆ ಇಲ್ಲ
* ವಿಭಿನ್ನ ವಿನ್ಯಾಸದಲ್ಲಿ ಆಪಲ್ ಸ್ಟೋರ್ ಎಲ್ಲರನ್ನು ಸೆಳೆಯುತ್ತಿದೆ.
* ಮುಂಬೈಯಲ್ಲಿ ನಿರ್ಮಿಸಿದ್ದರೂ ನ್ಯೂಯಾರ್ಕ್ ಅಂಗಡಿಯ ಶೈಲಿ ಹೊಂದಿದೆ..
* ಉತ್ಪನ್ನವನ್ನು ಖರೀದಿಸಿದ ನಂತರ ಬಿಲ್ಲಿಂಗ್‌ಗಾಗಿ ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಆಪಲ್ ಸ್ಟೋರ್ ನೌಕರರು ಬಿಲ್ಲಿಂಗ್‌ಗಾಗಿ ಮೊಬೈಲ್ ಪಾವತಿ ಟರ್ಮಿನಲ್‌ಗಳಲ್ಲಿ ಒಯ್ಯುಬಹುದು.
* ಈ ಮಳಿಗೆಗಳು ಉತ್ತಮ ವಿನಿಮಯ ಮೌಲ್ಯಕ್ಕೆ ಹೆಸರುವಾಸಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.