Elon Musk ಗೋಸ್ಕರ 'ತೂ ಚೀಜ್ ಬಡಿ ಹೈ..' ಹಾಡು ಹೇಳಿದ ಬಿಗ್ ಬಿ ಅಮಿತಾಭ್!

Amitabh Bachchan: ತಮ್ಮ ಟ್ವಿಟ್ಟರ್ ಖಾತೆಗೆ ಬ್ಲೂ ಟಿಕ್ ವಾಪಸ್ ದೊರೆತ ಖುಷಿಯಲ್ಲಿ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್ ಎಲಾನ್ ಮಸ್ಕ್ ಅವರಿಗೆ ವಿಶಿಷ್ಠ ಶೈಲಿಯಲ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ಈ ಟ್ವೀಟ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಅವರ ಈ ಟ್ವೀಟ್ ಗೆ ನೆಟ್ಟಿಗರ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.  

Written by - Nitin Tabib | Last Updated : Apr 22, 2023, 05:23 PM IST
  • ತು ಚೀಜ್ ಬಡಿ ಹೈ ಮಸ್ತ್ ಮಸ್ತ್ ಹಾಡು 1994 ರಲ್ಲಿ ಬಿಡುಗಡೆಯಾದ
  • 'ಮೊಹ್ರಾ' ಚಿತ್ರದ ಹಾದಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
  • ಟ್ವಿಟರ್ ಬ್ಲೂ ಟಿಕ್ ಅನ್ನು ಮರುಸ್ಥಾಪಿಸುವಂತೆ ಕೋರಿ ಅಮಿತಾಬ್ ಬಚ್ಚನ್ ಶುಕ್ರವಾರ ಟ್ವೀಟ್ ಮಾಡಿದ್ದರು,
Elon Musk ಗೋಸ್ಕರ 'ತೂ ಚೀಜ್ ಬಡಿ ಹೈ..' ಹಾಡು ಹೇಳಿದ ಬಿಗ್ ಬಿ ಅಮಿತಾಭ್! title=

Twitter Blue Tick: ಕಳೆದ ಹಲವು ದಿನಗಳಿಂದ ತಮ್ಮ ಟ್ವಿಟ್ಟರ್ ಖಾತೆಯ ಹೆಸರಿನಿಂದ ಬ್ಲ್ಯೂಟಿಕ್ ಕಳೆದುಕೊಂಡ ಟ್ವಿಟ್ಟರ್ಥಿಗಳಿಂದ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಲವು ಮೀಮ್ಸ್ ಗಳು ಕಂಡುಬರುತ್ತಿವೆ. ಹೀಗಿರುವಾಗ ಖ್ಯಾತ ಬಾಲೀವುಡ್ ನಟ ಅಮಿತಾಭ್ ಬಚ್ಚನ್ ಅವರ ಬ್ಲ್ಯೂ ಟಿಕ್ ಮರುಸ್ಥಾಪಿಸಲಾಗಿದ್ದು, ಅಮಿತಾಭ್ ತುಂಬಾ ವಿಶಿಷ್ಟ ರೀತಿಯಲ್ಲಿ ಟ್ವಿಟ್ಟರ್ ಹೊಸ ಸಿಇಓ ಎಲಾನ್ ಮಸ್ಕ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 

ತೂ ಚೀಜ್ ಬಡಿ ಹೈ ಮಸ್ಕ್ ಮಸ್ಕ್ 
ಉತ್ತರ ಪ್ರದೇಶದ ಆಡು ಭಾಷೆಯಲ್ಲಿ ಅಮಿತಾಭ್ ಬಚ್ಚನ್ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿರುವ ಅಮಿತಾಭ್  "ಎ ಮಸ್ಕ್ ಅಣ್ಣಾ ನನ್ನ ಹೆಸರಿನ ಮುಂದೆ ಬ್ಲ್ಯೂ ಟಿಕ್ ಮರುಸ್ಥಾಪಿಸಿದ್ದಕ್ಕಾಗಿ ನಿನಗೆ ಧನ್ಯವಾದಗಳು, ತೂ ಚೀಜ್ ಬಡಿ ಹೈ musk musk, ತೂ ಚೀಜ್ ಬಡಿ ಹೈ musk" ಎಂದಿದ್ದಾರೆ. ಅಮಿತಾಭ್ ಅವರ ವೈರಲ್ ಆಗುತ್ತಿರುವ ಈ ಟ್ವೀಟ್ ಅನ್ನು ನೀವೂ ಒಮ್ಮೆ ನೋಡಿ...

ಇದನ್ನೂ ಓದಿ-ಚದುರಿಹೋಗಲಿದೆಯೇ ಮಹಾ ವಿಕಾಸ್ ಆಘಾಡಿ? ಭಾರಿ ಕುತೂಹಲಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ

ತು ಚೀಜ್ ಬಡಿ ಹೈ ಮಸ್ತ್ ಮಸ್ತ್ ಹಾಡು 1994 ರಲ್ಲಿ ಬಿಡುಗಡೆಯಾದ 'ಮೊಹ್ರಾ' ಚಿತ್ರದ ಹಾದಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಟ್ವಿಟರ್ ಬ್ಲೂ ಟಿಕ್ ಅನ್ನು ಮರುಸ್ಥಾಪಿಸುವಂತೆ ಕೋರಿ  ಅಮಿತಾಬ್ ಬಚ್ಚನ್ ಶುಕ್ರವಾರ ಟ್ವೀಟ್ ಮಾಡಿದ್ದರು, ಈ ಕುರಿತು ಟ್ವೀಟ್ ಮಾಡಿದ್ದ ಅಮಿತಾಭ್, ಹೇ ಟ್ವಿಟರ್ ಸಹೋದರ! ಈಗ ನಾನು ಪಾವತಿಯನ್ನೂ ಮಾಡಿದ್ದೇನೆ, ಹಾಗಾಗಿ ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಅನ್ನು ಮರುಸ್ಥಾಪಿಸು, ಇದರಿಂದ ನಾನೇ ಅಮಿತಾಬ್ ಬಚ್ಚನ್ ಎಂದು ಜನರಿಗೆ ತಿಳಿಯುತ್ತದೆ" ಎಂದಿದ್ದರು.

ಇದನ್ನೂ ಓದಿ-Eid 2023: 'ಪ್ರಾಣ ಬೇಕಾದರೂ ಕೊಡುವೆ, ಆದರೆ ದೇಶ ವಿಭಜನೆಗೆ ಅವಕಾಶ ಕೊಡಲ್ಲ' ಮಮತಾ ಬ್ಯಾನರ್ಜಿ ಹೀಗೆ ಹೇಳಿದ್ದಾದರು ಏಕೆ?

ಟ್ವಿಟರ್ ಒಂದು ಪೇ ಮಾದರಿಯ ಅಡಿಯಲ್ಲಿ ಅನೇಕ ಉನ್ನತ ಬಳಕೆದಾರರ ಅಧಿಕೃತ ಖಾತೆಗಳಿಂದ ನೀಲಿ ಟಿಕ್‌ಗಳನ್ನು ತೆಗೆದುಹಾಕಿದೆ. ಮೈಕ್ರೋಬ್ಲಾಗಿಂಗ್ ಸೈಟ್ (ಟ್ವಿಟರ್) ಹಲವು ಖಾತೆಗಳ ವೇರಿಫೈಡ್  ಚೆಕ್-ಮಾರ್ಕ್ ಸ್ಟೇಟಸ್ ಅನ್ನು ಹಾಕಲಾಗುವುದು ಎಂದು ಮೊದಲೇ ಘೋಷಿಸಿತ್ತು. ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಳ್ಳುವ ಮೊದಲು ಈ ಖಾತೆಗಳನ್ನು ಟ್ವಿಟರ್ ಪರಿಶೀಲಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News