Budh Uday 2023 In Aries: ವೈದಿಕ ಜೋತಿಷ್ಯ ಪಂಚಾಗದ ಪ್ರಕಾರ ನವಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ ಮತ್ತು ಶುಭ-ಅಶುಭ ಯೋಗಗಳನ್ನು ರೂಪಿಸುತ್ತವೆ. ಇದೇ ರೀತಿ ಗ್ರಹಗಳ ಉದಯ ಮತ್ತು ಅಸ್ತ ಕೂಡ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತವೆ. ಪ್ರಸ್ತುತ ಗ್ರಹಗಳ ರಾಜಕುಮಾರ ಬುಧ ಮೇ 14 ರಂದು ಮೇಷ ರಾಶಿಯಲ್ಲಿ ಉದಯಿಸಲಿದ್ದಾನೆ. ಬುಧನ ಈ ಉದಯ ಆತನ ಪ್ರಚಂಡ ಪ್ರಭಾವಕ್ಕೆ ಕಾರಣವಾಗಲಿದ್ದು, ಇದರಿಂದ ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಲಾಭ ಹಾಗೂ ಭಾಗ್ಯೋದಯ ಯೋಗ ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಮೇಷ ರಾಶಿ: ಬುಧ ಮೇಷ ರಾಶಿಯಲ್ಲಿಯೇ ಉದಯಿಸಲಿದ್ದಾನೆ ಮತ್ತು ಇದರಿಂದ ನಿಮಗೆ ಅಪಾರ ಲಾಭ ಸಿಗಲಿದ್ದು, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಮತ್ತು ಚೈತನ್ಯ ಕಂಡುಬರಲಿದೆ. ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ ಮತ್ತು ಅವರ ಉನ್ನತಿಯೂ ಕೂಡ ಸಂಭವಿಸಲಿದೆ. ವಿವಾಹಿತರಿಗೆ ಅತ್ತೆಮನೆಯ ಬೆಂಬಲ ಸಿಗಲಿದೆ. ವ್ಯಾಪಾರಿಗಳ ಪಾಲಿಗೆ ಈ ಅವಧಿ ತುಂಬಾ ಅನುಕೂಲಕರವಾಗಿದೆ. ಹೊಸ ಹೊಸ ವ್ಯಕ್ತಿಗಳ ಜೊತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಉತ್ತಮ ಲಾಭ ಸಿಗಲಿದೆ.
ಕರ್ಕ ರಾಶಿ: ಬುಧ ಗ್ರಹ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಉದಯಿಸಲಿರುವ ಕಾರಣ ಬುಧನ ಈ ಉದಯ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮಗೆ ಕೆಲಸ ಮತ್ತು ವ್ಯಾಪಾರದಲ್ಲಿ ಉತ್ತಮ ಯಶಸ್ಸು ಪ್ರಾಪ್ತಿಯಾಗಲಿದೆ. ವೃತ್ತಿ ಜೀವನದ ಸೌಕರ್ಯಗಳಲ್ಲಿ ವೃದ್ಧಿಯಾಗಲಿದೆ. ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿದ್ದು ಭಾರಿ ಧನಲಾಭ ಪ್ರಾಪ್ತಿಯಾಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದ್ದು, ದೀರ್ಘಕಾಲದಿಂದ ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರಲಿದೆ. ಸಣ್ಣ ಪುಟ್ಟ ಪ್ರಯಾಣಗಳು ಸಂಭವಿಸುವ ಸಾಧ್ಯತೆ ಇದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಸಾಡೇಸಾತಿ ನಡೆಯುತ್ತಿದ್ದು, ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆವಹಿಸಿ. ಶನಿ ದೇವನಿಗೆ ಪೂಜೆ ಸಲ್ಲಿಸಿ. ಎಲ್ಲವೂ ಸರಿಹೋಗಲಿದೆ.
ಸಿಂಹ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಬುಧನ ಉದಯ ನೆರವೇರಿಯಲಿರುವ ಕಾರಣ ಈ ಉದಯ ನಿಮ್ಮ ಪಾಲಿಗೆ ಅಂತ್ಯಂತ ಶುಭ ಸಾಬೀತಾಗಲಿದೆ. ಬುಧನ ಉದಯ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದ್ದು, ನಿಮ್ಮ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಇದುವರೆಗೆ ಕಷ್ಟ ಸಾಧ್ಯ ಎನ್ನಿಸುವ ಕೆಲಸ ಕಾರ್ಯಗಳೂ ಕೂಡ ಕೈಗೂಡಲಿವೆ. ಈ ಸಮಯದಲ್ಲಿ ನಿಮಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಹಳೆ ಹೂಡಿಕೆಗಳಿಂದಲೂ ಕೂಡ ನಿಮಗೆ ಲಾಭ ಸಿಗಲಿದೆ. ಮನೆಯಲ್ಲಿ ಧಾರ್ಮಿಕ ಹಾಗೂ ಮಂಗಳ ಕಾರ್ಯಗಳು ನೆರವೇರಲಿವೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ-ಸ್ಥಾನಮಾನ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-Shubh Navpancham Yog: 30 ವರ್ಷಗಳ ಬಳಿಕ ಶನಿ-ಶುಕ್ರರ ಯುತಿಯಿಂದ ನವಪಂಚಮ ರಾಜ ಯೋಗ, ಈ ರಾಶಿಗಳ ಭಾಗ್ಯೋದಯ ಪಕ್ಕಾ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ