Dharwad Snake News : ಮನೆಯ ಹಿತ್ತಲಿನಲ್ಲಿ ಅಡಗಿದ್ದವು 25 ನಾಗರ ಹಾವುಗಳು, ನೆಲದ ಅಡಿಯಿಂದ ಮೇಲೆದ್ದ ರಾಶಿ ರಾಶಿ ಉರಗಗಳು!

Dharwad Snake News : ಧಾರವಾಡ ಜಿಲ್ಲೆಯಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ನಾಗರ ಹಾವೊಂದು ಓಡಾಟ ನಡೆಸಿತ್ತು.  

Written by - Chetana Devarmani | Last Updated : Jun 10, 2023, 12:20 PM IST
  • ಮನೆಯ ಸುತ್ತ ಅಡಗಿದ್ದವು 25 ನಾಗರ ಹಾವುಗಳು
  • ಮನೆಯ ಹಿತ್ತಲಿನಲ್ಲಿ ಓಡಾಟ ನಡೆಸಿದ್ದ ನಾಗರ ಹಾವು
  • 25 ಮರಿಗಳೊಂದಿಗೆ ನೆಲದಡಿ ಅವಿತಿದ್ದ ಉರಗ
Dharwad Snake News : ಮನೆಯ ಹಿತ್ತಲಿನಲ್ಲಿ ಅಡಗಿದ್ದವು 25 ನಾಗರ ಹಾವುಗಳು, ನೆಲದ ಅಡಿಯಿಂದ ಮೇಲೆದ್ದ ರಾಶಿ ರಾಶಿ ಉರಗಗಳು!  title=

ಧಾರವಾಡ: ಮನೆಯ ಸುತ್ತ ಕಳೆದ ಹಲವಾರು ದಿನಗಳಿಂದ ನಾಗರ ಹಾವನ್ನು ಗಮನಿಸಿ ಉರಗ ತಜ್ಞರನ್ನು ಕರೆಸಿ ಹಾವು ಹಿಡಿಯಲು ಮುಂದಾದವರು ಬೆಚ್ಚಿಬಿದ್ದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ  ಹಿರೇಹರಕುಣಿ ಗ್ರಾಮದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ನಾಗರ ಹಾವೊಂದು ಓಡಾಟ ನಡೆಸಿತ್ತು. ಹಾವಿನ ನಡೆ ಗಮನಿಸಿದ ಕುಟುಂಬಸ್ಥರು ಉರಗ ತಜ್ಞರನ್ನು ಕರೆಸಿ ಹಾವು ಹಿಡಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ಚೀನಾವನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕು, ಪೊಳ್ಳು ಹೆಗ್ಗಳಿಕೆಗಳ ಮೂಲಕ ಅಲ್ಲ-ಮಲ್ಲಿಕಾರ್ಜುನ್‌ ಖರ್ಗೆ

ಈ ವೇಳೆ ನಾಗರ ಹಾವು 25 ಮರಿಗಳೊಂದಿಗೆ ನೆಲದಡಿ ಅವಿತಿದ್ದನ್ನು ನೋಡಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ. ತಾಯಿ ನಾಗರ ಹಾವನ್ನು ಉರಗ ತಜ್ಞ ಹಿಡಿಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ 25 ನಾಗರ ಹಾವಿನ ಮರಿಗಳು ನೆಲದ ಅಡಿಯಿಂದ ಹೊರ ಬಂದಿವೆ.

ಗ್ರಾಮಸ್ಥರು ಹಾವು ತನ್ನ ಮರಿಗಳೊಡನೆ ವಾಸವಾಗಿದ್ದನ್ನು ಕಂಡು ಅಚ್ಚರಿಗೆ ಒಳಪಟ್ಟಿದ್ದಲ್ಲದೆ, ತಮ್ಮ ತಮ್ಮ ಮೊಬೈಲ್ ಕ್ಯಾಮರಾ ಒಳಗೆ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯ ಹಾವು ಹಾಗೂ ಹಾವಿನ ಮರಿಗಳನ್ನು ಸೆರೆ ಹಿಡಿದು ಉರಗ ತಜ್ಞ ಹಾವುಗಳನ್ನು  ಕಾಡಿಗೆ ಬಿಟ್ಟಿದ್ದಾರೆ. ಹಾವು ಪತ್ತೆಯಾಗುತಿದ್ದಂತೆ ಜನರು ಅವುಗಳನ್ನ ನೋಡಲು ನಾ ಮುಂದು ತಾ ಮುಂದು ಎಂದು ಆಗಮಿಸಿದರು. ಹಾವು ಪತ್ತೆಯಾದ ಬಳಿಕ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ನಾರಿಯರೇ ನಾಳೆಯಿಂದ ಬಸ್‌ನಲ್ಲಿ ಫ್ರೀಯಾಗಿ ಪ್ರಯಾಣಿಸಿ..! ಉಚಿತ ಖಚಿತವಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News