Shani Gochar 2023: ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಮಾರ್ಗಿ ಶನಿ

Shani Gochar 2023: ಸದ್ಯ ಹಿಮ್ಮುಖವಾಗಿ ಚಲಿಸುತ್ತಿರುವ ಶನಿ ದೇವನು ಮುಂದಿನ ತಿಂಗಳು ಎಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಈ ವೇಳೆ ಶನಿಯ ಶುಭ-ಅಶುಭ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರಲಿದ್ದು ಮೂರು ರಾಶಿಯವರ ಜೀವನದಲ್ಲಿ ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Aug 4, 2023, 08:09 AM IST
  • ಸೆಪ್ಟೆಂಬರ್‌ನಲ್ಲಿ ಶನಿಯ ನೇರ ಚಲನೆಯು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ.
  • ಆದರೆ, ಕೆಲವು ರಾಶಿಯವರಿಗೆ ಇದನ್ನು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
  • ಶನಿ ನೇರ ಚಲನೆಯಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ.
Shani Gochar 2023: ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಮಾರ್ಗಿ ಶನಿ  title=

Shani Margi: ನವಗ್ರಹಗಳಲ್ಲಿ ಅತಿ ನಿಧಾನವಾಗಿ ಚಲಿಸುವ ಗ್ರಹ ಎಂದರೆ ಶನಿ. ಸುಮಾರು ಎರಡೂವರೆ ವರ್ಷಗಳಲ್ಲಿ ಒಮ್ಮೆ ಶನಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಪ್ರಸ್ತುತ ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿರುವ ಶನಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು, ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ದೇವನು ಮುಂದಿನ ತಿಂಗಳು ಎಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ನೇರ ಚಲನೆ ಆರಂಭಿಸಲಿದ್ದಾನೆ. 

ಸೆಪ್ಟೆಂಬರ್‌ನಲ್ಲಿ ಶನಿಯ ನೇರ ಚಲನೆಯು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೆ, ಕೆಲವು ರಾಶಿಯವರಿಗೆ ಇದನ್ನು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಶನಿ ನೇರ ಚಲನೆಯಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ಇದರಿಂದಾಗಿ ಬಂಪರ್ ಲಾಭದ ಸಾಧ್ಯತೆ ಇದ್ದು ಹಣದ ಸುರಿಮಳೆಯೇ ಸುರಿಯಲಿದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- ವಾರದ ಈ ಮೂರು ದಿನ ಏಕೆ ಉಗುರು ಕತ್ತರಿಸಬಾರದು ಗೊತ್ತೇ!

ಸೆಪ್ಟೆಂಬರ್‌ನಲ್ಲಿ ಶನಿಯ ನೇರ ಚಲನೆ ಆರಂಭ: ಮೂರು ರಾಶಿಯವರಿಗೆ ಧನ ಯೋಗ 
ಮಿಥುನ ರಾಶಿ: 

ಸೆಪ್ಟೆಂಬರ್‌ನಲ್ಲಿ ಮಾರ್ಗಿಯಾಗಲಿರುವ ಶನಿದೇವನು ಮಿಥುನ ರಾಶಿಯವರ ಜೀವನದಲ್ಲಿ ಬಂಗಾರದ ಸಮಯವನ್ನು ತರಲಿದ್ದಾನೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಹಳೆಯ ಹೂಡಿಕೆಗಳಿಂದ ಭರ್ಜರಿ ಲಾಭವಾಗಲಿದೆ. ಮಾತ್ರವಲ್ಲ, ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ನಿಮ್ಮ ಹಣವೂ ಕೂಡ ಕೈಸೇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರಿಗೆ ಅತ್ಯುತ್ತಮ ಸಮಯ ಇದಾಗಿದೆ. 

ತುಲಾ ರಾಶಿ: 
ಶನಿ ನೇರ ಚಲನೆಯು ತುಲಾ ರಾಶಿಯವರಿಗೂ ಕೂಡ ಲಾಭದಾಯವಾಗಿದೆ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ದಂಪತಿಗಳಿಗೆ ಸಂತಾನ ಯೋಗವಿದೆ. ಉದ್ಯೋಗಸ್ಥರು ವೃತ್ತಿ ಜೀವನದಲ್ಲಿ ಭಾರೀ ಪ್ರಯೋಜನವನ್ನು ಪಡೆಯಲಿದ್ದಾರೆ. ಹೊಸ ವಾಹನ, ಭೂಮಿ ಖರೀದಿ ಯೋಗವೂ ಇದೆ. ಒಟ್ಟಾರೆಯಾಗಿ, ಈ ಸಮಯದಲ್ಲಿ ನೀವು ಐಷಾರಾಮಿ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ- Astro Tips: ಹಿಟ್ಟು ಕಲಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ಆ ಮನೆಯಲ್ಲಿ ಎಂದಿಗೂ ಕಾಡಲ್ಲ ಹಣದ ಕೊರತೆ

ಮಕರ ರಾಶಿ: 
ಮಕರ ರಾಶಿಯ ಅಧಿಪತಿಯೂ ಆಗಿರುವ ಶನಿ ದೇವನ ನೇರ ನಡೆಯು ಈ ರಾಶಿಯವರಿಗೆ ಧನ ಯೋಗವನ್ನು ತರಲಿದೆ. ಮಾರ್ಗಿ ಶನಿಯ ಪ್ರಭಾವದಿಂದಾಗಿ ದಿಢೀರ್ ಹಣಕಾಸಿನ ಲಾಭವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಬೇರೆಡೆ ಸಿಲುಕಿರುವ ಹಣವೂ ನಿಮ್ಮ ಕೈ ಸೇರಲಿದೆ. ಸ್ವಂತ ವ್ಯಾಪಾರ ಮಾಡುವವರಿಗೆ ಸಮಯ ಉತ್ತಮವಾಗಿದ್ದು ನಿರೀಕ್ಷೆಗಿಂತ ಹೆಚ್ಚಿನ ಲಾಭನ್ನು ಗಳಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News