Viral News: ಮಹಿಳೆಯ ಹೊಟ್ಟೆಯಲ್ಲಿ ಹೆಬ್ಬಾವಿನ ಆಕಾರದ 20 ಕೆಜಿ ಮಲ ಪತ್ತೆ..!

ಚೀನಾದ ಪೂರ್ವ ಪ್ರದೇಶದ ಝೆಜಿಯಾಂಗ್ ಯೂನಿವರ್ಸಿಟಿ ಫಸ್ಟ್ ಆಸ್ಪತ್ರೆಯಲ್ಲಿ ವೈದ್ಯರು ಹುವಾ ಎಂಬ 53 ವರ್ಷದ ಮಹಿಳೆಯ ದೇಹದಲ್ಲಿದ್ದ ಹೆಬ್ಬಾವಿನ ಆಕಾರದ ಭಾರೀ ಪ್ರಮಾಣದ ಮಲವನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.  

Written by - Puttaraj K Alur | Last Updated : Aug 14, 2023, 01:56 PM IST
  • ಚೀನಾದಲ್ಲಿ 10 ದಿನಗಳ ಕಾಲ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ
  • ಮಹಿಳೆಯ ಹೊಟ್ಟೆಯಿಂದ ಹೆಬ್ಬಾವಿನ ಆಕಾರದ 20 ಕೆಜಿ ಮಲ ಹೊರತೆಗೆದ ವೈದ್ಯರು
  • ಮಹಿಳೆಗೆ ಯಶಸ್ವಿಯಾಗಿ ಆಪರೇಷನ್ ಮಾಡಿ ಮಲ ತೆಗೆದು ನಿಟ್ಟುಸಿರು ಬಿಟ್ಟ ವೈದ್ಯರು
Viral News: ಮಹಿಳೆಯ ಹೊಟ್ಟೆಯಲ್ಲಿ ಹೆಬ್ಬಾವಿನ ಆಕಾರದ 20 ಕೆಜಿ ಮಲ ಪತ್ತೆ..! title=
20 ಕೆಜಿ ಮಲ ಹೊರತೆಗೆದ ವೈದ್ಯರು!

ನವದೆಹಲಿ: ಬದಲಾದ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಇಂದು ಅನೇಕರು ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ದೇಹದಲ್ಲಿ ನೀರಿನ ಕೊರತೆ, ದೈಹಿಕ ಪರಿಶ್ರಮದ ಕೊರತೆ, ಫೈಬರ್ ಭರಿತ ಆಹಾರದ ಕೊರತೆ, ಅನಿಯಮಿತ ದಿನಚರಿ ಮುಂತಾದ ಹಲವು ಮುಖ್ಯ ಕಾರಣಗಳಿಂದ ಮಲಬದ್ಧತೆ ಉಂಟಾಗುತ್ತದೆ.

ಕರುಳಿನ ಸ್ನಾಯುಗಳು ಕ್ರಮೇಣ ಸೋಂಕಿಗೆ ಒಳಗಾದಾಗ ಮಲಬದ್ಧತೆ ಸಮಸ್ಯೆ ಉದ್ಭವಿಸುತ್ತದೆ. ಅದರಂತೆ ಚೀನಾದಲ್ಲಿ ಮಹಿಳೆಯೊಬ್ಬರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯ ಪರಿಶೀಲಿಸಿದ ವೈದ್ಯರಿಗೆ ಶಾಕ್ ಉಂಟಾಗಿದೆ. ಯಾಕೆಂದರೆ ಶಸ್ತ್ರಚಿಕಿತ್ಸಕರನ್ನೇ ಬೆರಗುಗೊಳಿಸುವ ವೈದ್ಯಕೀಯ ಪ್ರರಕಣವೊಂದು ಪೂರ್ವ ಚೀನಾದಲ್ಲಿ ನಡೆದಿದೆ.

ಇದನ್ನೂ ಓದಿ: ʻಚಂದ್ರಯಾನ 3ʼ ಗೆ ʻಲೂನಾ 25ʼ ಪೈಪೋಟಿ, 47 ವರ್ಷಗಳ ನಂತರ ಮೊದಲ ಬಾರಿಗೆ ಚಂದ್ರನತ್ತ ರಷ್ಯಾ !

10 ದಿನಗಳ ಕಾಲ ಮಲಬದ್ಧತೆಯಿಂದ ಬಳಲುತ್ತಿದ್ದ ಮಹಿಳೆಯ ದೇಹದಿಂದ ವೈದ್ಯರು ಬರೋಬ್ಬರಿ 20 ಕೆಜಿ ತೂಕದ ಮಲವನ್ನು ಹೊರತೆಗೆದಿದ್ದಾರೆ. ಈ ಮಹಿಳೆಯ ಹೊಟ್ಟೆಯಲ್ಲಿ ಮಲ ಹೇಗೆ ಕಟ್ಟಿಕೊಂಡಿತ್ತು ಎಂದರೆ ಅದು ಹೆಬ್ಬಾವಿನ ಆಕಾರದಲ್ಲಿತ್ತು ಅಂತಾ ವೈದ್ಯರು ತಿಳಿಸಿದ್ದಾರೆ. ಇಷ್ಟು ಪ್ರಮಾಣದ ಮಲವನ್ನು ತೆಗೆಯುತ್ತಿದ್ದ ವೈದ್ಯರು ಮೊದಲು ಕನ್ಫೂಸ್ ಆಗಿದ್ದರು.

ಹುವಾ ಎಂಬ 53 ವರ್ಷದ ಮಹಿಳೆಯ ದೇಹದಲ್ಲಿದ್ದ ಹೆಬ್ಬಾವಿನ ಆಕಾರದ ಮಲವನ್ನು ಕಂಡು ಹೌಹಾರಿಬಿಟ್ಟಿದ್ದರಂತೆ. ಚೀನಾದ ಪೂರ್ವ ಪ್ರದೇಶದ ಝೆಜಿಯಾಂಗ್ ಯೂನಿವರ್ಸಿಟಿ ಫಸ್ಟ್ ಆಸ್ಪತ್ರೆಯಲ್ಲಿ ವೈದ್ಯರು ಈಕೆಯ ಕರುಳಿನಿಂದ ಭಾರೀ ಪ್ರಮಾಣದ ಮಲವನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.   

ಇದನ್ನೂ ಓದಿ: ಬಾಂಬ್ ಬೆದರಿಕೆಯ ನಂತರ ಐಫೆಲ್ ಟವರ್ ತೆರವು

ಹುವಾ ಅವರು ಹಿರ್ಷ್‍ಸ್ಟ್ರಂಗ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರಂತೆ. ಇದು ಕರುಳಿನ ನರಕೋಶಗಳ ಅಭಿವೃದ್ಧಿಯಾಗದ ಜನ್ಮಜಾತ ಅಸ್ವಸ್ಥೆಯಾಗಿದೆ ಎಂದು ಹೇಳಲಾಗಿದೆ. ಹುವಾರ ಹೊಟ್ಟೆಯಿಂದ 20 ಕೆಜಿ ಮಲ ತೆಗೆದ ವೈದ್ಯರ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News