ವರ ಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!!

Varamahalaxmi: ನೋಡಿದ ಕಡೆಯೆಲ್ಲ ಜನಜಾತ್ರೆ. ಜನ ಮರುಳೊ ಜಾತ್ರೆ ಮರುಳೊ ಎಂಬಂತಹ ಪರಿಸ್ಥಿತಿ.  ಇದು ಕೆ.ಆರ್.ಮಾರುಕಟ್ಟೆಯಲ್ಲಿ ಕಂಡು ಬಂದ ಇಂದಿನ ದೃಶ್ಯ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕೆ.ಆರ್.ಮಾರುಕಟ್ಟೆ ಇಂದು ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು.  ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು.

Written by - Yashaswini V | Last Updated : Aug 24, 2023, 06:32 PM IST
  • ವರ ಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!!
  • ಅನಿವಾರ್ಯ ಎಂದು ಅಗತ್ಯ ವಸ್ತು ಖರೀದಿ ಮಾಡಿದ ಜನ..!!
  • ಸಿಟಿ ಮಾರ್ಕೆಟ್ ನಲ್ಲಿ ಜನ ಜಂಗುಳಿ.. ವ್ಯಾಪರವೋ ವ್ಯಾಪಾರ.!!
ವರ ಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!! title=

Varamahalaxmi: ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿಗೆ ಯಾವ್ದಾದ್ರೂ ಹಬ್ಬ ಹರಿದಿನ ಬಂದ್ರೆ ಸಾಕು ಬಹುತೇಕ ಮಾರುಕಟ್ಟೆಯಲ್ಲಿ ಜನ ಸಾಗರವೇ ಹರಿದು ಬರುತ್ತೆ. ಅದ್ರಲ್ಲೂ ವರ ಮಹಾಲಕ್ಷ್ಮಿ ಹಬ್ಬ ಬಂತು ಅಂದ್ರೆ ಸಾಕು ಲಕ್ಷ್ಮಿಯನ್ನ ಆರಾದಿಸೋಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಕೊಳ್ಳಲು ಜನ ನಗರದ ಕೆಆರ್ ಮಾರುಕಟ್ಟೆಯನ್ನೇ ಆಯ್ಕೆ ಮಾಡಿಕೊಂಡು ಮುಂಜಾನೆಯೇ ಮುಗಿ ಬೀಳ್ತಾರೆ.‌ ಆದ್ರೆ ಬೆಲೆ ಏರಿಕೆಯ ನಡುವೆಯೂ ಹಬ್ಬ ಮಾಡೋಣ ಅಂತ ಬಂದ‌ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿಯೂ ಬಿದ್ದಾಗಿದೆ.

ಹೌದು... ನೋಡಿದ ಕಡೆಯೆಲ್ಲ ಜನಜಾತ್ರೆ. ಜನ ಮರುಳೊ ಜಾತ್ರೆ ಮರುಳೊ ಎಂಬಂತಹ ಪರಿಸ್ಥಿತಿ.  ಇದು ಕೆ.ಆರ್.ಮಾರುಕಟ್ಟೆಯಲ್ಲಿ ಕಂಡು ಬಂದ ಇಂದಿನ ದೃಶ್ಯ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕೆ.ಆರ್.ಮಾರುಕಟ್ಟೆ ಇಂದು ಅಕ್ಷರಶಃ ಜನಜಾತ್ರೆಯಾಗಿ ಮಾರ್ಪಟ್ಟಿತ್ತು.  ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ರು. 

ನಾಳೆ ವರ ಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ತಾಯಿ ಮಹಾಲಕ್ಷ್ಮಿಯನ್ನ ಆರಾಧಿಸೋಕೆ ಬೇಕಾದಂತಹ ಅಗತ್ಯವಸ್ತುಗಳನ್ನು ಕೊಳ್ಳಲು ನಾ ಮುಂದು, ತಾ ಮುಂದು ಅಂತ ಕಿಕ್ಕಿರಿದು ಬಂದಿದ್ರು.‌ ಕೆಆರ್ ಮಾರುಕಟ್ಟೆಯಲ್ಲಿ ಕೊಂಚ ಕಡಿಮೆ‌ ಬೆಲೆಯಲ್ಲಿ ವಸ್ತುಗಳು ಲಭ್ಯವಾಗ್ತವೆ‌ ಎಂದು ನಿರೀಕ್ಷೆಯಿಂದ ಬಂದ ಗ್ರಾಹಕರು ಕೂಡ ಶಾಕ್ ಆಗಿದ್ರು.  ಪ್ರತಿಯೊಂದು ವಸ್ತುಗಳ ಬೆಲೆ ಗಗನ ಮುಖಿಯಾಗಿದ್ದು, ಹೂ ಹಣ್ಣು, ಬಾಳೆ ದಿಂಡು, ಸೇರಿದಂತೆ ಹಬ್ಬಕ್ಕೆ ಬೇಕಿದ್ದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಇದೇ ರೀತಿ ಮುಂದುವರೆದ್ರೆ ಜನಸಾಮಾನ್ಯರು ಬದುಕೋದೆ ಕಷ್ಟ ಎಂದು ಬೇಸರವನ್ನ ವ್ಯಕ್ತಪಡಿಸಿದ್ರು.‌

ಇದನ್ನೂ ಓದಿ- ಬ್ಯಾಂಕ್ ಸಾಲ ಪಾವತಿಸದಿದ್ದಲ್ಲಿ ದಂಡ ವಿಧಿಸುವಂತಿಲ್ಲ! ಆರ್‌ಬಿಐ ಹೊಸ ನಿಯಮ

ದುಬಾರಿ ದುನಿಯಾದಲ್ಲಿ ಹೂ ಗಳ ಬೆಲೆ ನೋಡೋದಾದ್ರೆ:- 
* ಮಾರು ಸೇವಂತಿಗೆ 140 ರೂಪಾಯಿ 
* ಸೇವಂತಿಗೆ ಹಾರ 1000 - 1500 ರೂಪಾಯಿ
* ರೋಸ್ ಹಾರ - 700 ರೂಪಾಯಿ 
* ಜೋಡಿ ಕಮಲ - 70 - 100 ರೂಪಾಯಿ
* ಮಲ್ಲಿಗೆ ಹೂವಿನ ಹಾರ 1 ಕ್ಕೆ - 400 ರೂಪಾಯಿ 
* ಕನಕಾಂಬರ ಹೂವು ಮಾರು - 500-700ರೂಪಾಯಿ 
* ಕನಕಾಂಬರ- ಕೆಜಿಗೆ 1,200 -1,500 ರೂಪಾಯಿ 
* ಮಲ್ಲಿಗೆ ಕೆಜಿಗೆ 600 -800 ರೂಪಾಯಿ
 
ಹಬ್ಬಕ್ಕೆ ಗಗನಕ್ಕೇರಿದ ಹಣ್ಣುಗಳ ಬೆಲೆ: 
>> ಏಲಕ್ಕಿ ಬಾಳೆ ಪ್ರತಿ ಕೆಜಿಗೆ -120 ರಿಂದ 140 ರೂಪಾಯಿ 
>> ಸೇಬು ಕೆ.ಜಿ-200-300 ರೂಪಾಯಿ 
>> ಕಿತ್ತಳೆ ಕೆ.ಜಿ -150 ರಿಂದ 200 ರೂಪಾಯಿ 
>> ದ್ರಾಕ್ಷಿ ಕೆ.ಜಿ -180-200 ರೂಪಾಯಿ 
>> ಪೈನಾಪಲ್ ಒಂದಕ್ಕೆ -80 ರೂಪಾಯಿ 
>> ದಾಳಿಂಬೆ ಕೆಜಿಗೆ -150-200 ರೂಪಾಯಿ 

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಸಿಗಲಿದೆ ಭರ್ಜರಿ ಬೋನಸ್, ಜೊತೆಗೆ ವೇತನದಲ್ಲಿಯೂ ಹೆಚ್ಚಳ

ಇತರೆ ವಸ್ತುಗಳ ಬೆಲೆ:- 
* ಬಾಳೆ ಕಂಬ ಜೋಡಿಗೆ  -50 ರೂಪಾಯಿ 
* ಮಾವಿನ ತೋರಣ - 20 ರೂಪಾಯಿ
* ವಿಳ್ಯದೆಲೆ 100 ಎಲೆಗೆ - 150 ರೂಪಾಯಿ
* ತೆಂಗಿನಕಾಯಿ 3ಕ್ಕೆ - 100 ರೂಪಾಯಿ

ಇತ್ತ ಮಾರುಕಟ್ಟೆ ವ್ಯಾಪಾರಿಗಳನ್ನ ಕೇಳಿದ್ರೆ ಅವರದ್ದು ಅದೇ ಹಳೆ ವರಸೆಯಾಗಿತ್ತು. ಏನ್ ಮಾಡೋಣ ಸರ್, ನಮಗೆ ಸಿಗೋದು ದುಬಾರಿ ಬೆಲೆಗೆನೇ, ಹೀಗಾಗಿ ಹೂ, ಹಣ್ಣು, ಸೇರಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಲೇಬೇಕು ಅಂತ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ರು.

ಒಟ್ಟಾರೆ... ತನ್ನ ಮನೆಗೆ ಮಹಾಲಕ್ಷ್ಮಿ ತಂದು ಕೂರಿಸಿ ಬಿಡೋಣ ಅದಕ್ಕಂತ ಒಳ್ಳೆ ಅಲಂಕಾರದ ನಿರೀಕ್ಷೆಯಲ್ಲಿದ್ದ ಮಹಿಳೆಯರ ಕಿಸೆ ಕಾಲಿಯಾಗಿದೆ. ಆದ್ರೆ ಬೇಕಾಗಿರೋ ವಸ್ತುಗಳು ಖರೀದಿಗೆ ಮಾತ್ರ ಬೇಕಿರುವಷ್ಟು ಹಣವೂ ಇಲ್ಲ, ಇತ್ತ ತಂದಿದ್ಧಷ್ಟು ಹಣಕ್ಕೆ ತಕ್ಕಂತೆ ಎಲ್ಲಾ ವಸ್ತುಗಳು ಸಿಗದೆ ತಲೆ ಮೇಲೆ ಕೈ ಹೊತ್ತು ಸಾಗಿದ್ದಾರೆ. ಜೊತೆಗೆ ಹಿಂಗೇ ಆದ್ರೆ ಜನ ಸಾಮಾನ್ಯರ ಬದುಕು ಹೇಗೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.‌ ಇತ್ತ ಹಬ್ಬ ಹರಿದಿನಗಳಲ್ಲಾದ್ರೂ ಬೆಲೆ ಕೊಂಚ ಕಡಿಮೆ‌ ಇರುತ್ತೆ ಅದ್ದೂರಿಯಾಗಿ ಹಬ್ಬ ಆಚರಿಸೋಣ ಅಂತ ಅಂದುಕೊಂಡ ಲಕ್ಷ್ಮಿ ಆರಾಧಕರಿಗೆ ಬೆಲೆ ಏರಿಕೆ ಬೇಸರ ತರಿಸಿರೋದಂತು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News