Video: ತಣ್ಣನೆ ಗಾಳಿ ಬದಲು ನೀರು ಸುರಿದಾಗ, ರೈಲಿನ ಎಸಿ ಕೋಚ್ ಆಯ್ತು ಸ್ವಿಮ್ಮಿಂಗ್ ಪೂಲ್

ಈ ಘಟನೆಯಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ರೈಲಿನಲ್ಲಿ ದೂರದೂರಿಗೆ ಪ್ರಯಾಣ ಮಾಡುವ ವೇಳೆ ಎಸಿ ಕೋಚ್ ಅನ್ನು ಬಹಳ ಅನುಕೂಲಕರ ಕೋಚ್ ಎಂದು ಪರಿಗಣಿಸಲಾಗುತ್ತದೆ. ಈ ವಿಡಿಯೋ ಹೊರಬಂದ ನಂತರ ಜನರು ಭಾರತೀಯ ರೈಲ್ವೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

Last Updated : Jul 2, 2019, 03:53 PM IST
Video: ತಣ್ಣನೆ ಗಾಳಿ ಬದಲು ನೀರು ಸುರಿದಾಗ, ರೈಲಿನ ಎಸಿ ಕೋಚ್ ಆಯ್ತು ಸ್ವಿಮ್ಮಿಂಗ್ ಪೂಲ್ title=
Pic Courtesy: Twitter

ನವದೆಹಲಿ: ಒಂದೆಡೆ, ಮಳೆಯಿಂದಾಗಿ ಇಡೀ ವಾಣಿಜ್ಯ ನಗರಿ ಮುಂಬೈ ಕೆರೆಯಂತಾಗಿದೆ. ಎಲ್ಲೆಡೆ ಮುಂಬೈನ ಬ್ಯಾರಿಕೇಡ್‌ಗಳ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮತ್ತೊಂದೆಡೆ ಭಾರತೀಯ ರೈಲ್ವೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ, ಈ ವೀಡಿಯೊ ಸಂಗಮಿತ್ರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಎ 1 ಕೋಚ್‌ಗೆ ಸೇರಿದ್ದು. ಅಲ್ಲಿ ಕೋಚ್‌ನಲ್ಲಿದ್ದ ಎಸಿ ಆನ್ ಮಾಡಿದಾಗ ತಣ್ಣನೆ ಗಾಳಿ ಬರುವ ಬದಲು ನೀರು ಸುರಿಯಲು ಪ್ರಾರಂಭಿಸಿತು.  ಈ ಇಡೀ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಎಸಿಯಿಂದ ನೀರು ಹರಿಯುತ್ತಿದ್ದಂತೆ ಪ್ರಯಾಣಿಕರು ತಕ್ಷಣ ಸೀಟನ್ನು ಬಿಟ್ಟು ಓಡಿಹೋದರು. ಇಡೀ ಕೋಚ್ ಸ್ವಿಮಿಂಗ್ ಪೂಲ್ ನಂತಾಯಿತು. ಸೋಷಿಯಲ್ ಮೀಡಿಯಾದಲ್ಲಿ ಈ ಇಡೀ ಘಟನೆಯ ವಿಡಿಯೋ ಕೂಡ ವೈರಲ್ ಆಗುತ್ತಿದೆ, ಇದನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ರೈಲಿನಲ್ಲಿ ದೂರದೂರಿಗೆ ಪ್ರಯಾಣ ಮಾಡುವ ವೇಳೆ ಎಸಿ ಕೋಚ್ ಅನ್ನು ಬಹಳ ಅನುಕೂಲಕರ ಕೋಚ್ ಎಂದು ಪರಿಗಣಿಸಲಾಗುತ್ತದೆ. ಈ ವಿಡಿಯೋ ಹೊರಬಂದ ನಂತರ ಜನರು ಭಾರತೀಯ ರೈಲ್ವೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಈ ವೀಡಿಯೊವನ್ನು ಜೂನ್ 29 ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ನಂತರ ಅದು ಈಗ ಇಡೀ ಸಾಮಾಜಿಕ ಮಾಧ್ಯಮಗಳಿಗೆ ಹರಡಿತು. ಎಸಿಯಿಂದ ನೀರು ಹರಿಯುತ್ತಿರುವುದು, ಕೋಚ್‌ನಲ್ಲಿ ಪ್ರಯಾಣಿಕರ ಪರದಾಟ, ಪ್ರಯಾಣಿಕರ ಸಾಮಾನುಗಳು ನೀರಿನಲ್ಲಿ ಮಿಂದಿರುವುದು ಎಲ್ಲವನ್ನೂ ವೈರಲ್ ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಈ ವಿಡಿಯೋ ನೋಡಿದ ಜನರು ಭಾರತೀಯ ರೈಲ್ವೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಪ್ರಶ್ನೆ ಎತ್ತುತ್ತಿದ್ದಾರೆ.
 

Trending News